ETV Bharat / state

ಗರ್ಭಿಣಿಯರು ಈ ವಿಶಿಷ್ಟ ಬಟ್ಟೆ ಧರಿಸಿದ್ರೆ ಶಿಶುಗಳಿಗಿಲ್ಲ ವಿಕಿರಣ ಭಯ - ಸ್ಟೈನ್ ಲೆಸ್ ಸ್ಟೀಲ್ ಬಟ್ಟೆ

ಗರ್ಭಿಣಿಯರು ಹಾಗೂ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುಗಳನ್ನು ಮೊಬೈಲ್ ಹಾಗೂ ಇನ್ನಿತರ ವಿಕಿರಣಗಳಿಂದ ತಡೆಯಲು ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿಯೊಂದು ವಿಶೇಷ ಬಟ್ಟೆಯನ್ನು ತಯಾರಿಸಿದೆ.

Special cloths to protect pregnants from harmful radiations
ಶಿಶುವನ್ನು ವಿಕಿರಣಗಳಿಂದ ತಡೆಯಲು ಗರ್ಭಿಣಿಯರಿಗೆ ವಿಶಿಷ್ಟ ಬಟ್ಟೆ
author img

By

Published : Jan 1, 2020, 12:01 PM IST

ಬೆಂಗಳೂರು: ಗರ್ಭಿಣಿಯರು ತಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುಗಳನ್ನು ಮೊಬೈಲ್ ಹಾಗೂ ಇನ್ನಿತರ ವಿಕಿರಣಗಳಿಂದ ತಡೆಯಲು ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿಯೊಂದು ವಿಶೇಷ ಬಟ್ಟೆಯನ್ನು ಮಾರುಕಟ್ಟೆಗೆ ತಂದಿದೆ.

ಶಿಶುವನ್ನು ವಿಕಿರಣಗಳಿಂದ ತಡೆಯಲು ಗರ್ಭಿಣಿಯರಿಗೆ ವಿಶಿಷ್ಟ ಬಟ್ಟೆ

ಬೆಳೆಯುತ್ತಿರುವ ತಂತ್ರಜ್ಞಾನದಿಂದ ಮೊಬೈಲ್ ಟವರ್ ಹಾಗೂ ಇನ್ನಿತರ ವಿಕಿರಣಗಳು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುಗಳ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ದೇಶದಲ್ಲಿ ಪ್ರಸ್ತುತ ಗರ್ಭಪಾತ ಶೇ. 3.2%ಕ್ಕೆ ಏರಿದೆ. ನವಜಾತ ಶಿಶುಗಳಲ್ಲಿ ಎಡಿ, ಹೆಚ್​ಡಿ ಕಾಯಿಲೆಗಳು ಸಾಮಾನ್ಯವಾಗುತ್ತಿವೆ. ಇವುಗಳಿಂದ ಮಕ್ಕಳನ್ನು ರಕ್ಷಿಸುವ ಸಲುವಾಗಿ ಗರ್ಭಿಣಿಯರಿಗೆ ವಿಶೇಷ ಬಟ್ಟೆ ತಯಾರಿಸಲಾಗಿದೆ ಎಂದು ಡಿಜಿಟಲ್ ಫ್ಯಾಷನ್ ಫ್ಯಾಕ್ಟ್ರಿಯ ತಂತ್ರಜ್ಞಾನದ ಮುಖ್ಯಸ್ಥ ವಿನಯ್ ಜಗತಾಪ್ ತಿಳಿಸಿದರು.

ಬಟ್ಟೆಯ ವಿಶಿಷ್ಟತೆ:

ಶೇಕಡಾ 5ರಷ್ಟು ಸ್ಟೈನ್​ಲೆಸ್ ಸ್ಟೀಲ್ ಬಳಸಿ ಈ ರೀತಿಯ ಬಟ್ಟೆ ತಯಾರಿಸಲಾಗಿದೆ. ಇದು ಅಪಾಯಕಾರಿ ವಿಕಿರಣಗಳನ್ನು ತಡೆಯುತ್ತದೆ. ಈ ಬಟ್ಟೆಯನ್ನು ಸಾಧಾರಣ ಬಟ್ಟೆಗಳಂತೆಯೇ ತೊಳೆಯಬಹದು. ಇದಕ್ಕಾಗೇ ಬೇರೆ ಉಪಕರಣ ಬೇಡ ಎಂದರು.

ವೈದ್ಯಕೀಯ ಮಾನ್ಯತೆ:

ಈ ವಿಶೇಷ ಬಟ್ಟೆಗಳನ್ನು ಭಾರತೀಯ ಸಾಸ್ ಮೀರ್​ ಹಾಗೂ ತೈವಾನ್ ಬಟ್ಟೆ ಸಂಶೋಧನಾ ಸಂಘ ಪರಿಶೀಲನೆ ನಡೆಸಿ ಮಾನ್ಯತೆ ನೀಡಿದೆ. ಸದ್ಯ ಈ ಬಟ್ಟೆಗಳಿಗೆ ಬೆಲೆ ನಿಗದಿಪಡಿಸಿಲ್ಲ. ನಿಗದಿಪಡಿಸಿದ ನಂತರ ಆನ್ ಲೈನ್ ಹಾಗೂ ಮಳಿಗೆಗಳಲ್ಲೂ ದೊರಯಲಿವೆ ಎಂದು ಜಗತಾಪ್​ ಹೇಳಿದ್ರು.

