ETV Bharat / state

ಸಿಎಂ ರೇಸ್​ನಲ್ಲಿ ಬಿಜೆಪಿ ನಾಯಕರು: ಇವರಲ್ಲಿ ಯಾರಿಗಿದೆ ಸಿಎಂ ಆಗುವ ಅದೃಷ್ಟ..? - ಕರ್ನಾಟಕ ರಾಜಕೀಯ

ಸಿಎಂ ಸ್ಥಾನಕ್ಕೆ ಬಿ.ಎಸ್​. ಯಡಿಯೂರಪ್ಪ ರಾಜೀನಾಮೆ ಸಲ್ಲಿದ್ದಾರೆ. ನೂತನ ಸಿಎಂ ಹೆಸರನ್ನು ಬಿಜೆಪಿ ಹೈಕಮಾಂಡ್​ ಇನ್ನೂ ಬಹಿರಂಗಪಡಿಸಿಲ್ಲ. ಹೀಗಾಗಿ ಮುಂದಿನ ಸಿಎಂ ಯಾರು ಎಂಬ ಕುತೂಹಲ ಹೆಚ್ಚಿದೆ. ಸಿಎಂ ರೇಸ್​​ನಲ್ಲಿ 8ಕ್ಕೂ ಹೆಚ್ಚು ನಾಯರಿದ್ದು, ವರಿಷ್ಠರು ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

So many leaders race in Cm post  karnataka politics  Cm changes roomers  C T ravi  R ashok  minister bommai  Cm B S yediyurappa  ಸಿ.ಟಿ ರವಿ, ಕೇಂದ್ರದ ಮಾಜಿ‌ ಸಚಿವ ಡಿ.ವಿ ಸದಾನಂದಗೌಡ  ಸಿಎಂ ರೇಸ್​ನಲ್ಲಿ ಬಿಜೆಪಿ ನಾಯಕರು  ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸ್ತಿದ್ದಾರೆ ಆಕಾಂಕ್ಷಿಗಳು  ಕರ್ನಾಟಕ ರಾಜಕೀಯ  ಕರ್ನಾಟಕ ರಾಜಕೀಯ  ಕರ್ನಾಟಕ ಬಿಜೆಪಿ ರಾಜಕೀಯ
ಸಿಎಂ ರೇಸ್​ನಲ್ಲಿ ಬಿಜೆಪಿ ನಾಯಕರು
author img

By

Published : Jul 19, 2021, 2:29 PM IST

Updated : Jul 26, 2021, 1:22 PM IST

ಬೆಂಗಳೂರು:

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ್ದು, ಮುಂದಿನ ಸಿಎಂ ಯಾರು ಎಂಬ ಕುತೂಹಲ ಹೆಚ್ಚಾಗತೊಡಗಿದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ 8ಕ್ಕೂ ಹೆಚ್ಚು ನಾಯಕರಿದ್ದು, ತಮ್ಮ ತಮ್ಮ ಮಟ್ಟದಲ್ಲೇ ಹೈಕಮಾಂಡ್ ನಾಯಕರನ್ನು ಸೆಳೆಯುವ ಕಸರತ್ತು ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತರಾಧಿಕಾರಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಸ್ಪರ್ಧೆ ಆರಂಭಗೊಂಡಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಡಿಸಿಎಂ ಅಶ್ವತ್ಥನಾರಾಯಣ್,ಸಚಿವ ಮುರುಗೇಶ್ ನಿರಾಣಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಶಾಸಕ ಅರವಿಂದ ಬೆಲ್ಲದ್ ಹೆಸರುಗಳು ಕೇಳಿಬರುತ್ತಿವೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್ ಕೂಡ ರೇಸ್ ನಲ್ಲಿದ್ದಾರೆ.

