ETV Bharat / state

'ಆದರ್ಶ, ಮೌಲ್ಯಗಳು ಕುಸಿಯುತ್ತಿವೆ..': ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭಾವುಕ - ಹಲವು ಶಾಸಕರ ವಿದಾಯ ಭಾಷಣ

15ನೇ ವಿಧಾನಸಭೆಯ ಕೊನೆಯ ಅಧಿವೇಶನದಲ್ಲಿ ಶುಕ್ರವಾರ ಹಲವು ಶಾಸಕರು ವಿದಾಯ ಭಾಷಣದ ನಂತರ ಮಾತನಾಡುವ ವೇಳೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭಾವುಕರಾದರು.

Vishweshwar Hegade Kageri
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
author img

By

Published : Feb 24, 2023, 10:23 PM IST

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭಾವುಕ

ಬೆಂಗಳೂರು: ''ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರ ಇಡೀ ವಿಶ್ವದಲ್ಲಿ ಇನ್ನೊಂದಿಲ್ಲ. ಆದರೆ, ಬರಬರುತ್ತಾ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗು ಪತ್ರಿಕಾ ರಂಗದ ಜೊತೆಗೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಆದರ್ಶ, ಮೌಲ್ಯಗಳು ಕುಸಿಯುತ್ತಿವೆ'' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಶ್ರಮಿಸಿ: ''ಸಭಾಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಡೆಸಲು ಸಹಕಾರ ನೀಡಿದ ಮುಖ್ಯಮಂತ್ರಿಗಳು, ಸಚಿವರು ಹಾಗೂ ಪ್ರತಿಪಕ್ಷ ನಾಯಕರು ಸೇರಿದಂತೆ ಎಲ್ಲ ಸದಸ್ಯರಿಗೂ ಕಾಗೇರಿ ಅಭಿನಂದನೆ ಸಲ್ಲಿಸಿದರು. ದೇಶ ಮೊದಲು ಎನ್ನುವ ಜಾಗೃತಿ ಎಲ್ಲರಲ್ಲೂ ಮೂಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು'' ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

''ವಿಧಾನಸಭೆಯ ಕಾರ್ಯ ಕಲಾಪಗಳ ಜೊತೆಗೆ ಸಭಾಧ್ಯಕ್ಷರ ಸ್ಥಾನದಲ್ಲಿ ಕೂತು ನಾನು ದೇಶದ ವಿವಿಧ ರಾಜ್ಯ ಹಾಗೂ ಕಾಮನ್‌ವೆಲ್ತ್ ಸಭೆ ಸೇರಿದಂತೆ ಬೇರೆ ಬೇರೆ ದೇಶಗಳನ್ನು ಸುತ್ತಿ ಅನೇಕ ತಜ್ಞರು, ರಾಜಕೀಯ ನಾಯಕರೊಂದಿಗೆ ಹಲವು ಸಭೆಗಳಲ್ಲಿ ಭಾಗವಹಿಸಿದ್ದೇನೆ. ಆದರೆ, ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರ ಇಡೀ ವಿಶ್ವದಲ್ಲಿ ಇನ್ನೊಂದಿಲ್ಲ."

"ಆದರೆ, ಇಂದು ದೇಶದ ಪ್ರಮುಖ ಅಂಗಗಳ ಜೊತೆಗೆ ಯಾವ ಕ್ಷೇತ್ರಗಳೂ ಹೊರತಾಗಿಲ್ಲದಂತೆ ಆದರ್ಶ, ಮೌಲ್ಯಗಳು ಕುಸಿದಿವೆ. ಕನಿಷ್ಠ ಪಕ್ಷ ಶಾಸಕರಿಗೆ ಐದು ವರ್ಷಕ್ಕೊಮ್ಮೆ ಜನರ ಮೌಲ್ಯಮಾಪನವಿದೆ. ಬೇರೆಯವರಿಗೆ ಅದೂ ಇಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯ ಪಕ್ಷಗಳ ಮೇಲಿದೆ ಹೊಣೆಗಾರಿಕೆ: ''ಹರಿದು ಹಂಚಿ ಹೋಗಿದ್ದ ದೇಶವನ್ನು ಒಟ್ಟುಗೂಡಿಸಿ ಸುದೀರ್ಘವಾಗಿ ಐಕ್ಯತೆ ಕಾಯ್ದುಕೊಂಡು ಬರುವುದು ಸುಲಭದ ಕೆಲಸವಲ್ಲ. ಭಾರತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಶ್ರೇಷ್ಠ ಸಂವಿಧಾನ, ಮಹಾತ್ಮ ಗಾಂಧಿ ಆದಿಯಾಗಿ ಅನೇಕ ಮಹಾನ್ ನಾಯಕರ ತ್ಯಾಗ ಬಲಿದಾನ, ನಂತರ ರಾಷ್ಟ್ರವನ್ನು ಆಳಿದ ನಾಯಕರು ಹಾಕಿದ ಭದ್ರ ಬುನಾದಿಗಳಿಂದ ಇದು ಸಾಧ್ಯವಾಗಿದೆ. ಅವರ ಆದರ್ಶ, ಮೌಲ್ಯಗಳನ್ನು ಪಾಲಿಸಿಕೊಂಡು ಪ್ರಜಾಪ್ರಭುತ್ವವನ್ನು ಇನ್ನಷ್ಟು ಶಕ್ತಿಯುತಗೊಳಿಸುವ ಕೆಲಸ ನಮ್ಮೆಲ್ಲರ ಮೇಲಿದೆ."