Intro:Body:ಗರ್ಭಿಣಿಯರಿಗೆ ಹಾಗೂ ನವಜಾತ ಶಿಶುವಿಗೆ ವಿಕಿರಣಗಳಿಂದ ತಡೆಯಲು ವಿಶಿಷ್ಟ ಬಟ್ಟೆ

ಬೆಂಗಳೂರು: ಗರ್ಭಿಣಿಯರಿಗೆ ಹಾಗೂ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಮೊಬೈಲ್ ಹಾಗೂ ಇನ್ನಿತರ ವಿಕಿರಣಗಳಿಂದ ತಡೆಯಲು ಬಟ್ಟೆಯನ್ನು ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ತಯಾರು ಮಾಡಿದೆ.

ಡಿಜಿಟಲ್ ಫ್ಯಾಶನ್ ಫ್ಯಾಕ್ಟ್ರಿ ಎಂಬ ಸ್ಟಾರ್ಟ್ ಅಪ್ ಬಟ್ಟೆಗೆ ಸ್ಟೀಲ್ ಬಲಿಸಲಾಗಿದೆ. ಬೆಳೆಯುತ್ತಿರುವ ತಂತ್ರಜ್ಞಾನದಿಂದ ಮೊಬೈಲ್ ಟವರ್ ಹಾಗೂ ಇನ್ನಿತರ ವಿಕಿರಣಗಳನ್ನು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಕ್ಕಳ ಮೇಲೆ ಪ್ರಭಾವ ಬೀರಬಹುದು. ಇದನ್ನು ತಡೆಯಲು ಗರ್ಭಿಣಿಯರಿಗೆ ಈ ರೀತಿಯ ಬಟ್ಟೆ ತಯಾರಿಸಲಾಗಿದೆ ಎಂದು ಡಿಜಿಟಲ್ ಫ್ಯಾಶನ್ ಫ್ಯಾಕ್ಟ್ರಿಯ ತಂತ್ರಜ್ಞಾನದ ಮುಖ್ಯಸ್ಥ ವಿನಯ್ ಜಗತಾಪ್ ತಿಳಿಸಿದರು.

ಪ್ರಸ್ತುತವಾಗಿ ಗರ್ಭಪಾತ 3.2% ಏರಿದೆ, ಇದರ ಜೊತೆಗೆ ಎ ಡಿ ಎಚ್ ಡಿ ಎಂಬ ಕಾಯಿಲೆಗಳು ನವಜಾತ ಶಿಶುಗಳು ಬಲಗುತ್ತಿವೆ. ಇದು ವಿಕಿರಣಗಳಿಂದ ಆಗುತ್ತಿವೆ ಎಂಬ ಪುರಾವೆಗಳು ಇದ್ದವೇ ಎಂದು ಇವರು ಹೇಳಿದರು.

ಬಟ್ಟೆಯ ವಿಶಿಷ್ಟ:

ಶೇಕಡ 5 ರಷ್ಟು ಸ್ಟೈನ್ ಲೆಸ್ ಸ್ಟೀಲ್ ಬಳಿಸಿ ಬೇರೆ ಬಟ್ಟೆಯೊಂದಿಗೆ ಜೋಡಿಸಿ ಈ ರೀತಿಯ ಬಟ್ಟೆ ತಯಾರಿಸಲಾಗಿದೆ. ಬಳಿಸಿದ ಸ್ಟೈನ್ ಲೆಸ್ ಸ್ಟೀಲ್ ವಿಕಿರಣಗಳನ್ನು ತಡೆಯುತ್ತದೆ, ಹಾಗೂ ಇದರ ಜೊತೆಗೆ ನವಜಾತ ಶಿಶುವಿಗೂ ಬಟ್ಟೆ ಇವರಲ್ಲಿ ಲಭ್ಯವಿದ್ದು, ಇದರಿಂದ ವಿಕಿರಣಗಳಿಂದ ತಡೆಯಬಹುದು. ಹಾಗೂ ಈ ಬಟ್ಟೆಯನ್ನು ಒಗೆಯಬಹುದು, ಇದಕ್ಕೆ ಬೇರೆ ಉಪಕರಣ ಬೇಡ ಎಂದರು.

ವೈದ್ಯಕೀಯ ಮಾನ್ಯತೆ:

ಇಂತ ಬಟ್ಟೆಗಳಿಗೆ ತೈವಾನ್ ಬಟ್ಟೆ ಸಂಶೋಧನಾ ಸಂಘ, ಭಾರತೀಯ ಸಾಸ್ ಮಿರ ಮಾನ್ಯತೆ ನೀಡಿದೆ. ಈ ಬಟ್ಟೆಯನ್ನು ಪರಿಶೀಲಿಸಿ ಹಾಗೂ ಇದಕ್ಕೆ ಮಾನ್ಯತೆ ನೀಡಿದೆ ಎಂದು ಇವರು ಹೇಳಿದರು. ಈ ಪ್ರಮಾಣ ಪತ್ರದಲ್ಲಿ ಎಷ್ಟು ವಿಕಿರಣಗಳು ತಡೆಯುತ್ತದೆ ಎಂದು ಕಾಣಬಹುದು ಎಂದು ಇವರು ಸೇರಿಸಿದರು.

ಇನ್ನು ಬೆಳೆಯನ್ನು ನಿಗಧಿ ಪಡಿಸದ ಸ್ಟಾರ್ಟ್ ಅಪ್ , ಮುಂದಿನ ದಿನಗಳಲ್ಲಿ ಆನ್ ಲೈನ್ ಹಾಗೂ ಮಳಿಗೆಯಲ್ಲಿ ದೊರೆಕಲಿದೆ ಎಂದು ಹೇಳಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.