ETV Bharat / state

ಖ್ಯಾತ ವಾಗ್ಮಿ, ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್ ಇನ್ನಿಲ್ಲ

ನಮ್ಮ ಧ್ವನಿ ಯೂಟ್ಯೂಬ್​ ಚಾನೆಲ್​​ ನಡೆಸುತ್ತಿದ್ದ ಮಹೇಂದ್ರ ಕುಮಾರ್​​ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

author img

By

Published : Apr 25, 2020, 8:43 AM IST

social activist mahendra kumar is no more
ಮಹೇಂದ್ರ ಕುಮಾರ್

ಬೆಂಗಳೂರು: ಬಜರಂಗ ದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅವರು ವಿಧಿವಶರಾಗಿದ್ದಾರೆ. ಮೂಲತಃ ಚಿಕ್ಕಮಗಳೂರಿನ ಕೊಪ್ಪದವರಾದ ಇವರು ತಮ್ಮ ಭಾಷಣದ ಮೂಲಕವೇ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅಲ್ಲದೇ ನಮ್ಮಧ್ವನಿ ಎಂಬ ಯೂಟ್ಯೂಬ್​ ಚಾನೆಲ್​ ನಡೆಸುತ್ತಿದ್ದರು. ಸಮಾಜದ ಅಂಕುಡೊಂಕುಗಳನ್ನು ಕಟುವಾಗಿ ಟೀಕೆ ಮಾಡುತ್ತಿದ್ದರು.

2008 ರಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಿದ ಸಂಬಂಧ ಇವರು ಬಂಧನಕ್ಕೊಳಗಾಗಿದ್ದರು. ಪ್ರಕರಣದಲ್ಲಿ ದೋಷಮುಕ್ತಗೊಂಡು ಹೊರಬಂದ ಅವರು ಬಜರಂಗದಳದ ಆಂತರಿಕ ವಿಷಯಗಳನ್ನು ಹೊರಹಾಕಲು ಮುಂದಾದರು.

ಸಂಘ ಪರಿವಾರದ ಕಟು ಟೀಕಾಕಾರರಾಗಿದ್ದ ಮಹೇಂದ್ರ ಕುಮಾರ್​, ಸಾಮಾಜಿಕ ಜಾಗೃತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಕೇಂದ್ರ ಸರ್ಕಾರದ ಸಿಎಎ ಕಾಯ್ದೆ ವಿರುದ್ಧದ ಎಲ್ಲಾ ಪ್ರತಿಭಟನೆಯಲ್ಲೂ ಇವರು ಮೊದಲಿಗರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.