ಬೆಂಗಳೂರು:ದೀಪಾವಳಿ ಹಬ್ಬಕ್ಕೆ ಕೌಂಟ್ಡೌನ್ ಬೆನ್ನಲ್ಲೇ ಬೆಂಗಳೂರಿನ ಪೊಲೀಸರು ಅಲರ್ಟ್ ಆಗಿದ್ದಾರೆ.. ಕಳೆದ ಕೆಲ ದಿನಗಳ ಹಿಂದೆ ನಡೆದ ನ್ಯೂ ತರಗು ಪೇಟೆಯ ಭೀಕರ ಸ್ಫೋಟದಿಂದ ಎಚ್ಚೆತ್ತ ಪೊಲೀಸರು, ಮತ್ತೊಮ್ಮೆ ಘಟನೆ ಮರುಕಳಿಸದಂತೆ ನಿಗಾವಹಿಸಿದ್ದಾರೆ.ಇದರ ಭಾಗವಾಗಿ ದಕ್ಷಿಣ ವಿಭಾಗದ ಎಲ್ಲಾ ಗೊದಾಮು ಮಾಲೀಕರಿಗೂ ನೋಟಿಸ್ ನೀಡಿದ್ದು, ಖಡಕ್ ಎಚ್ಚರಿಕೆ ನೀಡಲಾಗಿದೆ.
ಕಳೆದ ಕೆಲ ದಿನಗಳ ಹಿಂದಷ್ಟೇ ನ್ಯೂ ತರಗುಪೇಟೆಯಲ್ಲಿ ನಡೆದ ಭಾರಿ ಸ್ಫೋಟ ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೇ ಸ್ಪೋಟದಲ್ಲಿ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಈ ಘಟನೆಗೆ ಅಕ್ರಮವಾಗಿ ಸಂಗ್ರಹಿಸಲಾಗುತಿದ್ದ ಪಟಾಕಿಯೇ ಕಾರಣ ಎಂಬುವುದು ತನಿಖೆ ವೇಳೆ ಸಹ ಬಯಲಾಗಿತ್ತು. ಈ ಸಂಗತಿ ತಿಳಿದ ಬಳಿಕ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಅಲರ್ಟ್ ಆಗಿದ್ದು, ಘಟನೆ ಮರುಕಳಿಸದಂತೆ ನಿಗಾವಹಿಸುವುದರ ಜೊತೆಗೆ ಹಲವು ಗೊದಾಮಿಗೆ ನೋಟಿಸ್ ನೀಡಲಾಗಿದೆ.
ನ್ಯೂ ತರಗುಪೇಟೆಯಂತಹ ಅನೇಕ ಜನನಿಬಿಡ ಪ್ರದೇಶಗಳಲ್ಲಿ ಪಟಾಕಿ ಸಾಗಾಟದ ಕೆಲಸ ನಡೆಯೊ ಶಂಕೆ ಇದೆ.. ಹೀಗಾಗಿ ಅಕ್ರಮಗಳಿಗೆ ಬ್ರೇಕ್ ಹಾಕಲು ಮುಂದಾದ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ವಿಭಾಗದ ಎಲ್ಲಾ ಗೋದಾಮು ಮಾಲೀಕರಿಗೆ ಶಾಕ್ ನೀಡಿದ್ದಾರೆ. ಅಲ್ಲದೇ, ಇದರ ಮೊದಲ ಪ್ರಯತ್ನವಾಗಿ ವಿವಿಪುರಂನ ನ್ಯೂ ತರಗುಪೇಟೆ ಹಾಗೂ ಸುತ್ತಮುತ್ತ ಏರಿಯಾದ ಗೋಡೌನ್ಸ್ ಮಾಲೀಕರಿಗೆ ನೋಟಿಸ್ ನೀಡಿ ಬುಲಾವ್ ಮಾಡಲಾಗಿದೆ.
ಈ ವೇಳೆ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಲಿರುವ ಪೊಲೀಸರು, ಗೋದಾಮುಗಳು ಎಷ್ಟು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದೆ.. ಯಾವ್ಯಾವ ವಸ್ತುಗಳ ಸರಬರಾಜು ಮಾಡಲಾಗುತ್ತಿದೆ..ಇನ್ನು ಯಾವುದಾದರೂ ಸ್ಫೋಟಕ ಅಥವಾ ಪಟಾಕಿ ವಸ್ತುಗಳ ಸರಬರಾಜು ನಡೆಯುತ್ತಿದೆಯೇ..ಇದಕ್ಕೆ ಸಂಬಂಧಪಟ್ಟ ದಾಖಲಾತಿಗಳೇನು ಎಂಬುದನ್ನು ಸಲ್ಲಿಸಬೆಕಾಗಿದೆ.. ಇದರ ಜೊತೆಗೆ ಗ್ಯಾಸ್ ಹಾಗೂ ಸಿಲಿಂಡರ್ಗಳು ಯಾವುದೇ ಗೋದಾಮಿನಲ್ಲಿದ್ರೂ ಅದರ ಬಗ್ಗೆ ಮಾಹಿತಿ ಕೊಡುವಂತೆ ಸೂಚನೆ ನೀಡಲಾಗುತ್ತಿದೆ.. ಇನ್ನು ಪೊಲೀಸರ ಈ ನಡೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಜನರು ಸಹ ಪೊಲೀಸರ ಪ್ರಯತ್ನಕ್ಕೆ ಕೈಜೋಡಿಸುವುದಾಗಿ ತಿಳಿಸಿದ್ದಾರೆ.
ಇದಷ್ಟೇ ಅಲ್ಲದೇ, ಎಲ್ಲಾ ಠಾಣೆಗಳ ಇನ್ಸ್ಪೆಕ್ಟರ್ಗಳಿಗೂ ಡಿಸಿಪಿ ಹರಿಶ್ ಪಾಂಡೆ ಖಡಕ್ ಸೂಚನೆ ನೀಡಿದ್ದು, ಖುದ್ದು ಅಧಿಕಾರಿಗಳು ತೆರಳಿ ಗೋದಾಮುಗಳ ಪರಿಶೀಲನೆ ನಡೆಸುವಂತೆ ತಿಳಿಸಿದ್ದಾರೆ. ಅಲ್ಲದೇ, ಈ ವೇಳೆ ಯಾವುದೇ ಅಕ್ರಮ ಅಥವಾ ಅನುಮತಿ ಇಲ್ಲದ ಚಟುವಟಿಕೆಗಳು ಕಂಡು ಬಂದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.
ಡಿಸಿಪಿ ಹರೀಶ್ ಪಾಂಡೆ ಮಾಹಿತಿ:
ಈಗಾಗಲೇ ವಿಭಾಗದ ವಿವಿಪುರಂ ಠಾಣಾ ವ್ಯಾಪ್ತಿಯಲ್ಲಿ ಗೋದಾಮು ಮಾಲೀಕರ ಮೀಟಿಂಗ್ ಮಾಡಲಾಗಿದೆ. ನ್ಯೂ ತರಗಪೇಟೆಯ ಗೋದಾಮಿನಲ್ಲಿ ಸ್ಫೋಟವಾಗಿರುವಲ್ಲಿ ತಿಳಿದಿರುವಂತೆ ಮೂವರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಸ್ಫೋಟದಲ್ಲಿ ಇಬ್ಬರ ಸಾವು: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಜಮೀರ್