ETV Bharat / state

ಮತದಾನ ಮಾಡಲು ವಿಕಲಚೇತನರಿಗೆ ವಿಶೇಷ ವ್ಯವಸ್ಥೆ! - undefined

ಚುನಾವಣೆಯಲ್ಲಿ ಮತದಾನ ಮಾಡಲು ವಿಕಲಚೇತನರಿಗೆ ಯಾವುದೇ ಅಳುಕು ಬೇಡ. ನಿಮಗೆ ಅನುಕೂಲವಾಗುವಂತೆ ವಿಕಲಚೇತನರ ನಿರ್ದೇಶನಾಲಯ ವಿಶೇಷ ವ್ಯವಸ್ಥೆ ಕಲ್ಪಿಸಿದೆ.

ಚುನಾವಣಾ ನೋಡಲ್ ಅಧಿಕಾರಿ ಜಯವಿಭವಸ್ವಾಮಿ
author img

By

Published : Apr 11, 2019, 8:34 PM IST

ಬೆಂಗಳೂರು: ನನಗೆ ಕಣ್ಣು ಕಾಣುವುದಿಲ್ಲ, ಕಿವಿ ಕೇಳಿಸುವುದಿಲ್ಲ, ನಡೆದು ಹೋಗಲು ಸಾಧ್ಯವಿಲ್ಲ ಅಥವಾ ಇತರರ ಜೊತೆ ಹೋಗಿ ಮತ ಚಲಾಯಿಸಿದರೆ ಮೋಸ ಹೋಗುತ್ತೇನೆ ಎಂಬ ಅಳುಕು ಬೇಡ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಕಲಚೇತನರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ವಿಕಲಚೇತನರ ನಿರ್ದೇಶನಾಲಯ ವಿಶೇಷ ವ್ಯವಸ್ಥೆ ಕಲ್ಪಿಸಿದೆ.

ದೃಷ್ಟಿ ವಿಕಲಚೇತನರಿಗಾಗಿ ಬೂತ್ ಮುಂದೆ ಬ್ರೈಲ್ ಲಿಪಿಯ ಪೋಸ್ಟರ್

ಚುನಾವಣೆ ದಿನದಂದು ಮತಗಟ್ಟೆಗೆ ಬಂದು ಪ್ರವೇಶದ್ವಾರದ ಗೋಡೆ ತಡಕಾಡಿದರೆ ಈ ಪೋಸ್ಟರ್ ಕೈಗೆ ಸಿಗುತ್ತದೆ. ಈ ಪೋಸ್ಟರ್​​​ನ ವಿಶೇಷವೇನೆಂದರೆ ಇದು ಬ್ರೈಲ್ ಲಿಪಿಯಲ್ಲಿರುವ ಪೋಸ್ಟರ್. ಅಂಧರು ಮತಗಟ್ಟೆಗೆ ಬಂದು ಮತ ಚಲಾಯಿಸುವುದಕ್ಕೂ ಮುನ್ನ ಪ್ರವೇಶದ್ವಾರದಲ್ಲೇ ಇರುವ ಈ ಪೋಸ್ಟರ್ ಹುಡುಕಿದರೆ ಇಲ್ಲಿ ಅಭ್ಯರ್ಥಿಗಳ ಹೆಸರು, ಪಕ್ಷದ ಹೆಸರು ಮತ್ತು ಅಭ್ಯರ್ಥಿಯ ಕ್ರಮಸಂಖ್ಯೆ ಎಲ್ಲವೂ ಕೂಡ ಇರುತ್ತದೆ. ಅದನ್ನು ಓದಿಕೊಂಡು ಮತಗಟ್ಟೆಯ ಒಳಗೆ ಹೋಗಿ, ಮತ ಚಲಾಯಿಸಬಹುದಾಗಿದೆ.

ಇದರಿಂದಾಗಿ ಬೇರೆಯವರ ಸಹಾಯ ತೆಗೆದುಕೊಳ್ಳುವುದು ತಪ್ಪುತ್ತದೆ. ಚುನಾವಣೆ ಪ್ರಕ್ರಿಯೆ ಕುರಿತು ಕಿರುಹೊತ್ತಿಗೆ ಕೂಡ ಬ್ರೈಲ್ ಲಿಪಿಯಲ್ಲಿ ಸಿದ್ದವಾಗಿದ್ದು, ಅವುಗಳನ್ನು ಪ್ರತಿ ಅಂಧರ ಮನೆಗೂ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ವಿಕಲಚೇತನರು ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕ, ರಾಜ್ಯಮಟ್ಟದ ವಿಕಲಚೇತನರ ಚುನಾವಣಾ ನೋಡಲ್ ಅಧಿಕಾರಿ ಜಯವಿಭವಸ್ವಾಮಿ ಮಾಹಿತಿ ನೀಡಿದರು.

