ಬೆಂಗಳೂರು: ನಗರದಲ್ಲಿರುವ ರಸ್ತೆ ಗುಂಡಿಗಳಿಂದ ಮುಕ್ತಿ ಪಡೆಯಲು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ.
ನಗರದಲ್ಲಿರುವ ರಸ್ತೆ ಗುಂಡಿಗಳನ್ನು ಸರಿಯಾಗಿ ಮುಚ್ಚದಿರುವ ಕುರಿತು ವ್ಯಾಪಕ ಆರೋಪಗಳಿವೆ. ಹಾಗೆಯೇ ಸಾಕಷ್ಟು ಬಾರಿ ಇವೇ ಗುಂಡಿಗಳಿಂದ ಅಪಘಾತಗಳೂ ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಕೆಲ ಸಂಘಟನೆಗಳು ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಸೇರಿದಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿವೆ.
ಅರ್ಜಿ ವಿಚಾರಣೆ ನಡೆಸುತ್ತಿರುುವ ಹೈಕೋರ್ಟ್, ನಗರದಲ್ಲಿರುವ ರಸ್ತೆ ಗುಂಡಿಗಳು ಹಾಗೂ ಕಳಪೆಯಾಗಿರುವ ರಸ್ತೆಗಳ ಕುರಿತು ವರದಿ ಕೇಳಿದ್ದು, ಈ ಮಾಹಿತಿಯನ್ನು ಸಾರ್ವಜನಿಕರಿಂದ ಪಡೆದುಕೊಳ್ಳಲು ಕೆಎಸ್ಎಲ್ಎಸ್ಎ ವಾಟ್ಸಾಪ್ ಬಳಸಿಕೊಳ್ಳಲು ಕರೆ ನೀಡಿದೆ.
ಓದಿ: ವಿಚ್ಛೇದನ ಪಡೆಯದೆ ಮತ್ತೊಬ್ಬ ಪುರುಷನ ಜೊತೆಗಿನ ವಾಸ ಅಪರಾಧ: ಅಲಹಾಬಾದ್ ಹೈಕೋರ್ಟ್
ಅದರಂತೆ, ಸಾರ್ವಜನಿಕರು ತಮ್ಮ ಸುತ್ತಮುತ್ತಲ ರಸ್ತೆ ಗುಂಡಿಗಳ ಪೋಟೋ ತೆಗೆದು ಮೊಬೈಲ್ ಸಂಖ್ಯೆ 8095500118ಕ್ಕೆ ಕಳುಹಿಸಬಹುದಾಗಿದೆ. ಹಾಗೆಯೇ, ರಸ್ತೆ ಗುಂಡಿ ಇರುವ ಲೊಕೇಷನ್ ಕೂಡ ಕಳುಹಿಸಿದರೆ, ಈ ಕುರಿತು ಕೆಎಸ್ಎಲ್ಎಸ್ಎ ಪರಿಶೀಲಿಸಿ, ನ್ಯಾಯಾಲಯದ ಗಮನಕ್ಕೆ ತರಲಿದೆ.