ETV Bharat / state

ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕದ ಅಧಿಕಾರ ಸ್ಪೀಕರ್​​ಗೆ - ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡಿದ್ದು, ತಮ್ಮ ಸಂಪುಟದಲ್ಲಿ ಸ್ಥಾಯಿ ಸಮಿತಿಗಳ ನೇಮಕದ ಅಧಿಕಾರವನ್ನು ಸ್ಪೀಕರ್​ಗೆ ವಸಹಿಸಿಕೊಟ್ಟಿದ್ದಾರೆ.

ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ
author img

By

Published : Jul 31, 2019, 8:14 PM IST

ಬೆಂಗಳೂರು: ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ಸದನದ ಸಭಾಧ್ಯಕ್ಷರಿಗೆ ನೀಡಲಾಗಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ಪ್ರಕಟಿಸಿದರು.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ, ಸಭಾ ನಾಯಕ ಬಿ.ಎಸ್.ಯಡಿಯೂರಪ್ಪನವರು ಚುನಾವಣಾ ಪ್ರಸ್ತಾವನೆ ಮಂಡಿಸಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ 15 ಜನರನ್ನು ಚುನಾಯಿಸಬೇಕೆಂದು ಸೂಚಿಸಿದರು. ಅಂದಾಜುಗಳ ಸಮಿತಿಗೆ 18 ಮಂದಿ ಸದಸ್ಯರು, ಸಾರ್ವಜನಿಕ ಉದ್ದಿಮೆಗಳ ಸಮಿತಿಗೆ 15 ಸದಸ್ಯರು ಹಾಗೂ ಹಕ್ಕುಬಾಧ್ಯತಾ ಸಮಿತಿಗೆ 9 ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸಿದರು. ಅಧೀನ ಶಾಸನ ರಚನಾ ಸಮಿತಿ, ಸರ್ಕಾರಿ ಭರವಸೆಗಳ ಸಮಿತಿ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ 15 ಸದಸ್ಯರನ್ನು ಚುನಾಯಿಸಬೇಕು. ಖಾಸಗಿ ವಿಧೇಯಕಗಳ ಹಾಗೂ ನಿರ್ಣಯಗಳ ಸಮಿತಿಗೆ 10 ಮಂದಿ ಸದಸ್ಯರು ಹಾಗೂ ವಸತಿ ಸೌಕರ್ಯಗಳ ಸಮಿತಿಗೆ 12 ಮಂದಿ ಸದಸ್ಯರನ್ನು ಚುನಾಯಿಸಬೇಕೆಂದು ಸಭಾ ನಾಯಕರು ಸೂಚಿಸಿದರು.

ನಂತರ ವರದಿಗಳನ್ನು ಒಪ್ಪಿಸುವ ಕಲಾಪದಲ್ಲಿ ಅಂದಾಜುಗಳ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಗೌಡ ಅವರು 2018-19ನೇ ಸಾಲಿನ ಅಂದಾಜುಗಳ ಸಮಿತಿಯ ಮೊದಲನೇ ವರದಿಯನ್ನು ಸದನಕ್ಕೆ ಒಪ್ಪಿಸಿದರು. ಸರ್ಕಾರಿ ಭರವಸೆಗಳ ಸಮಿತಿಯ 2018-19ನೇ ಸಾಲಿನ 4ನೇ ಮತ್ತು 5ನೇ ವರದಿಗಳನ್ನು ಸಮಿತಿಯ ಸದಸ್ಯ ಸಿದ್ದು ಸವದಿ ಮಂಡಿಸಿದ್ದು, ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷ ಈಶ್ವರ್ ಖಂಡ್ರೆ 2018-19ನೇ ಸಾಲಿನ ಸಮಿತಿಯ ಮೊದಲ ಮತ್ತು 2ನೇ ವರದಿಗಳನ್ನು ಸದನಕ್ಕೆ ಒಪ್ಪಿಸಿದರು. ಉಪ ಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಅವರು ತಮ್ಮ ಮುಂದಿರುವ ವರದಿಗಳನ್ನು ಸದನದಲ್ಲಿ ಮಂಡಿಸಿದರು.

Intro:ಬೆಂಗಳೂರು : ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ಸದನ ಸಭಾಧ್ಯಕ್ಷರಿಗೆ ನೀಡಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ಪ್ರಕಟಿಸಿದರು.Body:ವಿಧಾನಸಭೆಯಲ್ಲಿ ಮುಖ್ಯಮಂತ್ರಿ, ಸಭಾನಾಯಕ ಬಿ.ಎಸ್.ಯಡಿಯೂರಪ್ಪನವರು ಚುನಾವಣಾ ಪ್ರಸ್ತಾವ ಮಂಡಿಸಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ 15 ಜನರನ್ನು ಚುನಾಯಿಸಬೇಕೆಂದು ಸೂಚಿಸಿದರು.
ಅಂದಾಜುಗಳ ಸಮಿತಿಗೆ 18 ಮಂದಿ ಸದಸ್ಯರು, ಸಾರ್ವಜನಿಕ ಉದ್ದಿಮೆಗಳ ಸಮಿತಿಗೆ 15 ಸದಸ್ಯರನ್ನು ಹಾಗೂ ಹಕ್ಕುಬಾಧ್ಯತಾ ಸಮಿತಿಗೆ 9 ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸಿದರು. ಅಧೀನ ಶಾಸನ ರಚನಾ ಸಮಿತಿಗೆ, ಸರ್ಕರಿ ಭರವಸೆಗಳ ಸಮಿತಿ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ 15 ಸದಸ್ಯರನ್ನು ಚುನಾಯಿಸಬೇಕು. ಖಾಸಗಿ ವಿಧೇಯಕಗಳ ಹಾಗೂ ನಿರ್ಣಯಗಳ ಸಮಿತಿಗೆ 10 ಮಂದಿ ಸದಸ್ಯರು ಹಾಗೂ ವಸತಿ ಸೌಕರ್ಯಗಳ ಸಮಿತಿಗೆ 12 ಮಂದಿ ಸದಸ್ಯರನ್ನು ಚುನಾಯಿಸಬೇಕೆಂದು ಸಭಾನಾಯಕರು ಸೂಚಿಸಿದರು.
ನಂತರ ವರದಿಗಳನ್ನು ಒಪ್ಪಿಸುವ ಕಲಾಪದಲ್ಲಿ ಅಂದಾಜುಗಳ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಗೌಡ ಅವರು 2018-19ನೇ ಸಾಲಿನ ಅಂದಾಜುಗಳ ಸಮಿತಿಯ ಮೊದಲನೇ ವರದಿಯನ್ನು ಸದನಕ್ಕೆ ಒಪ್ಪಿಸಿದರು. ಸರ್ಕಾರಿ ಭರವಸೆಗಳ ಸಮಿತಿಯ 2018-19ನೇ ಸಾಲಿನ 4 ನೇ ಮತ್ತು 5 ನೇ ವರದಿಗಳನ್ನು ಸಮಿತಿಯ ಸದಸ್ಯ ಸಿದ್ದು ಸವದಿ ಮಂಡಿಸಿದರು. ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷ ಈಶ್ವರ್ ಖಂಡ್ರೆ 2018-19ನೇ ಸಾಲಿನ ಸಮಿತಿಯ ಮೊದಲ ಮತ್ತು 2ನೇ ವರದಿಗಳನ್ನು ಸದನಕ್ಕೆ ಒಪ್ಪಿಸಿದರು. ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಅವರು ತಮ್ಮ ಮುಂದಿರುವ ವರದಿಗಳನ್ನು ಸದನದಲ್ಲಿ ಮಂಡಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.