ಹೈಕಮಾಂಡ್ ನೇರವಾಗಿ ತೀರ್ಮಾನ ಕೈಗೊಳ್ಳುವುದೇ ಆದಲ್ಲಿ ಸಂಘಟನೆ ಹೇಳಿದಂತೆ ಕೇಳುವ ವ್ಯಕ್ತಿಯನ್ನು ಆಯ್ಕೆ ಮಾಡುವುದರಲ್ಲಿ ಎರಡು ಮಾತಿಲ್ಲ, ಒಂದು ವೇಳೆ ಆ ರೀತಿ ಆದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಗೆ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ. ಜೊತೆಗೆ ಈಗಾಗಲೇ ಸಚಿವ ಸ್ಥಾನ ತೊರೆದು ಸಂಘಟನೆಯಲ್ಲಿ ತೊಡಗಿಕೊಂಡಿರುವ ಸಿ‌.ಟಿ ರವಿಗೆ ಮಣೆ ಹಾಕಿದರೂ ಅಚ್ಚರಿ ಇಲ್ಲ, ಈ ಇಬ್ಬರು ನಾಯಕರು ಪಕ್ಷ ಹೇಳಿದಂತೆಯೇ ಕೇಳಲಿದ್ದಾರೆ ಎನ್ನುವುದು ಇವರ ಪ್ಲಸ್ ಪಾಯಿಂಟ್ ಆಗಿದೆ‌.

ಸ್ಪೀಕರ್ ಆದವ್ರಿಗೆ ಲಕ್:
ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಅಂದು ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದ ಜಗದೀಶ್ ಶೆಟ್ಟರ್ ನಂತರ ಅದೇ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಿದ್ದರು. ಈಗಲೂ ಯಡಿಯೂರಪ್ಪ ಸರ್ಕಾರದಲ್ಲಿ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ತಮಗೂ ಅಂತಹ ಅವಕಾಶ ಸಿಕ್ಕರೂ ಸಿಗಬಹುದು ಎನ್ನುವ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಸಂಘ ಪರಿವಾರದ ಜೊತೆ ಉತ್ತಮ ನಂಟು ಇರಿಸಿಕೊಂಡಿರುವುದು ಕಾಗೇರಿ ಅವರ ಪ್ಲಸ್ ಪಾಯಿಂಟ್ ಆಗಿದೆ.

ಯಶ ಕಂಡಿದೆಯಾ ಈ ಫಲಿತಾಂಶ:
ಮೊದಲ ಬಾರಿಗೆ ಸಚಿವ ಸಂಪುಟ ಸೇರಿರುವ ಅಶ್ವತ್ಥನಾರಾಯಣ್‌ಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಹೈಕಮಾಂಡ್ ನೀಡಿದೆ. ಭವಿಷ್ಯದ ನಾಯಕನನ್ನು ರೂಪಿಸಲು ಪ್ರಯೋಗಾತ್ಮಕವಾಗಿ ಈ ಹುದ್ದೆ ನೀಡಿ ಜವಾಬ್ದಾರಿ ನಿರ್ವಹಿಸಲು ನಿಯೋಜಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಡಿಸಿಎಂ ಅಶ್ವತ್ಥನಾರಾಯಣ ಕೆಲಸ ಹೈಕಮಾಂಡ್ ಗೆ ತೃಪ್ತಿ ತಂದಿದ್ದಲ್ಲಿ, ಡಿಸಿಎಂ ಪ್ರಯೋಗ ಸಫಲವಾಗಿದೆ ಎಂದು ಕಂಡುಬಂದಿದ್ದಲ್ಲಿ ಅಶ್ವತ್ಥನಾರಾಯಣ್ ಗೆ ಹೈಕಮಾಂಡ್ ಮಣೆ ಹಾಕಲಿದೆ ಎನ್ನಲಾಗುತ್ತಿದೆ.

ಜಾತಿವಾರು ಲೆಕ್ಕಾಚಾರ ನೋಡೋಣ..
ಲಿಂಗಾಯತರಲ್ಲಿ ಯಾರಿದ್ದಾರೆ..?