"ಪ್ರತಿಯೊಂದು ರಾಜಕೀಯ ಪಕ್ಷಗಳ ಮೇಲೂ ಈ ನಿಟ್ಟಿನಲ್ಲಿ ದೊಡ್ಡ ಹೊಣೆಗಾರಿಕೆ ಇದೆ. ಪ್ರತಿಯೊಬ್ಬರಲ್ಲೂ ದೇಶ ಮೊದಲು ಎನ್ನುವ ಜಾಗೃತಿ ಮೂಡಬೇಕು. ವಿವೇಕಾನಂದರು ಬೋಧಿಸಿದ ಆಧ್ಯಾತ್ಮಿಕ ತಳಹದಿಯನ್ನು ಭದ್ರಪಡಿಸಬೇಕು'' ಎಂದು ಕಾಗೇರಿ ತಿಳಿಸಿದರು.

760 ಗಂಟೆ ಕಲಾಪ: "15ನೇ ವಿಧಾನಸಭೆಯ ಕಾರ್ಯಕಲಾಪಗಳ ಕುರಿತು ಮಾಹಿತಿ ನೀಡಿದ ಸ್ಪೀಕರ್ ಕಾಗೇರಿ, ''2019ರ ಜುಲೈ 21ರಂದು ನಾನು ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದುವರೆಗೆ 15 ಬಾರಿ ವಿಧಾನಸಭೆ ಅಧಿವೇಶನ ನಡೆಸಲಾಗಿದೆ. ಒಟ್ಟು 167 ದಿನಗಳಲ್ಲಿ 760 ಗಂಟೆಗಳ ಕಾಲ ನಡೆದ ಕಾರ್ಯಕಲಾಪದಲ್ಲಿ ಸುಮಾರು 200 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಇದು ಸದನಕ್ಕೆ ದೊಡ್ಡ ಗೌರವದ ವಿಚಾರ" ಎಂದು ಹೇಳಿದರು.

''ಒಟ್ಟು 6,000 ಚುಕ್ಕೆ ಗುರುತಿನ ಪ್ರಶ್ನೆ ಹಾಗೂ 25,988 ಚಿಕ್ಕೆಗುರುತಿಲ್ಲದ ಪ್ರಶ್ನೆಗಳನ್ನು ಸದಸ್ಯರು ಕೇಳಿ ಉತ್ತರ ಪಡೆದಿದ್ದಾರೆ. ಸದನದ ಕಾರ್ಯಕಲಾಪಗಳ ಜೊತೆಗೆ ಸಂವಿಧಾನದ ಮೇಲಿನ ಚರ್ಚೆ, ಒಂದು ದೇಶ ಒಂದು ಚುನಾವಣೆ ಸೇರಿದಂತೆ ಅನೇಕ ವಿಚಾರಗಳ ಚರ್ಚೆಗೆ ಸದನದಲ್ಲಿ ಅವಕಾಶ ನೀಡಲಾಗಿತ್ತು. ಸರ್ಕಾರ, ಲೋಕಸಭೆಯ ಸ್ಪೀಕರ್ ವಹಿಸಿದ ಜವಾಬ್ದಾರಿಗಳನ್ನೂ ನಿಭಾಯಿಸಿದ್ದೇನೆ.

ಓಂ ಬಿರ್ಲಾ ಅವರು ದೇಶದ ಉತ್ತಮ ಶಾಸನಸಭೆಯನ್ನು ಗುರುತಿಸಲು ಮಾನದಂಡಗಳನ್ನು ರಚಿಸಲು ನನ್ನ ನೇತೃತ್ವದಲ್ಲಿ ವಿವಿಧ ರಾಜ್ಯಗಳ ಐವರು ವಿಧಾನಸಭಾಧ್ಯಕ್ಷರ ಸಮಿತಿ ರಚಿಸಿದ್ದರು. ಕಳೆದ ವಾರವಷ್ಟೆ ನಮ್ಮ ಸಮಿತಿಯು ಮಾನದಂಡಗಳನ್ನು ಸಿದ್ಧಪಡಿಸಿ ಲೋಕಸಭೆ ಸ್ಪೀಕರ್ ಅವರಿಗೆ ಸಲ್ಲಿಸಿದೆ'' ಎಂದು ವಿವರಿಸಿದರು.

ರಾಷ್ಟ್ರಗೀತೆಯೊಂದಿಗೆ ಸ್ಪೀಕರ್ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದರು.

ಇದನ್ನೂ ಓದಿ: ಬಿಎಸ್​ವೈ ಭಾಷಣಕ್ಕೆ ಮೋದಿ ಫಿದಾ: ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.