ಚುನಾವಣಾ ನೋಡಲ್ ಅಧಿಕಾರಿ ಜಯವಿಭವಸ್ವಾಮಿ

ಏಳು ಮಾದರಿಯಲ್ಲಿ ದೋಷಗಳು ಇರುವವರನ್ನು ವಿಕಲಚೇತನರ ನಿರ್ದೇಶನಾಲಯ ಗುರುತಿಸಿದೆ. ರಾಜ್ಯದಲ್ಲಿ ಸುಮಾರು 13.24 ಲಕ್ಷ ಮಂದಿ ವಿಕಲಚೇತನರಿದ್ದಾರೆ. 2011 ಜನಗಣತಿ ಪ್ರಕಾರ, ಅಂದಾಜು 9 ಲಕ್ಷ ವಿಕಲಚೇತನ ಮತದಾರರು ಇದ್ದಾರೆ. ಇನ್ನು 4,29,917 ಮಂದಿ ವಿಕಲಚೇತರನ್ನು ಅವರ ಮನೆಗೆ ಹೋಗಿ ಗುರುತಿಸಿದ್ದೇವೆ. ಇವರಲ್ಲಿ 53,575 ಸಾವಿರ ಮಂದಿ ದೃಷ್ಟಿದೋಷ ಹೊಂದಿರುವವರಿದ್ದಾರೆ. ಕೊಪ್ಪಳದಲ್ಲಿ ಅತೀ ಹೆಚ್ಚು ಅಂದರೆ 7,342 ತುಮಕೂರಿನಲ್ಲಿ 3,788 ಮಂದಿ ಹಾಗು ಬೆಳಗಾವಿಯಲ್ಲಿ 2,833 ಮಂದಿ ದೃಷ್ಟಿದೋಷವಿರುವ ಮತದಾರರಿದ್ದಾರೆ.

ಈ ಬಾರಿ ಮತದಾನಕ್ಕೆ ಬರುವವರಿಗೆ ವಾಹನಗಳ ಸೌಕರ್ಯವನ್ನೂ ಮಾಡಲಾಗಿದೆ. ಹಿರಿಯನಾಗರಿಕರು, ಗರ್ಭಿಣಿ ಮಹಿಳೆಯರು, ವಿಕಲಚೇತರಿಗಾಗಿ ಮೂರನೇ ಸರತಿ ಸಾಲು ಇರುತ್ತದೆ ಎನ್ನುತ್ತಾರೆ ನೋಡಲ್ ಅಧಿಕಾರಿ. ಮತಗಟ್ಟೆಗೆ ಹೋಗುವ ಎಲ್ಲ ವಿಕಲಚೇತನರಿಗೆ ಈ ಬಾರಿ ಪ್ರತಿಯೊಂದು ಮತಗಟ್ಟೆಗಳಲ್ಲಿ ರ್ಯಾಂಪ್‌ಗಳನ್ನು ನಿರ್ಮಾಣ ಮಾಡಲಾಗಿದೆ. ವಾಹನದ ವ್ಯವಸ್ಥೆ ಬೇಕಿರುವವರು ಬೂತ್ ಮಟ್ಟದ ಅಧಿಕಾರಿಗಳನ್ನು ಮತ್ತು 1950 ಸಹಾಯವಾಣಿಯನ್ನು ಸಂಪರ್ಕಿಸಬಹುದು.

ವಿಶೇಷ ಸಿಬ್ಬಂದಿ ಅವರ ಮನೆಗಳಿಗೆ ಹೋಗಿ ವಿಕಲಚೇತನರನ್ನು ಕರೆದುಕೊಂಡು ಬಂದು ಮತಗಟ್ಟೆಗೆ ಬಿಡುತ್ತಾರೆ. ಮತ ಚಲಾಯಿಸಿದ ನಂತರ ಮತ್ತೆ ಕರೆದೊಯ್ಯುವ ಕೆಲಸ ಮಾಡಲಾಗುತ್ತದೆ. ಎಲ್ಲ ವಿಕಲಚೇತನರಿಗೆ ಮತದಾನದ ಬಗ್ಗೆ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವೀಲ್ ಚೇರ್, ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ವಿಕಲಚೇತನ ನಿರ್ದೇಶನಾಲಯ ತಿಳಿಸಿದೆ.