ಬಿಎಸ್‌ವೈ ಉತ್ತರಾಧಿಕಾರಿ ವಿಚಾರವನ್ನು ಜಾತಿ ಲೆಕ್ಕಾಚಾರದಲ್ಲಿ ಗಣನೆಗೆ ತೆಗೆದುಕೊಳ್ಳುವುದಾದರೆ ಲಿಂಗಾಯತ ಸಮುದಾಯದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರುಗಳೆಂದರೆ,

1. ಬಸವರಾಜ ಬೊಮ್ಮಾಯಿ

2. ಮುರುಗೇಶ ನಿರಾಣಿ

3. ಲಕ್ಷ್ಣಣ ಸವದಿ

4. ಬಸನಗೌಡ ಪಾಟೀಲ ಯತ್ನಾಳ್

ರಾಜ್ಯದಲ್ಲಿ ನಾಯಕತ್ವ ಬದಲಿಸಿದಲ್ಲಿ ಲಿಂಗಾಯತ ಸಮುದಾಯಕ್ಕೇ ಆದ್ಯತೆ ನೀಡಬೇಕು ಎಂದು ನಿರ್ಧರಿಸಿದಲ್ಲಿ ಮುರುಗೇಶ್ ನಿರಾಣಿಗೆ ಅವಕಾಶ ಹೆಚ್ಚು ಎನ್ನಲಾಗುತ್ತಿದೆ. ಲಿಂಗಾಯತ ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕ ಹಾಗು ಹೈಕಮಾಂಡ್ ನಾಯಕರ ಜೊತೆ ಉತ್ತಮ ಒಡನಾಟ ಇರಿಸಿಕೊಂಡಿರುವುದು ಮತ್ತು ಆರ್.ಎಸ್.ಎಸ್ ನಾಯಕರ ಸಖ್ಯ ಬೆಳೆಸುತ್ತಿರುವುದನ್ನು ಗಮನಿಸಿದರೆ ಸಿಎಂ ಸ್ಥಾನಕ್ಕಾಗಿ ನಿರಾಣಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವುದು ಸ್ಪಷ್ಟ.

ಒಕ್ಕಲಿಗರಲ್ಲಿ ಸಿಎಂ ಕುರ್ಚಿ ಆಕಾಂಕ್ಷಿಗಳು ಯಾರ್ಯಾರು?

ರಾಜ್ಯದಲ್ಲಿ ಲಿಂಗಾಯತರನ್ನು ಬಿಟ್ಟರೆ ಮತ್ತೊಂದು ಪ್ರಭಾವಿ ಸಮುದಾಯ ಅಂದರೆ ಅದು ಒಕ್ಕಲಿಗರು. ಇವರಲ್ಲಿ ಮುಖ್ಯವಾಗಿ,

1. ಆರ್. ಅಶೋಕ್

2. ಸಿ.ಟಿ. ರವಿ

3. ಅಶ್ವತ್ಥ ನಾರಾಯಣ

ಸರ್ಕಾರದಲ್ಲಿ ಮಹತ್ವದ ಸ್ಥಾನಮಾನಗಳನ್ನು ಪಡೆದಿರುವ ಇವರು ಸಮುದಾಯದ ಪ್ರಮುಖ ನಾಯಕರು ಕೂಡಾ ಹೌದು.

ಆಯ್ಕೆಯ ವಿಚಾರವನ್ನು ಯಡಿಯೂರಪ್ಪನವರಿಗೆ ಬಿಟ್ಟರೆ..

ಉತ್ತರಾಧಿಕಾರಿ ಆಯ್ಕೆಯನ್ನು ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಅವಕಾಶ ನೀಡಿದಲ್ಲಿ ಲಿಂಗಾಯತ ಸಮುದಾಯದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆಯ್ಕೆಯಾಗಬಲ್ಲರು. ಆರ್‌ಎಸ್‌ಎಸ್‌ ನಿಲುವಿಗೆ ಬದ್ಧತೆ ಹಾಗು ಯಡಿಯೂರಪ್ಪನವರ ಜೊತೆಗಿನ ಬಾಂಧವ್ಯ ಅವರನ್ನು ಸಹಜವಾಗಿಯೇ ಉತ್ತರಾಧಿಕಾರ ಸ್ಥಾನಕ್ಕೆ ತಂದು ನಿಲ್ಲಿಸಬಹುದು. ಇದೇ ವೇಳೆ ಒಕ್ಕಲಿಗರ ಆಯ್ಕೆಯನ್ನು ಯಡಿಯೂರಪ್ಪನವರು ಮಾಡುವುದೇ ಆದಲ್ಲಿ, ಕಂದಾಯ ಸಚಿವ ಆರ್.ಅಶೋಕ್ ಇದ್ದಾರೆ.

