ಬೆಂಗಳೂರು: ಶಾಲಾ ಕಾಲೇಜು ಪುನರಾರಂಭ, ತರಗತಿಗಳು ನಡೆಸುವಿಕೆ ಹಾಗೂ ಪರೀಕ್ಷೆಗಳ ಬಗ್ಗೆ ಈ ಶೈಕ್ಷಣಿಕ ವರ್ಷದಲ್ಲಿ ಸರ್ಕಾರದಿಂದ ಸ್ಪಷ್ಟವಾದ ನಿರ್ಧಾರ ಹೊರ ಬೀಳುತ್ತಿಲ್ಲ. ಕಾಲೇಜುಗಳು ಶುರುವಾಗಿದ್ದರೂ ವಿದ್ಯಾರ್ಥಿಗಳು ಬೆರಳೆಣಿಕೆಯಷ್ಟು ಮಾತ್ರ ತರಗತಿಗಳಿಗೆ ಬರುತ್ತಿದ್ದಾರೆ. ಕೆಲವು ಖಾಸಗಿ ಶಾಲೆಗಳು ಅನಧಿಕೃತವಾಗಿ ತರಗತಿ ಆರಂಭಿಸಿ ವಸೂಲಿಗಿಳಿದಿವೆ.
ಈ ಬಗ್ಗೆ ವಿರೋಧ ಪಕ್ಷದ ಮುಖ್ಯ ಸಚೇತಕರು, ಕಾಂಗ್ರೆಸ್ ಮುಖಂಡರಾದ ಎಂ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರ ಈವರೆಗೂ ಕೂಡ ಶಾಲೆ ಕಾಲೇಜುಗಳ ತರಗತಿ ನಡೆಸಲು ಅವಕಾಶ ನೀಡುವ ಬಗ್ಗೆಯೇ ಗೊಂದಲದಲ್ಲಿರುವಾಗ ಶಿಕ್ಷಣ ಸಂಸ್ಥೆಗಳು ಪೋಷಕರಿಂದ ಆನ್‌ಲೈನ್ ತರಗತಿಗಳನ್ನು ಮಾಡಿ, ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿರುವುದಕ್ಕೆ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತವಾಗಿ ಸ್ಪಂದಿಸದಿರುವುದೇ ಕಾರಣ ಎಂದು ದೂರಿದ್ದಾರೆ.
ಈಗಾಗಲೇ ಕೋವಿಡ್ನಿಂದ ಪೋಷಕರು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದು ಎಂಟು ತಿಂಗಳಿನಿಂದ ಶಾಲೆಗಳು ತೆರೆಯದೆ ಆನ್‌ಲೈನ್ ತರಗತಿಗಳು ನಡೆಯುತ್ತಿದ್ದು ಮಕ್ಕಳಿಗಿಂತ ಪೋಷಕರೇ ಪಾಠ ಕೇಳುವಂತಾಗಿದೆ ಎಂದರು.
ಇಷ್ಟೆಲ್ಲಾ ಗೊಂದಲಗಳ ನಡುವೆಯೇ ಖಾಸಗಿ ಶಾಲಾ-ಕಾಲೇಜುಗಳು ಶುಲ್ಕ ವಸೂಲಿಗೆ ಮುಂದಾಗಿರುವುದು ಅಮಾನವೀಯ, ಸರ್ಕಾರ ಜಾತಿಗೊಂದು ನಿಗಮ ಮಂಡಳಿ ರಚಿಸುವುದರ ಬದಲು ಪೋಷಕರ ಸಮಸ್ಯೆಗೆ ಪರಿಹಾರ ನೀಡಲಿ ಎಂದು ನಾರಾಯಣಸ್ವಾಮಿ ಸಲಹೆ ನೀಡಿದ್ದಾರೆ.
ಜಾತಿಗೊಂದು ನಿಗಮ ಮಂಡಳಿ ರಚಿಸುವುದರ ಬದಲು ಪೋಷಕರ ಸಮಸ್ಯೆಗಳಿಗೆ ಪರಿಹಾರ ನೀಡಿ : ಎಂ ನಾರಾಯಣಸ್ವಾಮಿ - Karnataka government decision on School reopen
ಕೋವಿಡ್ ಗೊಂದಲಗಳ ನಡುವೆಯೇ ಖಾಸಗಿ ಶಾಲಾ-ಕಾಲೇಜುಗಳು ಶುಲ್ಕ ವಸೂಲಿಗೆ ಮುಂದಾಗಿರುವುದು ಅಮಾನವೀಯ, ಸರ್ಕಾರ ಜಾತಿಗೊಂದು ನಿಗಮ ಮಂಡಳಿ ರಚಿಸುವುದರ ಬದಲು ಪೋಷಕರ ಸಮಸ್ಯೆಗೆ ಪರಿಹಾರ ನೀಡಲಿ ಎಂದು ನಾರಾಯಣಸ್ವಾಮಿ ಸಲಹೆ ನೀಡಿದ್ದಾರೆ.