Intro:ಬೆಂಗಳೂರು : ನನಗೆ ಕಣ್ಣು ಕಾಣುವುದಿಲ್ಲ.. ಕಿವಿ ಕೇಳಿಸುವುದಿಲ್ಲ.. ನಡೆದು ಹೋಗಲು ಸಾಧ್ಯವಿಲ್ಲ. ಅಥವಾ ಬೇರೆಯವರ ಜೊತೆ ಹೋಗಿ ಮತ ಚಲಾಯಿಸಿದರೆ ಮೋಸ ಹೋಗುತ್ತೇನೆ ಎಂಬ ಅಳಕು ಬೇಡ…? ಈ ಬಾರಿ ಲೋಕಸಭೆ ಚುನಾವಣೆಗೆ ವಿಕಲಚೇತರನ ನಿರ್ದೇಶನಾಲಯ ವಿಕಲಚೇತನರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಿದೆ. Body:ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಸರಾಗವಾಗಿ ಮತದಾನ ಮಾಡಲು ಹಲವು ಅನುಕೂಲತೆಗಳನ್ನು ಮಾಡಲಾಗಿದೆ. ವಿಕಲಚೇತನರು ಸರತಿ ಸಾಲಿನಜಲ್ಲಿ ನಿಲ್ಲಬೇಕಿಲ್ಲ. ದೃಷಿ ವಿಕಲಚೇತನರಿಗಾಗಿ ಬೂತ್ ಮುಂದೆ ಇರುತ್ತೆ ಬ್ರೈಲ್ ಲಿಪಿಯ ಪೋಸ್ಟರ್…!
ಚುನಾವಣೆ ದಿನದೊಂದು ಮತಗಟ್ಟೆಗೆ ಬಂದು ಪ್ರವೇಶದ್ವಾರದ ಗೋಡೆ ತಡಕಾಡಿದರೆ ಈ ಪೋಸ್ಟರ್ ಕಾಣಿಸುತ್ತದೆ. ಈ ಪೋಸ್ಟರ್ ನ ವಿಶೇಷವೇನೆಂದರೆ ಇದು ಬ್ರೈಲ್ ಲಿಪಿಯಲ್ಲಿ ಇರುವ ಪೋಸ್ಟರ್... ಅಂಧರು ಮತಗಟ್ಟೆಗೆ ಬಂದು ಮತ ಚಲಾಯಿಸುವುದಕ್ಕೂ ಮುನ್ನ ಪ್ರವೇಶದ್ವಾರದಲ್ಲಿ ಇರುವ ಈ ಪೋಸ್ಟರ್ ಹುಡುಕಿದರೆ ಇಲ್ಲಿ ಅಭ್ಯರ್ಥಿಗಳ ಹೆಸರು, ಪಕ್ಷದ ಹೆಸರು ಮತ್ತು ಅಭ್ಯರ್ಥಿಯ ಕ್ರಮ ಸಂಖ್ಯೆ ಎಲ್ಲವೂ ಕೂಡ ಇರುತ್ತದೆ. ಅದನ್ನು ಓದಿಕೊಂಡು ಮತಗಟ್ಟೆಯ ಒಳಗೆ ಹೋಗಿ, ಮತ ಚಲಾಯಿಸಬಹುದಾಗಿದೆ. ಇದರಿಂದಾಗಿ ಬೇರೆಯವರ ಸಹಾಯ ತೆಗೆದುಕೊಳ್ಳುವುದು ತಪ್ಪುತ್ತದೆ. ಇದರ ಜೊತೆ ಚುನಾವಣೆ ಪ್ರಕ್ರಿಯೆ ಕುರಿತು ಕಿರುಹೊತ್ತಿಗೆ ಕೂಡ ಬ್ರೈಲ್ ಲಿಪಿಯಲ್ಲಿ ಸಿದ್ದವಾಗಿದ್ದು, ಅವುಗಳನ್ನು ಪ್ರತಿ ಅಂಧರ ಮನೆಗೂ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ನಿರ್ದೇಶಕ, ರಾಜ್ಯಮಟ್ಟದ ವಿಕಲಚೇತನರ ಚುನಾವಣಾ ನೋಡಲ್ ಅಧಿಕಾರಿ ಜಯವಿಭವಸ್ವಾಮಿ ಮಾಹಿತಿ ನೀಡಿದರು.
