ಬೆಂಗಳೂರು: ಪ್ರಶ್ನೋತ್ತರ ಅವಧಿಯಲ್ಲಿ ಶಾಸಕರ ಗೈರು ಹಾಜರು ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಹಾಕಿದ ಹಲವು ಶಾಸಕರು ಗೈರು ಹಾಜರಾಗಿದ್ದರು. ಸೋಮವಾರ ಏಕೆ ರಜಾ ಹಾಕಿದ್ದಾರೆ. ಯಾಕೆ ಹಿಂಗಾಗಿದೆ ಎಂದು ಗೊತ್ತಾಗುತ್ತಿಲ್ಲ ಎಂದರು.
ಇಂದು ಪ್ರಶ್ನೆ ಹಾಕಿದ ಶಾಸಕರಾದ ಭೀಮಾ ನಾಯಕ್, ಭರತ್ ಶೆಟ್ಟಿ, ನಿರಂಜನ್ ಕುಮಾರ್. ಎಸ್, ಬಿ. ಕೆ ಸಂಗಮೇಶ್, ಎಂ. ಶ್ರೀನಿವಾಸ್, ಸಿ. ಎನ್ ಬಾಲಕೃಷ್ಣ, ಸಿ. ಎಸ್ ಪುಟ್ಟರಾಜು, ಶಿವಾನಂದ್ ಪಾಟೀಲ್ ಗೈರು ಹಾಜರಾಗಿದ್ದರು. ಜೊತೆಗೆ ಶೂನ್ಯ ವೇಳೆ ವಿಷಯ ಪ್ರಸ್ತಾಪ ಮಾಡಬೇಕಿದ್ದ ಕಾಂಗ್ರೆಸ್ ಸದಸ್ಯ ಈಶ್ವರ್ ಖಂಡ್ರೆ ಸಹ ಗೈರು ಹಾಜರಾಗಿದ್ದು, ಮಧ್ಯಾಹ್ನದ ನಂತರ ಸದನಕ್ಕೆ ಆಗಮಿಸಿದರು.
ಇಂದು ಬೆಳಗ್ಗೆ ಸಾಕಷ್ಟು ಮಂದಿ ಶಾಸಕರು ಸದನಕ್ಕೆ ಬಂದಿರಲಿಲ್ಲ. ತಡವಾಗಿ ಕೆಲ ಸದಸ್ಯರು ಬಂದಿದ್ದರೆ, ಇನ್ನೂ ಕೆಲ ಸದಸ್ಯರು ಗೈರಾಗಿದ್ದರು. ಸದನ ಆರಂಭವಾದಾಗಿನಿಂದ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಜರಾಗಿಲ್ಲ. ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಆಗಾಗ ಬಂದು ಹೋಗುತ್ತಿದ್ದಾರೆ.
ಓದಿ: ಪ್ರಕೃತಿ ವಿಕೋಪದಿಂದ ಬೆಳೆ ಕಳೆದುಕೊಂಡ ರೈತರಿಗೆ ಒಂದೇ ತಿಂಗಳಲ್ಲಿ ಪರಿಹಾರ : ಸಚಿವ ಅಶೋಕ್