ಬೆಂಗಳೂರು: ಭಾರತದಲ್ಲಿ 27 ವರ್ಷಗಳ ಬಳಿಕ ದೀಪಾವಳಿ ಹಬ್ಬದಂದೇ ಇಂದು ಕೇತುಗ್ರಸ್ತ ಸೂರ್ಯಗ್ರಹಣ ಗೋಚರ ಆಗುತ್ತಿದೆ. ರಾಜ್ಯದಲ್ಲಿ ಯಾವ ಸಮಯದಲ್ಲಿ ಗ್ರಹಣ ಗೋಚರವಾಗಲಿದೆ ಎಂಬುದರ ಬಗ್ಗೆ ಖಗೋಳ ಶಾಸ್ತ್ರಜ್ಞ ಡಾ.ಆನಂದ್ ಮಾಹಿತಿ ನೀಡಿದ್ದಾರೆ.
ಈ ಬಾರಿ ಸಾಮಾನ್ಯ ಸೂರ್ಯಗ್ರಹಣ ಇದಾಗಿದೆ. ಬೆಂಗಳೂರಿನಲ್ಲಿ ಸಂಜೆ 5.12 ರಿಂದ ಗ್ರಹಣ ಶುರುವಾಗಲಿದೆ. ಸೂರ್ಯಾಸ್ತ ಆಗೋದ್ರಿಂದ ಇದು ಕಾಣುವುದು ಸ್ವಲ್ಪ ಕಷ್ಟ. ಸಂಜೆ 6.30 ರ ವರೆಗೆ ಗ್ರಹಣ ಇರಲಿದೆ. ದಿಗಂತದ ಹತ್ತಿರದಲ್ಲಿ ಇದು ಕಾಣಬಹುದು. ಬಯಲು ಪ್ರದೇಶ ಅಥವಾ ಸೂರ್ಯಾಸ್ತ ಆಗುವ ಸ್ಥಳದಲ್ಲಿ ನೋಡಿದರೆ ಕಾಣಬಹುದು.
ಈ ಬಾರಿ ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಯಾವುದೇ ವಿಶೇಷ ಸಿದ್ಧತೆ ಮಾಡಿಲ್ಲ. ಲೇ ಲಡಾಕ್ ವೀಕ್ಷಣಾಲಯದಿಂದ ನೇರ ಪ್ರಸಾರ ಮಾಡ್ತಾ ಇದ್ದೀವಿ. ಯೂಟ್ಯೂಬ್ ಮೂಲಕ ಇದನ್ನು ನೋಡಬಹುದು ಎಂದು ಆನಂದ್ ತಿಳಿಸಿದರು.
ರಾಜ್ಯದಲ್ಲಿ ಗ್ರಹಣ ಗೋಚರ ಸಮಯ:
ಬೆಂಗಳೂರು - ಸಂಜೆ 5.12 ರಿಂದ 5.49
ಮೈಸೂರು - ಸಂಜೆ 5.13 ರಿಂದ 5.51
ಧಾರವಾಡ - ಸಂಜೆ 5.01 ರಿಂದ 5.47
ರಾಯಚೂರು - ಸಂಜೆ 5.01 ರಿಂದ 5.47
ಬಳ್ಳಾರಿ - ಸಂಜೆ 5.04 ರಿಂದ 5.48
ಬಾಗಲಕೋಟೆ - ಸಂಜೆ 5.00 ರಿಂದ 5.47
ಮಂಗಳೂರು - ಸಂಜೆ 5.10 ರಿಂದ 5.50
ಕಾರವಾರ -5.03 ರಿಂದ 5.48
ಭಾರತದ ನಾರ್ತ್ ಈಸ್ಟ್ ಪ್ರಾಂತ್ಯದಲ್ಲಿ ಬಿಟ್ಟು ಬಹುತೇಕ ಭಾಗಗಳಲ್ಲಿ ಗ್ರಹಣ ಕಾಣಲಿದೆ. ಪ್ರಪಂಚದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ರಷ್ಯಾ, ಸೈಬೀರಿಯಾ ಹಾಗೂ ಕಜಾಕಿಸ್ತಾನದಲ್ಲಿ ಗೋಚರಿಸಿದೆ. ಲೇಹ್ ಲಡಾಕ್ ಶ್ರೀನಗಕ ಭಾಗದಲ್ಲಿ ಶೇ. 54ರಷ್ಟು ಗೋಚರಿಸಲಿದ್ದು, ಮೈಸೂರಲ್ಲಿ ಶೇ.8 ರಷ್ಟು ಕಾಣಿಸಲಿದೆ.
(ಓದಿ: ವರ್ಷದ ಕೊನೆಯ ಸೂರ್ಯಗ್ರಹಣ: ದೆಹಲಿ, ಹರಿಯಾಣದಲ್ಲಿ ಕೌತುಕ ಸೆರೆ)