ETV Bharat / state

ಕೊರೊನಾ ನಡುವೆಯೂ ಕಳೆಕಟ್ಟಿದ ದಸರಾ: ದೇವರ ಕಥೆಗಳನ್ನ ಸಾರುತ್ತಿವೆ ದಸರಾ ಗೊಂಬೆಗಳು

ನವರಾತ್ರಿಯ ಒಂಬತ್ತು ದಿನವೂ ಮನೆಗಳಲ್ಲಿ ವಿವಿಧ ಬೊಂಬೆಗಳನ್ನು ಸಾಲಾಂಕೃತವಾಗಿ ಜೋಡಿಸಿ, ಪೂಜಿಸಿ ಪ್ರದರ್ಶಿಸಲಾಗುತ್ತದೆ. ಕೇವಲ ಮೈಸೂರಿನಲ್ಲಷ್ಟೇ ಅಲ್ಲದೆ ಸಿಲಿಕಾನ್ ಸಿಟಿ ಮಂದಿ ಕೂಡ ಗೊಂಬೆ ಕೂರಿಸುವ ಸಂಪ್ರದಾಯವನ್ನು ತಮ್ಮದಾಗಿಸಿಕೊಂಡಿದ್ದಾರೆ.

ದೇವರ ಕಥೆಗಳನ್ನ ಸಾರುತ್ತಿರುವ ದಸರಾ ಗೊಂಬೆಗಳು
ದೇವರ ಕಥೆಗಳನ್ನ ಸಾರುತ್ತಿರುವ ದಸರಾ ಗೊಂಬೆಗಳು
author img

By

Published : Oct 12, 2021, 9:01 PM IST

ಬೆಂಗಳೂರು: ದಸರಾ ಹಬ್ಬ ಬಂದರೆ ಸಾಕು ಮೈಸೂರು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಅದ್ದೂರಿಯಾಗಿ ಹಬ್ಬವನ್ನು ಆಚರಿಸಲಾಗುತ್ತದೆ. ಇನ್ನು ಸಿಲಿಕಾನ್ ಸಿಟಿಯ ಮನೆ ಮನೆಗಳಲ್ಲು ಈಗಾಗಲೇ ಗೊಂಬೆಗಳು ಮಿನುಗುತ್ತದೆ. ಕಳೆದ ಬಾರಿ ಕೊರೊನಾ ಇದ್ದ ಕಾರಣ ಮೈಸೂರು‌‌ ಜಿಲ್ಲೆ ಸೇರಿದಂತೆ ನಾಡಿನಾದ್ಯಂತ ಸರಳವಾಗಿ ದಸರಾ ಹಬ್ಬವನ್ನ ಆಚರಿಸಲಾಯಿತು.

ಈ ಬಾರಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಬಹುತೇಕ ಜನರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಹೀಗಾಗಿ ದಸರಾವನ್ನ ಅದ್ದೂರಿಯಾಗಿ ಆಚರಿಸಲಾಗಿದ್ದು, ಸಿಲಿಕಾನ್​ ಸಿಟಿಯಲ್ಲಿ ಬೊಂಬೆಗಳು ಮನೆಗೆ ಕಳೆಕಟ್ಟಿ, ಮನಸ್ಸಿಗೂ ಮುದ ನೀಡುವುದಲ್ಲದೇ, ದಸರಾ ಹಬ್ಬಕ್ಕೂ ಮೆರಗು ತಂದಿವೆ.

ದೇವರ ಕಥೆಗಳನ್ನ ಸಾರುತ್ತಿರುವ ದಸರಾ ಗೊಂಬೆಗಳು

ಜಗವೇ ಒಂದು ಬೊಂಬೆಯಾಟ ವಿಧಿ ಅದರ ಸೂತ್ರಧಾರ. ಅವನಾಡಿಸಿದಂತೆ ನಾವಾಡುವೆವಯ್ಯಾ ಎಂಬುವುದು ಜನಜನಿತ ಮಾತು. ಅದಕ್ಕಾಗಿಯೇ ಮೈಸೂರನ್ನಾಳಿದ ರಾಜ ಒಡೆಯರು ತಮ್ಮ ಆರಾಧನೆಯಲ್ಲಿ ಗೊಂಬೆಗೂ ಒಂದು ಮಹತ್ವದ ಸ್ಥಾನ ನೀಡಿ ನಾಡಹಬ್ಬ ನವರಾತ್ರಿಯಲ್ಲಿ ದಸರಾ ಮೆರವಣಿಗೆಯಂತೆಯೇ ಬೊಂಬೆಗಳಿಗೂ ವಿಶೇಷ ಸ್ಥಾನ ಕಲ್ಪಿಸಿದ್ದಾರೆ.

ನವರಾತ್ರಿಯ ಒಂಬತ್ತು ದಿನವೂ ನಿತ್ಯ ಪೂಜೆ

ನವರಾತ್ರಿಯ ಒಂಬತ್ತು ದಿನವೂ ಮನೆಗಳಲ್ಲಿ ವಿವಿಧ ಬೊಂಬೆಗಳನ್ನು ಸಾಲಾಂಕೃತವಾಗಿ ಜೋಡಿಸಿ, ಪೂಜಿಸಿ ಪ್ರದರ್ಶಿಸಲಾಗುತ್ತದೆ. ಕೇವಲ ಮೈಸೂರಿನಲ್ಲಷ್ಟೆ ಅಲ್ಲದೆ ಸಿಲಿಕಾನ್ ಸಿಟಿ ಮಂದಿ ಕೂಡ ಗೊಂಬೆ ಕೂರಿಸುವ ಸಂಪ್ರದಾಯವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಏನುಂಟು ಏನಿಲ್ಲ

ದಸರಾ ಹಬ್ಬಕ್ಕೆ ಮರದ ಗೊಂಬೆಗಳು, ಪಳನಿಯ ಆರ್ಪಡಿ ಮುರುಗ, ದಕ್ಷಿಣ ಭಾರತ ಶೈಲಿಯ ಮದುವೆ, ಹಳ್ಳಿ ಸೊಗಡು, ಕೃಷ್ಣನ ವಿಶ್ವರೂಪ ಮತ್ತು ಜನ್ಮಾವಧಿ, ದಶಾವತಾರ, ಗಜೇಂದ್ರ ಮೋಕ್ಷ, ಶಬರಿಮಲೈನ ಅಯ್ಯಪ್ಪ ದೇವಸ್ಥಾನ, ಉಗ್ರ ನರಸಿಂಹ ಹೀಗೆ ನೂರಾರು ಗೊಂಬೆಗಳನ್ನು ನಗರದ ಅಂಬಿಕಾ ಎಂಬುವರ ಮನೆಯಲ್ಲಿ ಕೂರಿಸಲಾಗಿದೆ.

ಇನ್ನು ಹೆಣ್ಣು ನೋಡಿವ ಶಾಸ್ತ್ರ, ನಿಶ್ಚಿತಾರ್ಥ, ಮದುವೆ, ಆರತಕ್ಷತೆ, ಸೀಮಂತ ಮತ್ತು ಮಗುವಿನ ಜವಳ ಶಾಸ್ತ್ರ, ಹಳ್ಳಿ ಜೀವನ, ಜಾತ್ರೆ, ಹಳ್ಳಿ ಮದುವೆ ಹೀಗೆ ನಾನಾ ರೀತಿಯ ಗೊಂಬೆಗಳು ಈ ಬಾರಿಯ ವಿಶೇಷ ಥೀಮ್ ಆಗಿತ್ತು.

ಮನಸೆಳೆದ ಮೈಸೂರು ಮೆರವಣಿಗೆ

ಇನ್ನು ಇಷ್ಟೆ ಅಲ್ಲದೆ ಅಷ್ಟ ಲಕ್ಷ್ಮಿ, ವೆಂಕಟೇಶ್ವರ, ಸಿಲಿಕಾನ್ ಸಿಟಿಯ ಪಾರ್ಕ್, ಕಾಡು, ಮೈಸೂರು ಮೆರವಣಿಗೆ ಹೀಗೆ ಹಲವಾರು ಆಕರ್ಷಕ ಗೊಂಬೆಗಳನ್ನು ಕೂಡ ಜೋಡಿಸಲಾಗಿತ್ತು. ಪ್ರತೀ ಬಾರಿ ದಸರಾ ಹಬ್ಬಕ್ಕೆ ಹಳೆಯ ಗೊಂಬೆಗಳ ಜೊತೆಗೆ ಹೊಸ ರೀತಿ ಗೊಂಬೆಗಳು ಕೂಡ ಸೇರ್ಪಡೆಯಾಗುತ್ತೆ. ಇನ್ನು ಒಂಬತ್ತು ದಿನಗಳ ಕಾಲವೂ ವಿವಿಧ ಆಚರಣೆಗಳು ನಡೆಯುತ್ತವೆ.

ಒಂಬತ್ತು ದಿನಗಳವರೆಗೂ ಗೊಂಬೆಗಳನ್ನು ಇಡಲಾಗುತ್ತೆ. ಇವರ ಮನೆಯಲ್ಲಿ ಕೂರಿಸಿರುವ ಗೊಂಬೆಗಳು ಪೌರಾಣಿಕ ಹಾಗೂ ದೇವರ ಕಥೆಗಳನ್ನು ಹೇಳುತ್ತಿದ್ದು, ವಿಶಿಷ್ಟ ಮತ್ತು ವಿಭಿನ್ನವಾಗಿವೆ. ಒಟ್ಟಾರೆ ಮನೆ ಮಂದಿ ಎಲ್ಲರೂ ಸೇರಿ ಸಂಭ್ರಮದಿಂದ ಗೊಂಬೆ ಕೂರಿಸಿ ಸಂಭ್ರಮಿಸುತ್ತಾರೆ. ಇದು ಮನೆಗೊಂದು ಶೋಭೆ ತರುವುದಲ್ಲದೆ, ಮನಸ್ಸಿಗೂ ಹಿತ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.