ಬ್ರಾಹ್ಮಣ ಸಮುದಾಯದ ಲೆಕ್ಕಾಚಾರ..

ಯಡಿಯೂರಪ್ಪನವರ ಉತ್ತರಾಧಿಕಾರಿ ಆಯ್ಕೆಯ ವಿಚಾರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಕಾಶ ಸಿಗಬಹುದೇ ಎಂಬುದನ್ನು ಸದ್ಯಕ್ಕೆ ಹೇಳಲಾಗದು. ಈ ವಿಚಾರವಾಗಿ ಆರ್‌ಎಸ್‌ಎಸ್ ನಿಷ್ಠೆ, ಹೈಕಮಾಂಡ್‌ ಒಲವು ಹಾಗು ಸಿಎಂ ಯಡಿಯೂರಪ್ಪನವರ ವಿಶ್ವಾಸ ಗಳಿಸಿರುವವರು ಎಂದರೆ,

1. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

2. ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

ಆದ್ರೆ ಇವರಿಗೆ ಸಿಎಂ ಸ್ಥಾನ ಒಲಿದು ಬರುವ ಸಾಧ್ಯತೆ ಸದ್ಯಕ್ಕಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.

ಜಾತಿ ಲೆಕ್ಕಾಚಾರದಲ್ಲಿ ಹೊಸ ಮುಖಗಳ ಆಯ್ಕೆಗೆ ಹೈಕಮಾಂಡ್‌ ಮನಸ್ಸು ಮಾಡಿದ್ರೆ..

ಲಿಂಗಾಯತ ಸಮುದಾಯದಲ್ಲಿ ಹೊಸ ಮುಖಕ್ಕೆ ಆದ್ಯತೆ ನೀಡಬೇಕು ಎಂದು ಹೈಕಮಾಂಡ್ ನಿರ್ಧರಿಸಿದ್ದಲ್ಲಿ ಶಾಸಕ ಅರವಿಂದ ಬೆಲ್ಲದ್​​​ಗೆ ಅವಕಾಶ ಸಿಗುವ ಸಂಭವವಿದೆ. ಆದ್ರೆ ಈ ಸಾಧ್ಯತೆಯೂ ವಿರಳ. ಯಡಿಯೂರಪ್ಪ ವಿರುದ್ಧ ದನಿ ಎತ್ತಿರುವ ವಿರೋಧಿ ಬಣಕ್ಕೆ ಅವಕಾಶ ನೀಡಲು ಒಪ್ಪಲಾರರು. ಆದರೂ ಹೈಕಮಾಂಡ್ ನಿರ್ಧಾರದ ಮೇಲೆ ಎಲ್ಲವೂ ಅವಲಂಭಿಸಿದೆ.

ಸರ್ಪ್ರೈಸ್‌ ಆಯ್ಕೆ ಏನಾದ್ರೂ ನಡೆದಲ್ಲಿ..

ಈ ಬಾರಿ ರಾಜ್ಯ ಘಟಕಕ್ಕೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡುವ ಅವಕಾಶ ನೀಡದೇ ಹೈಕಮಾಂಡ್ ನೇರವಾಗಿ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಪ್ರಕಟಿಸಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಆ ರೀತಿ ಆದಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸದಾನಂದ ಗೌಡರಿಗೆ ಅವಕಾಶ ನೀಡಬಹುದು ಅಥವಾ ಬೇರೆ ಯಾರದೋ ಹೆಸರನ್ನು ಅಚ್ಚರಿ ರೀತಿಯಲ್ಲಿ ಆಯ್ಕೆ ಮಾಡಿ ಪ್ರಕಟಿಸಬಹುದು ಎನ್ನಲಾಗುತ್ತಿದೆ.

Last Updated : Jul 26, 2021, 1:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.