ETV Bharat / state

3&1..ಗಮನ ಸೆಳೆಯುತ್ತಿದೆ ಜನೋತ್ಸವ ಕಾರ್ಯಕ್ರಮದ ಲೋಗೋ ವಿನ್ಯಾಸ..! - Special logo unveiling for Janotsava program

ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಆಯೋಜಿಸಿರುವ ಜನೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಲೋಗೋ ವಿನ್ಯಾಸ ಮಾಡಲಾಗಿದೆ. ಬಿಜೆಪಿ ಸರ್ಕಾರ ಮೂರು ವರ್ಷ ಮತ್ತು ಬೊಮ್ಮಾಯಿಯವರ 1 ವರ್ಷದ ಆಡಳಿತವನ್ನು ಪ್ರತಿನಿಧಿಸುವ ರೀತಿಯಲ್ಲಿ ಜನೋತ್ಸವ ಕಾರ್ಯಕ್ರಮದ ಲೋಗೊವನ್ನು ವಿನ್ಯಾಸ ಮಾಡಲಾಗಿದೆ.

special-logo-unveiling-for-janotsava-program
3&1..ಗಮನ ಸೆಳೆಯುತ್ತಿದೆ ಜನೋತ್ಸವ ಕಾರ್ಯಕ್ರಮದ ಲೋಗೋ ವಿನ್ಯಾಸ..!
author img

By

Published : Jul 26, 2022, 3:50 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸುತ್ತಿರುವ ನಿಮಿತ್ತ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿರುವ ಜನೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಲೋಗೋ ಸಿದ್ದಪಡಿಸಲಾಗಿದೆ. ಬಿಜೆಪಿ ಸರ್ಕಾರ ಮೂರು ವರ್ಷ ಪೂರ್ಣಗೊಳಿಸುತ್ತಿರುವ ಮತ್ತು ಬೊಮ್ಮಾಯಿ‌ ಒಂದು ವರ್ಷದ ಅವಧಿ ಪೂರೈಸುತ್ತಿರುವ ಎರಡು ವಿಷಯಗಳನ್ನು ಸೂಚಕವಾಗಿಸುವ ರೀತಿಯಲ್ಲಿ ಕಾರ್ಯಕ್ರಮದ ಲೋಗೋ ವಿನ್ಯಾಸಗೊಳಿಸಲಾಗಿದೆ.

ಜುಲೈ 28ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ ಎಂಬ ಶಿರ್ಷಿಕೆಯಲ್ಲಿ ಕಾರ್ಯಕ್ರಮ ಮಾಡಲು ಸರ್ಕಾರ ಸಜ್ಜಾಗಿದೆ. ದೊಡ್ಡಬಳ್ಳಾಪುರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಜನೋತ್ಸವದ ಕಾರ್ಯಕ್ರಮಕ್ಕಾಗಿ 3 ಮತ್ತು 1 ಎರಡೂ ಸಂಖ್ಯೆ ಇರುವ ಮಾದರಿಯಲ್ಲಿ ಲೋಗೋ ವಿನ್ಯಾಸ ಮಾಡಲಾಗಿದೆ.

3 ಅಂದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಯಿತು.1 ಅಂದರೆ ಬೊಮ್ಮಾಯಿ‌ ಸಿಎಂ ಆಗಿ ಒಂದು ವರ್ಷ ಆಯಿತು ಎನ್ನುವ ಅರ್ಥದಲ್ಲಿ ಲೋಗೋ ವಿನ್ಯಾಸ ಮಾಡಲಾಗಿದೆ. ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ , ಇದು ನಮ್ಮ ಸಂಕಲ್ಪ ಎಂಬ ಟ್ಯಾಗ್ ಲೈನ್​ನ್ನು ಲೋಗೋ ಹೊಂದಿದ್ದು, ಇದೇ ಹೆಸರಿನಲ್ಲೇ ಒಂದು ವರ್ಷದ ಸಾಧನಾ ಪುಸ್ತಕ ಕೂಡ ಬಿಡುಗಡೆಯಾಗಲಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ಓದಿ : ತಾಕತ್​ ಇದ್ರೆ ನನ್ನ ಪ್ರಕರಣ ಕೋರ್ಟ್​ಗೆ ತೆಗೆದುಕೊಂಡು ಹೋಗಿ, ಗೆದ್ದು ಬರಲಿ: ಈಶ್ವರಪ್ಪ ಸವಾಲು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.