ಬೆಂಗಳೂರು: ಮಹಾ ಶಿವರಾತ್ರಿ ಅಂಗವಾಗಿ ಬೆಂಗಳೂರಿನ ಗಿರಿನಗರದ ವಾಸವಿ ದೇವಸ್ಥಾನದಲ್ಲಿ ಜಲಕಂಠೇಶ್ವರ ಸಹಿತ ಅಷ್ಟೋತ್ತರ ಲಿಂಗ ಪ್ರತಿಷ್ಠಾಪನೆ ಮಾಡುವ ಮೂಲಕ ವಿಭಿನ್ನವಾಗಿ ಶಿವರಾತ್ರಿ ಆಚರಿಸಲಾಯಿತು.
ಗಿರಿನಗರದ ವಾಸವಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮಹಾ ಶಿವರಾತ್ರಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದ್ದು,ಈ ಬಾರಿ ಜಲಕಂಠೇಶ್ವರ ಸಹಿತ ಅಷ್ಟೋತ್ತರ ಲಿಂಗ ದರ್ಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಗಿರಿನಗರದ ನಿವಾಸಿಯಾಗಿರುವ ವೆಂಕಟೇಶ್ ಎಂಬುವರು ಕಳೆದ 12 ವರ್ಷಗಳಿಂದ ವಿಭಿನ್ನ ರೂಪಗಳಲ್ಲಿ ಶಿವನ ಪ್ರತಿರೂಪಗಳನ್ನು ಪ್ರತಿಷ್ಠಾಪಿಸುತ್ತ ಬಂದಿದ್ದಾರೆ. ಈ ಬಾರಿಯ ಶಿವನ ಮೂರ್ತಿ ನಿರ್ಮಿಸಲು ಸುಮಾರು 350 ಕೆಜಿ ಮೇಣವನ್ನು ಬಳಸಲಾಗಿದೆ. 108 ಲಿಂಗಗಳನ್ನು ತಲಾ 350 ಗ್ರಾಂ ಮೇಣ ಬಳಸಿ ತಯಾರಿಸಲಾಗಿದೆ ಎಂದು ತಿಳಿಸಿದರು.