ಬೆಂಗಳೂರು: ದೇಶ ಕಾಯೋ ಯೋಧನೋರ್ವ ಪೊಲೀಸ್ ಕಾನ್ ಸ್ಟೇಬಲ್ ಆಗಿರುವ ತನ್ನ ಪತ್ನಿಯು ಪರಪುರುಷನೊಂದಿಗೆ ಸಂಬಂಧ ಹೊಂದಿ ತನಗೆ ಮೋಸ ಮಾಡಿರುವುದಾಗಿ ಆರೋಪ ಮಾಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಮರಾಠ ರೆಜಿಮೆಂಟ್ನಲ್ಲಿ ಯೋಧ ನಾಗಿರುವ ಪ್ರಶಾಂತ್ ಮೋಸಕ್ಕೆ ಒಳಗಾದವರು. ಹೆಂಡತಿ ಪೂರ್ಣಿಮಾ ಎಂಬಾಕೆ ಮೋಸ ಮಾಡಿದ ಆರೋಪ ಎದುರಿಸುತ್ತಿದ್ದಾಳೆ. ಕಾನ್ಸ್ಟೇಬಲ್ ಆಗಿರುವ ಹೆಂಡತಿ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ನ್ಯಾಯಕ್ಕಾಗಿ ಗೃಹ ಸಚಿವರ ಭೇಟಿಯಾಗಿ ದೂರು ನೀಡಿದ್ದಾರೆ. ಸಮವಸ್ತ್ರ ಧರಿಸಿ ಗೃಹ ಸಚಿವರ ಮುಖೇನ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ಗೆ ದೂರು ನೀಡಿದ್ದಾರೆ.
ಮಡಿಕೇರಿ ಮೂಲದ ಪ್ರಶಾಂತ್ ಆರು ತಿಂಗಳ ಹಿಂದೆ ಗುರುಹಿರಿಯರ ಸಮ್ಮುಖದಲ್ಲಿ ಸಂಪ್ರದಾಯವಾಗಿ ಕೊಡಗಿನ ಗೋಣಿಕೊಪ್ಪಲು ಠಾಣೆಯ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ಪೂರ್ಣಿಮಾರೊಂದಿಗೆ ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ನಂತರ ಕರ್ತವ್ಯಕ್ಕಾಗಿ ಜಮ್ಮು ಕಾಶ್ಮೀರಕ್ಕಾಗಿ ಹೋಗಿದ್ದರು. ಮದುವೆಯಾದ ಕೆಲ ತಿಂಗಳ ಬಳಿಕ ಹೆಂಡತಿಯು ಅದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ಜೊತೆ ಸಂಬಂಧ ಹೊಂದಿರುವುದು ಗೊತ್ತಾಗಿದೆ.
ಈ ವಿಚಾರ ತಿಳಿದು ಸಾಕಷ್ಟು ಬಾರಿ ಹೆಂಡತಿಗೆ ಮನವೊಲಿಸಿದರೂ ಪತ್ನಿ ಪೂರ್ಣಿಮಾ ಕೇಳೋಕೆ ತಯಾರಾಗಿಲ್ಲ ಎಂದು ಆಳಲು ತೋಡಿಕೊಂಡಿದ್ದಾನೆ. ಅಕ್ರಮ ಸಂಬಂಧ ಬಗ್ಗೆ ಗಂಡ ಪ್ರಶ್ನಿಸಿದಕ್ಕೆ ಇಲ್ಲ ನಾವು ಅಣ್ಣ-ತಂಗಿ ಎಂದು ನಂಬಿಸಿದ್ದಾರೆ. ಬಳಿಕ ಪತ್ನಿಯ ನಡವಳಿಕೆ ಮೇಲೆ ಅನುಮಾನಪಟ್ಟಿದ್ದಾನೆ. ಕೂಲಂಕುಷವಾಗಿ ವಿಚಾರಿಸಿದಾಗ ಮೋಹನ್, ಪೂರ್ಣಿಮಾಗೆ ವಿಡಿಯೋ ಕಾಲ್ ಹಾಗೂ ಮೆಸೇಜ್ ಮಾಡುತ್ತಿರುವುದು ಗೊತ್ತಾಗಿದೆ. ಈ ಕುರಿತು ಪತ್ನಿಗೆ ಪ್ರಶ್ನಿಸಿದಾಗ ಅಕ್ರಮ ಸಂಬಂಧದ ಬಗ್ಗೆ ಹೆಂಡ್ತಿ ಒಪ್ಪಿಕೊಂಡು ಮತ್ತೆ ಸಂಸಾರ ನಡೆಸೋದಾಗಿ ಭರವಸೆ ನೀಡಿದ್ದಳು. ಇದರಂತೆ ಐದು ಬಾರಿ ತಪ್ಪು ತಿದ್ದಿಕೊಳ್ಳೋಕೆ ಚಾನ್ಸ್ ಕೊಟ್ಟರೂ ನನ್ನ ಪತ್ನಿ ಬದಲಾಗಲಿಲ್ಲ. ಈ ಬಗ್ಗೆ ಮೋಹನ್ಗೆ ಪ್ರಶ್ನಿಸಿದಾಗ ನಿನ್ನ ಹೆಂಡ್ತಿ ಮೇಲೆ ನನಗೂ ಹಕ್ಕಿದೆ ಎಂದು ಹೇಳುವ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.