ETV Bharat / state

ಮಹಾಮಾರಿ ಕೊರೊನಾ ಗೆದ್ದು ಬಂದ ಮುದ್ದು ಕಂದಮ್ಮಗಳು!

ಅದೆಷ್ಟೋ ಮಂದಿ ಕೊರೊನಾ ಕೆಂಗಣ್ಣಿಗೆ ಸಿಲುಕಿದ್ದರೂ ಸಹ ಒಂದಿಷ್ಟು ಮಂದಿ ಗುಣಮುಖರಾಗಿ ಬರುತ್ತಿದ್ದಾರೆ. ಸದ್ಯ 10 ತಿಂಗಳ ಕಂದಮ್ಮನೂ ಸಹ ಕೊರೊನಾದಿಂದ ಗುಣಮುಖವಾಗಿ ಡಿಸ್ಜಾರ್ಜ್ ಆಗಿರುವುದು ಸಂತಸದ ವಿಷಯ.

Some were healed by Corona
ಮಹಾಮಾರಿ ಕೋರೊನಾದಿಂದ ಗುಣಮುಖರಾದರು ಮುದ್ದು ಕಂದಮ್ಮಗಳು..‌
author img

By

Published : Apr 15, 2020, 3:41 PM IST

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾಗೆ ಈವರೆಗೆ 11 ಮಂದಿ ಬಲಿಯಾಗಿದ್ದು, ಹಲವರು ಗುಣಮುಖರಾಗಿ ಡಿಸ್ಜಾರ್ಜ್ ಆಗುತ್ತಿರುವುದು ಸಮಾಧಾನಕರ ವಿಷಯವಾಗಿದೆ.

ಈವರೆಗೆ 277 ಸೋಂಕಿತರ ಪೈಕಿ 75‌ಜನ ಗುಣಮುಖರಾಗಿದ್ದಾರೆ. ಕೊರೊನಾ‌ ವೈರಸ್ ಸೀಮಿತ ವಯಸ್ಸಿನವರಿಗೆ ಹರಡುತ್ತೆ ಅನ್ನುವ ವಿಚಾರವೀಗ ಸುಳ್ಳಾಗಿದ್ದು, ಎಲ್ಲಾ ರೀತಿಯ ವಯಸ್ಕರಲ್ಲೂ ಸೋಂಕು ಹರಡುತ್ತಿದೆ. ಸೋಂಕು ತಗುಲಿದ್ದ ಮಕ್ಕಳಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಿ ಹಲವರು ಗುಣಮುಖರಾಗಿರುವುದು ಖುಷಿಯ ಸಂಗತಿಯೇ ಸರಿ. ‌

ಸುಮಾರು 19 ಮಕ್ಕಳಿಗೆ ಸೋಂಕು ತಗುಲಿದ್ದು, ಹಲವರು ಸಂಪೂರ್ಣ ಗುಣಮುಖರಾಗಿದ್ದಾರೆ. ಅದರಲ್ಲಿ ಬೆಂಗಳೂರಿನ ನಿವಾಸಿ ರೋಗಿ ನಂ-50ರ ಮಗಳಿಗೆ ಅಂದರೆ 7 ವರ್ಷದ ಬಾಲಕಿಗೆ ತಂದೆಯಿಂದ ಸೋಂಕು ತಗುಲಿತ್ತು. ನೆದರ್ಲೆಂಡ್ಸ್‌ ನಿಂದ ಅವರ ತಂದೆ ಪ್ರಯಾಣ ಬೆಳೆಸಿದ್ದು, ಅವರಿಂದ ಮಗಳಿಗೆ ಸೋಂಕು ಹರಡಿತ್ತು. ಏಪ್ರಿಲ್ 14 ರಂದು ಬಾಲಕಿ ಗುಣಮುಖಳಾಗಿ ಡಿಸ್ಜಾರ್ಜ್ ಆಗಿದ್ದಾಳೆ.

ಮತ್ತೊಂದು ಪ್ರಕರಣ ರೋಗಿ ನಂ-56, ದಕ್ಷಿಣ ಕನ್ನಡದ 10 ತಿಂಗಳ ಗಂಡು ಮಗುವಿಗೆ ಸೋಂಕು ಪತ್ತೆಯಾಗಿತ್ತು.‌ ಆದರೆ ಯಾವುದೇ ಕೋವಿಡ್-19 ಪ್ರಭಾವಿತ ದೇಶಕ್ಕೆ ಪ್ರಯಾಣಿಸಿದ ಹಿನ್ನಲೆ ಇರಲಿಲ್ಲ. ಪ್ರಥಮ ಮಾಹಿತಿಯ ಪ್ರಕಾರ, ಪೋಷಕರು ಮಗುವಿನೊಂದಿಗೆ ಕೆಲವು ದಿನಗಳ ಹಿಂದೆ ಕೇರಳಕ್ಕೆ ಭೇಟಿ ನೀಡಿರುವ ಹಿನ್ನಲೆ ಇತ್ತು.‌ ಪ್ರಾಥಮಿಕ ಸಂಪರ್ಕದಲ್ಲಿ 6 ವ್ಯಕ್ತಿಗಳನ್ನು ಗುರುತಿಸಿ, ಹೋಂ ಕ್ವಾರೆಂಟೈನ್ ಮಾಡಲಾಗಿತ್ತು.

ಇದೀಗ 10 ತಿಂಗಳ ಮಗು ಸಹ ಕೊರೊನಾದಿಂದ ಗುಣಮುಖವಾಗಿ ಡಿಸ್ಜಾರ್ಜ್ ಆಗಿದೆ. ಗುಣಮುಖರಾದ ಮಕ್ಕಳಲ್ಲಿ ಈ ಹತ್ತು ತಿಂಗಳ ಮಗುವೇ ಮೊದಲು, ಎರಡನೆಯದ್ದು 7 ವರ್ಷದ ಬಾಲಕಿ. ಅದೇನೆ ಇರಲಿ, ಕೊರೊನಾ ಅನ್ನೋ ಯುದ್ಧವನ್ನೇ ಗೆದ್ದು ಬಂದಿದ್ದು, ಗುಣಮುಖವಾಗಿದ್ದೇ ಸಂತಸದ ವಿಷಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.