ETV Bharat / state

ಪ್ರಜಾ ಧ್ವನಿ ಯಾತ್ರೆ: ಸಿದ್ದರಾಮಯ್ಯ ಸಹಕಾರಕ್ಕೆ ವಿಶೇಷ ಸಮನ್ವಯ ಸಮಿತಿ ರಚನೆ - bharat jodo yatre

35 ಸದಸ್ಯರ ಸಮನ್ವಯ ಸಮಿತಿ ರಚನೆ - ಭಾರತ್​ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಡಿ.ಕೆ.ಶಿವಕುಮಾರ್​.

special-coordination-committee-for-cooperation-of-siddaramaiah
ಪ್ರಜಾ ಧ್ವನಿ ಯಾತ್ರೆ: ಸಿದ್ದರಾಮಯ್ಯ ಸಹಕಾರಕ್ಕೆ ವಿಶೇಷ ಸಮನ್ವಯ ಸಮಿತಿ ರಚನೆ
author img

By

Published : Jan 29, 2023, 4:46 PM IST

ಬೆಂಗಳೂರು: ವಿಧಾನಸಭೆ ಕ್ಷೇತ್ರವಾರು ರಾಜ್ಯ ಕಾಂಗ್ರೆಸ್ ನಾಯಕರು ಹಮ್ಮಿಕೊಂಡಿರುವ ಪ್ರಜಾ ಧ್ವನಿ ಯಾತ್ರೆ ಸಂದರ್ಭ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕರಿಗೆ ಸಹಕರಿಸಲು ವಿಶೇಷ ಸಮನ್ವಯ ಸಮಿತಿ ರಚಿಸಲಾಗಿದೆ.

ಈ ಸಮನ್ವಯ ಸಮಿತಿಗೆ ಅಧ್ಯಕ್ಷರಾಗಿ ಬಸವರಾಜ ರಾಯರೆಡ್ಡಿ ನಿಯೋಜಿತರಾಗಿದ್ದರೆ. ಸಮನ್ವಯಕಾರರಾಗಿ ಪ್ರಕಾಶ್ ಕೆ ರಾಥೋಡ್ ನೇಮಕಗೊಂಡಿದ್ದಾರೆ. ಉಳಿದಂತೆ ಸಮಿತಿಯಲ್ಲಿ 35 ಸದಸ್ಯರಿದ್ದು ಇವರಲ್ಲಿ ಪ್ರಮುಖವಾಗಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಚ್ ಕೆ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ.

ಡಿಕೆಶಿ ಪ್ರವಾಸ
ಡಿಕೆಶಿ ಪ್ರವಾಸ

ನಾಯಕರದ ಅಲ್ಲಮ ವೀರಭದ್ರಪ್ಪ, ಎಸ್ಆರ್ ಪಾಟೀಲ್, ಎನ್​ಎಸ್ ಬೋಸರಾಜ್, ಜಮೀರ್ ಅಹಮದ್, ಎಚ್ ಸಿ ಮಹದೇವಪ್ಪ, ಆರ್​ಬಿ ತಿಮ್ಮಾಪುರ್, ವಿನಯ್ ಕುಲಕರ್ಣಿ, ಪ್ರಿಯಾಂಕ ಖರ್ಗೆ, ವಿಎಸ್ ಉಗ್ರಪ್ಪ, ಕೆ ಬಿ ಕೋಳಿವಾಡ, ಶರಣಪ್ರಕಾಶ್ ಪಾಟೀಲ್, ಸಂತೋಷ್ ಲಾಡ್, ಶಿವಾನಂದ ಪಾಟೀಲ್, ಅಬ್ದುಲ್ ಜಬ್ಬಾರ್, ಸಿಎಸ್ ಅಪ್ಪಾಜಿ ನಾಡಗೌಡ, ಪ್ರಕಾಶ್ ಹುಕ್ಕೇರಿ, ಬೈರತಿ ಸುರೇಶ್, ಅಂಜಲಿ ನಿಂಬಾಳ್ಕರ್, ಉಮಾಶ್ರೀ, ಲಕ್ಷ್ಮಿ ಹೆಬ್ಬಾಳ್ಕರ್, ಪಿಎಂ ಅಶೋಕ್, ಕೆಎಸ್ಎಲ್ ಸ್ವಾಮಿ, ಐಜಿ ಸನದಿ, ಎಸ್ಎಸ್ ಮಲ್ಲಿಕಾರ್ಜುನ್, ರಹೀಮ್ ಖಾನ್, ಆಂಜನೇಯ, ನಾಸಿರ್ ಅಹಮದ್, ಪಿಟಿ ಪರಮೇಶ್ವರ ನಾಯಕ್, ತುಕಾರಾಂ, ಶರಣು ಸಲಗರ್ ಹಾಗೂ ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಇವರೆಲ್ಲರೂ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕರಿಗೆ ಸಹಕರಿಸಲು ರಚಿಸಿರುವ ಸಮನ್ವಯ ಸಮಿತಿಯ ಸದಸ್ಯರು. ಇದೇ ರೀತಿ ಕೆಪಿಸಿಸಿ ಅಧ್ಯಕ್ಷ ಟಿ ಕೆ ಶಿವಕುಮಾರ್ ನೇತೃತ್ವದ ತಂಡಕ್ಕೂ ಸಹ ಸಮನ್ವಯಕಾರರನ್ನು ನಿಯೋಜಿಸಲಾಗಿದೆ.

