ETV Bharat / state

ದೀಪಾವಳಿ ಹಬ್ಬಕ್ಕೆ ಕೊರೊನಾ ಸೋಂಕಿನ ಮೇಲೆ ನಿಯಂತ್ರಣ: ಕೇಂದ್ರ ಸಚಿವ ಡಾ.ಹರ್ಷವರ್ಧನ್

ದೀಪಾವಳಿ ಹಬ್ಬಕ್ಕೆ ಕೊರೊನಾ ನಿಯಂತ್ರಿಣ ಸಾಧಿಸುವ ಭರವಸೆ ಇದೆ. ಈ ವರ್ಷದ ಕೊನೆಗೆ ಸೋಂಕಿಗೆ ಔಷಧಿ ಕೂಡಾ ಕಂಡು ಹಿಡಿಯುವುದಾಗಿ ಸಚಿವ ಡಾ.ಹರ್ಷವರ್ಧನ್ ತಿಳಿಸಿದರು.

soonly find a medicine for Corona
ವೆಬಿನಾರ್ ಸಂವಾದದಲ್ಲಿ ಸಚಿವ ಡಾ.ಹರ್ಷವರ್ಧನ್
author img

By

Published : Aug 31, 2020, 12:04 AM IST

ಬೆಂಗಳೂರು: ಮುಂಬರುವ ದೀಪಾವಳಿ ಹಬ್ಬದ ವೇಳೆಗೆ ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಮೇಲೆ ನಿಯಂತ್ರಣ ಸಾಧಿಸುವ ಭರವಸೆಯನ್ನು ಹೊಂದಿದ್ದೇವೆ ಎಂದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ತಿಳಿಸಿದರು.

ವೆಬಿನಾರ್ ಸಂವಾದವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಿ.ಅನಂತಕುಮಾರ್‌ ಅವರೊಂದಿಗಿನ ತಮ್ಮ ಒಡನಾಟವನ್ನು ಹಾಗೂ ದೇಶಕ್ಕೆ ಅವರ ಕೊಡುಗೆ ಹಾಗೂ ನಿಷ್ಠೆಯನ್ನು ಅವರು ಶ್ಲಾಘಿಸಿದರು.

ಭಾರತ ದೇಶ ಕೋವಿಡ್‌ ಸಾಂಕ್ರಾಮಿಕ ರೋಗವನ್ನು ಬಹಳ ವ್ಯವಸ್ಥಿತವಾಗಿ ನಿಭಾಯಿಸುತ್ತಿದೆ. ಜನವರಿ 30ರಂದು ದೇಶದಲ್ಲಿ ಮೊದಲ ಕೋವಿಡ್‌ ಪ್ರರಕಣ ಕೇರಳದಲ್ಲಿ ಪತ್ತೆಯಾಯಿತು. ಇದಕ್ಕೂ ಮುನ್ನವೇ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಮೊದಲ ಸಭೆಯನ್ನು ಮಾಡಲಾಗಿತ್ತು.

soonly find a medicine for Corona
ವೆಬಿನಾರ್ ಸಂವಾದದಲ್ಲಿ ಸಚಿವ ಡಾ.ಹರ್ಷವರ್ಧನ್

ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಿರಿಯ ಮಂತ್ರಿಗಳು ಹಾಗೂ ಅಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು. ಮೊದಲು ಪುಣೆಯಲ್ಲಿ ಮಾತ್ರ ಒಂದು ಪರೀಕ್ಷಾ ಕೇಂದ್ರವಿತ್ತು. ಇಂದು 1,583 ಪರೀಕ್ಷಾ ಕೇಂದ್ರಗಳಿವೆ. ಏಪ್ರಿಲ್‌ ಮೊದಲ ವಾರ ದೇಶದಲ್ಲಿ ಪ್ರತಿದಿನ ಕೇವಲ 6 ಸಾವಿರ ಪರೀಕ್ಷೆಗಳು ನಡೆಯುತ್ತಿದ್ದವು. ಇದೀಗ ಪ್ರತಿದಿನ ದೇಶದಲ್ಲಿ 1 ಲಕ್ಷ ಪರೀಕ್ಷೆಗಳನ್ನು ನಡೆಸಲಾಗುತ್ತಿದ ಎಂದರು.

ಕೋವಿಡ್‌ ಪ್ರಾರಂಭದ ಸಮಯದಲ್ಲಿ ಪಿಪಿಇ ಕಿಟ್‌ಗಳು, ಎನ್‌ 95 ಮಾಸ್ಕ್‌ಗಳು ಹಾಗೂ ವೆಂಟಿಲೇಟರ್‌ಗಳ ಕೊರತೆ ಎದ್ದು ಕಾಣುತ್ತಿತ್ತು. ಆದರೆ, ಪ್ರಸ್ತುತ ದೇಶದಲ್ಲಿ ಪ್ರತಿ ದಿನ 5 ಲಕ್ಷ ಪಿಪಿಇ ಕಿಟ್‌ ಉತ್ಪಾದನೆ ಮಾಡಲಾಗುತ್ತಿದೆ.

7 ಕೊರೊನಾ ಔಷಧಿಗಳು ಟ್ರಯಲ್‌ ಹಂತದಲ್ಲಿ ನಡೆಯುತ್ತಿವೆ. ಅದರಲ್ಲಿ ಮೂರು ಕ್ಲಿನಿಕಲ್‌ ಟ್ರಯಲ್​ಗಳು ಹಾಗೂ 4 ಫ್ರಿ ಕ್ಲಿನಿಕಲ್ ಟ್ರಯಲ್‌ ಹಂತದಲ್ಲಿವೆ. ಈ ವರ್ಷದ ಕೊನೆಯಲ್ಲಿ ವ್ಯಾಕ್ಸಿನ್‌ ಬರುವ ಸಾಧ್ಯತೆ ಇದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.