ETV Bharat / state

ಹಣ್ಣು, ತರಕಾರಿ, ಹೂಗಳ ವಿಶೇಷ ಶೃಂಗಾರದಲ್ಲಿ ಬೆಂಗಳೂರಿನ ಶ್ರೀ ಸತ್ಯ ಗಣಪತಿ - ಈಟಿವಿ ಭಾರತ್​ ಕನ್ನಡ

ಗಣೇಶ ಚತುರ್ಥಿಯ ಪ್ರಯುಕ್ತ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ 10 ಬಗೆಯ ಹಣ್ಣು, ತರಕಾರಿ, ಹೂವುಗಳನ್ನು ಬಳಸಿ ವಿಶೇಷ ಆಲಂಕಾರ ಮಾಡಲಾಗಿದೆ.

special-decoration
ವಿಶೇಷ ಶೃಂಗಾರದಲ್ಲಿ ಬೆಂಗಳೂರಿನ ಶ್ರೀ ಸತ್ಯ ಗಣಪತಿ
author img

By

Published : Aug 31, 2022, 1:57 PM IST

ಬೆಂಗಳೂರು : ಗಣೇಶ ಚತುರ್ಥಿಯ ಪ್ರಯುಕ್ತ ಸಿಲಿಕಾನ್ ಸಿಟಿಯ ಜೆಪಿ ನಗರದ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಹತ್ತಕ್ಕೂ ಹೆಚ್ಚು ಬಗೆಯ ಹಣ್ಣು ಹಂಪಲುಗಳಿಂದ ಅಲಂಕಾರ ಮಾಡಲಾಗಿದೆ. ಮುಸುಕಿನ ಜೋಳ, ಸೊಪ್ಪು, ಹೂವು ಹಣ್ಣುಗಳನ್ನು ಬಳಸಿಕೊಂಡು ವಿಶೇಷ ಆಲಂಕಾರವನ್ನು ಮಾಡಲಾಗಿದೆ.

ಪ್ರತಿ ಬಾರಿಯೂ ವಿಶೇಷ ಆಲಂಕಾರ ಹಾಗೂ ವಿಶೇಷ ಸಾಮಗ್ರಿಗಳನ್ನು ಬಳಸಿಕೊಂಡು ಗಣೇಶ ಮೂರ್ತಿಯನ್ನು ತಯಾರಿಸುವ ಮೂಲಕ ದೇಶದ ಗಮನವನ್ನು ಈ ದೇವಸ್ಥಾನ ಸೆಳೆಯುತ್ತಿತ್ತು. ಈ ಬಾರಿ ಕರೋನಾ ಮಹಾಮಾರಿ ಕಡಿಮೆ ಆಗಿರುವ ನಿಟ್ಟಿನಲ್ಲಿ ವಿಶೇಷ ಆಲಂಕಾರವನ್ನು ಏರ್ಪಡಿಸಲಾಗಿದೆ. ಪ್ರತ್ಯೇಕವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸದೇ ದೇವಸ್ಥಾನದಲ್ಲಿ ಇರುವ ಮೂರ್ತಿಗೆ ಮಾಡಿರುವ ವಿಶೇಷ ಆಲಂಕಾರ ಗಮನ ಸೆಳೆಯುತ್ತಿದೆ.

ಹಣ್ಣು, ತರಕಾರಿ, ಹೂಗಳ ವಿಶೇಷ ಶೃಂಗಾರದಲ್ಲಿ ಬೆಂಗಳೂರಿನ ಶ್ರೀ ಸತ್ಯ ಗಣಪತಿ

ಸೀಬೆಕಾಯಿ, ಕಲ್ಲಂಗಡಿ, ಡ್ರಾಗನ್‌ ಫ್ರೂಟ್‌, ದಾಳಿಂಬೆ, ಟೊಮೆಟೋ, ಕ್ಯಾರೆಟ್​ ಹೀಗೆ ವಿವಿಧ ಹಣ್ಣು ತರಕಾರಿಗಳಿಂದ ಶೃಂಗರಿಸಲಾಗಿದೆ. ಅಲಂಕಾರದಲ್ಲಿ ಮುಸುಕಿನ ಜೋಳ, ತರಹೇವಾರಿ ಹೂವುಗಳು ಹಾಗೂ ಸೊಪ್ಪುಗಳನ್ನು ಬಳಸಿಕೊಳ್ಳಲಾಗಿದೆ ಎಂದು ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್‌ನ ಟ್ರಸ್ಟಿ ರಾಮ್ ಮೋಹನ ರಾಜ್ ಅವರು ಮಾಹಿತಿ ನೀಡಿದರು.

ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿಯಿಂದ 10 ಸಾವಿರ ಮಣ್ಣಿನ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ಟ್ರಸ್ಟ್‌ ವತಿಯಿಂದ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : ಗಣೇಶ ಚತುರ್ಥಿ 2022: ಈ ಐದು ವಿಶಿಷ್ಟ ಗಣಪ ಮೂರ್ತಿಗಳ ಬಗ್ಗೆ ನಿಮಗೆಷ್ಟು ಗೊತ್ತು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.