ಪ್ರಜಾ ಧ್ವನಿ ಯಾತ್ರೆ: ಸಿದ್ದರಾಮಯ್ಯ ಸಹಕಾರಕ್ಕೆ ವಿಶೇಷ ಸಮನ್ವಯ ಸಮಿತಿ ರಚನೆ
ಪ್ರಜಾ ಧ್ವನಿ ಯಾತ್ರೆ: ಸಿದ್ದರಾಮಯ್ಯ ಸಹಕಾರಕ್ಕೆ ವಿಶೇಷ ಸಮನ್ವಯ ಸಮಿತಿ ರಚನೆ

ಭಾನುವಾರ(ಇಂದು), ಸೋಮವಾರ ಡಿಕೆಶಿ ಪ್ರವಾಸ : ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಎರಡು ದಿನದ ಪ್ರವಾಸ ನಿಮಿತ್ತ ಪಂಜಾಬ್​ಗೆ ಪ್ರಯಾಣ ಬೆಳೆಸಲಿದ್ದಾರೆ. ಬೆಳಗ್ಗೆ 9.30ಕ್ಕೆ ಬೆಂಗಳೂರಿನಿಂದ ತೆರಳಿದ್ದು, ವಿಮಾನದ ಮೂಲಕ ಮಧ್ಯಾಹ್ನ ಪಂಜಾಬ್​ನ ಅಮೃತಸರ ತಲುಪಿದರು. ಅಲ್ಲಿಂದ ಶ್ರೀನಗರಕ್ಕೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ. ಜನವರಿ 30 ರಂದು ಶ್ರೀನಗರದಲ್ಲಿ ನಡೆಯುವ ಭಾರತ್ ಜೋಡೊ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

:ಪ್ರಜಾ ಧ್ವನಿ ಯಾತ್ರೆ: ಸಿದ್ದರಾಮಯ್ಯ ಸಹಕಾರಕ್ಕೆ ವಿಶೇಷ ಸಮನ್ವಯ ಸಮಿತಿ ರಚನೆ

ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆದಿರುವ ಭಾರತ್ ಜೋಡೊ ಯಾತ್ರೆ ಸಮಾರೋಪದಲ್ಲಿ ಪಾಲ್ಗೊಂಡ ಬಳಿಕ ಜಮ್ಮುವಿಗೆ ಆಗಮಿಸುವ ಅವರು ಅಲ್ಲಿಂದ ವಿಮಾನ ಮಾರ್ಗವಾಗಿ ಮುಂಬಯಿಗೆ ಆಗಮಿಸಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬೆಂಗಳೂರಿಗೆ ಆಗಮಿಸುವ ಪ್ರವಾಸ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಭಾರತ್​ ಜೋಡೋ ಯಾತ್ರೆಗೆ ನಾಳೆ ತೆರೆ : ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ಯಾತ್ರೆ ಕಳೆದ 2022ರ ಸೆಪ್ಟೆಂಬರ್​ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಈಗ ಜಮ್ಮು ಮತ್ತು ಕಾಶ್ಮೀರ ತಲುಪಿದೆ. ಜನವರಿ 30(ನಾಳೆ)ರಂದು ಈ ಯಾತ್ರೆಗೆ ತೆರೆ ಬೀಳಲಿದೆ.

ಇದನ್ನೂ ಓದಿ : ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ: ಬಿ ಎಸ್ ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.