ETV Bharat / state

ಓಣಂ ಹಬ್ಬದ ಪ್ರಯುಕ್ತ ಕೇರಳಕ್ಕೆ ವಿಶೇಷ ಬಸ್​​​ಗಳು: ಆದ್ರೆ ಈ ನಿಯಮಗಳ ಪಾಲನೆ ಕಡ್ಡಾಯ - ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

ಓಣಂ ಹಬ್ಬದ ಪ್ರಯುಕ್ತ ಕೇರಳ ಪ್ರಯಾಣಿಕರ ಅನುಕೂಲಕ್ಕಾಗಿ, ಕೆಲವು ರೂಲ್ಸ್ ಆ್ಯಂಡ್ ಗೈಡ್ ಲೈನ್ಸ್​ಗಳ ಮೂಲಕ ವಿಶೇಷ ಬಸ್​​​​ಗಳ ನಿಯೋಜನೆಯನ್ನು ಮಾಡಲಾಗಿದೆ.

Special buses to Kerala for Onam festival
ಓಣಂ ಹಬ್ಬದ ಪ್ರಯುಕ್ತ ಕೇರಳಕ್ಕೆ ವಿಶೇಷ ಬಸ್​​​ಗಳು
author img

By

Published : Aug 17, 2020, 4:01 PM IST

ಬೆಂಗಳೂರು: ಓಣಂ ಹಬ್ಬದ ಪ್ರಯುಕ್ತ ಕೇರಳ ಪ್ರಯಾಣಿಕರ ಅನುಕೂಲಕ್ಕಾಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಶೇಷ ಬಸ್​​​​ಗಳ ನಿಯೋಜನೆಯನ್ನು ಮಾಡಿದೆ. ಆಗಸ್ಟ್ 24 ರಿಂದ ಸೆಪ್ಟೆಂಬರ್ 06ರ ವರೆಗೆ ಬೆಂಗಳೂರಿನಿಂದ ಮತ್ತು ಮೈಸೂರಿನಿಂದ ಕೇರಳ ರಾಜ್ಯದ ವಿವಿಧ ಸ್ಥಳಗಳಿಗೆ ಕಾರ್ಯಾಚರಣೆ ಮಾಡಲಾಗುತ್ತೆ.

ಬೆಂಗಳೂರಿನಿಂದ ಕಣ್ಣೂರು, ಎರ್ನಾಕುಲಂ, ಕಾಞಂಗಾಡ್, ಕಾಸರಗೋಡು, ಕೊಟ್ಟಾಯಂ, ಕಲ್ಲಿಕೋಟೆ, ಪಾಲಘಾಟ್, ತ್ರಿಶೂರು, ತಿರುವನಂತಪುರಂ ಮತ್ತು ವಡಗೇರಾ ಬಸ್​​ ಲಭ್ಯವಿರಲಿದೆ. ಹಾಗೂ ಮೈಸೂರಿನಿಂದ ತಿರುವನಂತಪುರಂ, ಎರ್ನಾಕುಲಂ ಮತ್ತು ಕೊಟ್ಟಾಯಂವರೆಗೆ ಬಸ್ ಸಂಚಾರಿಸಲಿದೆ.

ಕೇರಳ ರಾಜ್ಯ ಸರ್ಕಾರದ ಆದೇಶದನ್ವಯ ಎಲ್ಲಾ ಪ್ರಯಾಣಿಕರು ಇತರೆ ರಾಜ್ಯದಿಂದ ಕೇರಳ ರಾಜ್ಯದೊಳಗೆ ಆಗಮಿಸಲು, ಕೇರಳ ಸರ್ಕಾರದ ಸೇವಾಸಿಂಧು ಪೋರ್ಟಲ್‌ನಲ್ಲಿ https://covid19jagratha.kerala.nic.in ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.

ಬಸ್​​​​ನ್ನು ಹತ್ತುವ ಮುಂಚೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ಬಗ್ಗೆ ಪುರಾವೆಯನ್ನು, ಕೆಎಸ್​ಆರ್​​ಟಿಸಿ ಸಿಬ್ಬಂದಿಗೆ ತೋರಿಸಬೇಕು. ಇಲ್ಲದಿದ್ದಲ್ಲಿ ಬಸ್​​​​ನಲ್ಲಿ ಪ್ರಯಾಣಿಸುವುದನ್ನು ನಿರಾಕರಿಸಲಾಗುತ್ತೆ.

ಕರ್ನಾಟಕ ರಾಜ್ಯ ಸರ್ಕಾರದ ಆದೇಶದನ್ವಯ ಎಲ್ಲಾ ಪ್ರಯಾಣಿಕರು ಇತರೆ ರಾಜ್ಯದಿಂದ, ಕರ್ನಾಟಕ ರಾಜ್ಯದೊಳಗೆ ಆಗಮಿಸಲು ಕರ್ನಾಟಕ ಸರ್ಕಾರದ ಸೇವಾಸಿಂಧು ಪೋರ್ಟಲ್‌ನಲ್ಲಿ https://sevasindhu karnataka.gov.in ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.

ಕೋವಿಡ್ ಇರುವವರಿಂದ ಇದರೊಂದಿಗೆ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್​​ ಧರಿಸಬೇಕು. ಈ ಮಾರ್ಗಗಳಲ್ಲಿ ಮುಂಗಡ ಆಸನಗಳನ್ನು www.ksrtc.in ನಿಗಮದ ಫ್ರಾಂಚೈಸಿ ಕೌಂಟರ್‌ಗಳ ಮುಖಾಂತರ ಕಾಯ್ದಿರಿಸಿಕೊಳ್ಳಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.