ಏಳು ಮಾದರಿಯಲ್ಲಿ ದೋಶಗಳು ಇರುವವರನ್ನು ವಿಕಲಚೇತನರ ನಿರ್ದೇಶನಾಲಯ ಗುರುತಿಸಿದ್ದು, ರಾಜ್ಯದಲ್ಲಿ ಸುಮಾರು 13.24 ಲಕ್ಷ ಮಂದಿ ವಿಕಲಚೇತನರಿದ್ದಾರೆ. 2011 ಜನಗಣಗತಿ ಪ್ರಕಾರ, ಅಂದಾಜು 9 ಲಕ್ಷ ಮತದಾರರು ಇದ್ದಾರೆ. ಇನ್ನು 4.29,917 ಮಂದಿ ವಿಕಲಚೇತರನ್ನು ಮನೆಗೆ ಹೋಗಿ ಗುರುತಿಸಿದ್ದೇವೆ. ಅದರಲ್ಲಿ 53,575 ಸಾವಿರ ಮಂದಿ ದೃಷಿ ದೋಷ ಹೊಂದಿರುವವರಿದ್ದಾರೆ. ಕೊಪ್ಪಳದಲ್ಲಿ ಅತಿ ಹೆಚ್ಚು ಅಂದರೆ 7,342, ತುಮಕೂರಿನಲ್ಲಿ 3,788 ಮಂದಿ ಹಾಗು ಬೆಳಗಾವಿಯಲ್ಲಿ 2,833 ಮಂದಿ ಮತದಾರರು ಇದ್ದಾರೆ.
ಇನ್ನು ಈ ಬಾರಿ ಮತದಾನಕ್ಕೆ ಬರುವವರಿಗೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಮೂರನೇ ಸಾಲು ಇರುತ್ತದೆ. ಹಿರಿಯನಾಗರೀಕರು, ಗರ್ಬೀಣಿ ಮಹಿಳೆಯರು, ವಿಕಲಚೇತರಿಗಾಗಿ ಮೂರನೇ ಸರತಿ ಸಾಲು ಇರುತ್ತದೆ ಎನ್ನುತ್ತಾರೆ ನೋಡಲ್ ಅಧಿಕಾರಿ.
ಮತಗಟ್ಟೆಗೆ ಹೋಗು ಎಲ್ಲ ವಿಕಲಚೇತನರಿಗೆ ಈ ಬಾರಿ ಪ್ರತಿಯೊಂದು ಮತಗಟ್ಟೆಗಳಲ್ಲಿ ರ್ಯಾಂಪ್ ಗಳನ್ನು ನಿರ್ಮಾಣ ಮಾಡಲಾಗಿದೆ. ಯಾರಿಗೆ ವಾಹನದ ವ್ಯವಸ್ಥೆ ಬೇಕು ಅವರಿಗೆ ವಾಹನದ ವ್ಯವಸ್ಥೆಯನ್ನು ಬೂತ್ ಮಟ್ಟದ ಅಧಿಕಾರಿಗಳನ್ನು ಮತ್ತು 1950 ಸಹಾಯವಾಣಿಯನ್ನು ಸಂಪರ್ಕಿಸಬಹುದು. ವಿಶೇಷ ಸಿಬ್ಬಂದಿ ಅವರ ಮನೆಗೆ ಹೋಗಿ ವಿಕಲಚೇತನರನ್ನು ಕರೆದುಕೊಂಡು ಬಂದು ಮತಗಟ್ಟೆಗೆ ಬಿಡುತ್ತಾರೆ. ಮತ ಚಲಾಯಿಸಿದ ನಂತರ ಮತ್ತೆ ಕರೆದೊಯ್ಯುವ ಕೆಲಸ ಮಾಡಲಾಗುತ್ತದೆ. ಎಲ್ಲ ವಿಕಲಚೇತನರಿಗೆ ಮತದಾನದ ಬಗ್ಗೆ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವೀಲ್ ಚೇರ್, ನೀರಿನ ವ್ಯವಸ್ಥೆ ಸಹ ಮಾಡಲಾಗಿದೆ.

-ಮುನೇಗೌಡ ಎಂConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.