ETV Bharat / state

'ಸಂವಿಧಾನಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ದೇಶವನ್ನು ಕೊಂಡೊಯ್ಯುವ ಯತ್ನ'

ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ಗಾಂಧಿ ಸ್ಮಾರಕ ನಿಧಿ ಕಾರ್ಯಕರ್ತರ ಸಮಾವೇಶ ನಡೆಯಿತು.

South Zone Gandhi Memorial Fund Workers Conference held at Gandhi Bhavan
ಗಾಂಧಿ ಭವನದಲ್ಲಿ ನಡೆದ ದಕ್ಷಿಣ ವಲಯ ಗಾಂಧಿ ಸ್ಮಾರಕ ನಿಧಿ ಕಾರ್ಯಕರ್ತರ ಸಮಾವೇಶ
author img

By

Published : Jan 22, 2023, 9:09 AM IST

ಬೆಂಗಳೂರು: "ಅಧಿಕಾರದಲ್ಲಿರುವವರು ಭಾರತೀಯ ಸಂವಿಧಾನಕ್ಕೆ ವಿರುದ್ಧವಾದ ಬೇರೆ ದಾರಿಯಲ್ಲಿ ರಾಷ್ಟ್ರವನ್ನು ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಕಂಡಿರದ ಬೆದರಿಕೆಯನ್ನು ಜನರೀಗ ಅನುಭವಿಸುತ್ತಿದ್ದಾರೆ" ಎಂದು ನವದೆಹಲಿಯ ಕೇಂದ್ರ ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿ ಸಂಜೋಯ್ ಸಿಂಘಾ ಟೀಕಿಸಿದರು. ಗಾಂಧಿ ಭವನದಲ್ಲಿ ಶನಿವಾರ ನಡೆದ 2 ದಿನಗಳ ದಕ್ಷಿಣ ವಲಯ ಗಾಂಧಿ ಸ್ಮಾರಕ ನಿಧಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

"ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳು ಧ್ರುವೀಕರಣಗೊಂಡಿವೆ. ಶ್ರೀಸಾಮಾನ್ಯನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ. ಕಾರ್ಯನಿರ್ವಹಿಸಲು ಸಂಸ್ಥೆಗಳಿಗೆ ಮುಕ್ತ ವಾತಾವರಣವಿಲ್ಲ. ಈಗ ಅಧಿಕಾರದಲ್ಲಿರುವ ಜನರು ನ್ಯಾಯಾಂಗವನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ದೂರಿದರು.

ಗಾಂಧಿ ಚಿಂತನೆಗಳಿಂದ ಈ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ದೇಶ ಉಳಿಸುವ ಶಕ್ತಿ ಅದಕ್ಕಿದೆ. ಹೀಗಾಗಿ ಎಲ್ಲರನ್ನು ಒಗ್ಗೂಡಿಸುವ ಮತ್ತು ಹೊಸ ಪೀಳಿಗೆಯೊಂದಿಗೆ ಸಂಪರ್ಕ ಸಾಧಿಸುವಂತಹ ಚಳುವಳಿಯನ್ನು ನಿರ್ಮಿಸಲು ಎಲ್ಲ ಗಾಂಧಿವಾದಿಗಳಿಗೆ ಅವರು ಕರೆ ಕೊಟ್ಟರು.

"ಸರ್ಕಾರಗಳು ವ್ಯವಸ್ಥಿತವಾಗಿ ಮಹಾತ್ಮ ಗಾಂಧೀಜಿಯವರನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿವೆ. ಬ್ರಿಟಿಷರು ಕೂಡ ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದಂತೆ ಗಾಂಧೀಜಿಯನ್ನು ಕೀಳು ಭಾಷೆಯಲ್ಲಿ ನಿಂದಿಸಿರಲಿಲ್ಲ" ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವುಡೆ ಪಿ.ಕೃಷ್ಣ ವಿಷಾದಿಸಿದರು.

ಗಾಂಧಿವಾದಿ ರಾಮಚಂದ್ರ ರಾಹಿ ಮಾತನಾಡಿ, "ಅಭಿವೃದ್ಧಿಯ ಹೆಸರಿನಲ್ಲಿ ಹುಚ್ಚು ಜನಾಂಗವನ್ನು ಹುಟ್ಟು ಹಾಕಲಾಗುತ್ತಿದೆ. ಪ್ರಕೃತಿಯ ಶೋಷಣೆ ಮಾಡಲಾಗುತ್ತಿದೆ. ಈಗಿನ ಜನಾಂಗವು ಭೂಮಿಯನ್ನು ನಾಶಪಡಿಸಲು ಹೊರಟಿದೆ. ಇತ್ತೀಚಿನ ಜೋಶಿಮಠದ ಘಟನೆ ಹಿಮಾಲಯವನ್ನು ಕೆಲವರ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಉದಾಹರಣೆ. ನಾವು ಭವಿಷ್ಯವನ್ನು ನಾಶಮಾಡಲು ಅಭಿವೃದ್ಧಿಯ ಕುರುಡು ಮಾರ್ಗ ಅನುಸರಿಸುತ್ತಿದ್ದೇವೆ. ಹೀಗಾಗಿ ಯುವಕರು ಗಾಂಧೀಜಿಯ ದೃಷ್ಟಿಕೋನದಿಂದ ಅಭಿವೃದ್ಧಿಯ ಬಗ್ಗೆ ಯೋಚಿಸಬೇಕು" ಎಂದು ಕರೆ ಕೊಟ್ಟರು.

ಇದನ್ನೂ ಓದಿ: ರಾಜ್ಯದಲ್ಲಿ ಆರ್​ಎಸ್​ಎಸ್​ ತತ್ವ ಸಿದ್ಧಾಂತವನ್ನು ಸರ್ಕಾರ ಜಾರಿಗೆ ತರುತ್ತಿದೆ: ಪ್ರಿಯಾಂಕ್ ಆರೋಪ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.