ETV Bharat / state

ಪಾಲಿಕೆ ಬಜೆಟ್​​ ಗಾತ್ರ ಕುಗ್ಗಿದ ಎಫೆಕ್ಟ್​​​​​... ಸದಸ್ಯರು, ಶಾಸಕರ ಫಂಡ್​ಗಳಲ್ಲಿ ಕಡಿತ

ನಿರೀಕ್ಷೆಯಂತೆ ಬಿಬಿಎಂಪಿ ಅವೈಜ್ಞಾನಿಕ ಬಜೆಟ್ ಮಂಡಿಸಿ, ಸರ್ಕಾರದ ಅನುಮೋದನೆಗೆ ಕಳಿಸುವ ಮೊದಲು ಇನ್ನಷ್ಟು ಬಜೆಟ್ ಗಾತ್ರ ಏರಿಕೆ ಮಾಡಿತ್ತು. ಕಡೆಗೂ 1,308 ಕೋಟಿ ರೂ. ಕಡಿತಗೊಳಿಸಿ, 11,649 ಕೋಟಿ ರೂ.ಗೆ ಸರ್ಕಾರ ಅನುಮೋದನೆ ನೀಡಿದೆ. ಇದೀಗ ಬಜೆಟ್ ಅನುಷ್ಠಾನದ ಕುರಿತು ಯೋಚಿಸಿರುವ ಪಾಲಿಕೆ, ಕಡಿತಗೊಂಡ ಅನುದಾನ ಸರಿದೂಗಿಸಲು ನಗರದ ಕಾಂಗ್ರೆಸ್ ಪಾಲಿಕೆ ಸದಸ್ಯರು ಹಾಗೂ ಶಾಸಕರಿಗೆ ನೀಡಿರುವ ಹೆಚ್ಚುವರಿ ವೈಯಕ್ತಿಕ ಅನುದಾನಗಳನ್ನು ಕಡಿತಗೊಳಿಸಲು ತೀರ್ಮಾನಿಸಿದೆ.

ಆಡಳಿತ ಪಕ್ಷದ ನಾಯಕ ವಾಜಿದ್
author img

By

Published : May 24, 2019, 9:38 PM IST

ಬೆಂಗಳೂರು: ನಿರೀಕ್ಷೆಯಂತೆ ಬಿಬಿಎಂಪಿ ಅವೈಜ್ಞಾನಿಕ ಬಜೆಟ್ ಮಂಡಿಸಿ, ಸರ್ಕಾರದ ಅನುಮೋದನೆಗೆ ಕಳಿಸುವ ಮೊದಲು ಇನ್ನಷ್ಟು ಬಜೆಟ್ ಗಾತ್ರ ಏರಿಕೆ ಮಾಡಿತ್ತು. ಕಡೆಗೂ 1,308 ಕೋಟಿ ರೂ. ಕಡಿತಗೊಳಿಸಿ, 11,649 ಕೋಟಿ ರೂ.ಗೆ ಸರ್ಕಾರ ಅನುಮೋದನೆ ನೀಡಿದೆ. ಇದೀಗ ಬಜೆಟ್ ಅನುಷ್ಠಾನದ ಕುರಿತು ಯೋಚಿಸಿರುವ ಪಾಲಿಕೆ, ಕಡಿತಗೊಂಡ ಅನುದಾನ ಸರಿದೂಗಿಸಲು ನಗರದ ಕಾಂಗ್ರೆಸ್ ಪಾಲಿಕೆ ಸದಸ್ಯರು ಹಾಗೂ ಶಾಸಕರಿಗೆ ನೀಡಿರುವ ಹೆಚ್ಚುವರಿ ವೈಯಕ್ತಿಕ ಅನುದಾನಗಳನ್ನು ಕಡಿತಗೊಳಿಸಲು ತೀರ್ಮಾನಿಸಿದೆ.

ಹೌದು, ಮೊದಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಂಡಿಸಿದ್ದ 10691 ಕೋಟಿ ರೂ. ಗಾತ್ರದ ಆಯವ್ಯಯಕ್ಕೆ ಕೌನ್ಸಿಲ್​ನಲ್ಲಿ ನಡೆದ ಚರ್ಚೆ ಬಳಿಕ 12,958 ಕೋಟಿ ರೂ.ಗೆ ಪರಿಷ್ಕೃತಗೊಳಿಸಿ ಸರ್ಕಾರದ ಅನುಮೋದನೆಗೆ ಕಳಿಸಲಾಗಿತ್ತು. ಆದ್ರೆ ಪಾಲಿಕೆಯ ಆದಾಯಕ್ಕಿಂತ 2-3 ಪಟ್ಟು ಹೆಚ್ಚಿರುವ ಬಜೆಟ್​ಅನ್ನು ಜಾರಿಗೊಳಿಸುವುದು ಅಸಾಧ್ಯ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು.

ಆಡಳಿತ ಪಕ್ಷದ ನಾಯಕ ವಾಜಿದ್

ಕಡೆಗೂ ಕಳೆದ ವರ್ಷದ ಬಜೆಟ್​ಗಿಂತ ಶೇ. 15ರಷ್ಟು ಏರಿಕೆ ಮಾಡಿ, 11649 ಕೋಟಿ ರೂ.ಗೆ ಅನುಮೋದನೆ ನೀಡಿದೆ. ಉಳಿದ 1308 ಕೋಟಿ ಪೂರಕ ಅಂದಾಜು ಮಂಡಿಸಿ ಹೊಂದಿಸಿಕೊಳ್ಳುವಂತೆ ಸಲಹೆ ನೀಡಿದೆ. ಈ ಕುರಿತು ಈಗಾಗಲೇ ಲೆಕ್ಕಾಚಾರಗಳು ನಡೆದಿದ್ದು, ಬಜೆಟ್​ನಲ್ಲಿ ಘೋಷಿಸಿರುವ ಪಾಲಿಕೆ ಪ್ರಮುಖ ಯೋಜನೆಗಳನ್ನು ಹಾಗೂ ನಿರ್ವಹಣಾ ವೆಚ್ಚವನ್ನು ಕೈಬಿಡಲಾಗುವುದಿಲ್ಲ. ಹೀಗಾಗಿ ಪಾಲಿಕೆ ಸದಸ್ಯರಿಗೆ ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ನೀಡಿದ ಅನುದಾನ ಹಾಗೂ ಮೇಯರ್ ಫಂಡ್​ಗಳಲ್ಲೇ ಕಡಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಆಡಳಿತ ಪಕ್ಷದ ನಾಯಕ ವಾಜಿದ್ ತಿಳಿಸಿದರು.

ಪ್ರತಿ 75 ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ 7 ಕೋಟಿ ರೂ. ಅನುದಾನ ನೀಡಿದ್ದು, ಇದನ್ನು 5 ಕೋಟಿ ರೂ.ಗೆ ಇಳಿಸುವುದು. ಇದರಿಂದ 150 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಹಾಗೆಯೇ ಮೇಯರ್ ಫಂಡ್ 200 ಕೋಟಿ ರೂ., ವಿಪಕ್ಷ ನಾಯಕ ಪದ್ಮನಾಭ ರೆಡ್ಡಿಯವರ 50 ಕೋಟಿ ರೂ. ಫಂಡ್​ನಲ್ಲಿ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ನೀಡಿರುವ ಹೆಚ್ಚುವರಿ ಫಂಡ್​ಗಳನ್ನು ಕಡಿತಗೊಳಿಸುವ ಕುರಿತು ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಅನುದಾನಗಳನ್ನು ಕಡಿತಗೊಳಿಸಿ, ಅನುಮೋದನೆಗೊಂಡ ಅನುದಾನಕ್ಕೆ ಸರಿದೂಗಿಸಲು ಪಾಲಿಕೆ ಸಜ್ಜಾಗಿದೆ. ಆದ್ರೆ ಸರ್ಕಾರ ಪಾಲಿಕೆಯ ಆಯವ್ಯಯದ ಗಾತ್ರ ಕುಗ್ಗಿಸಿರುವ ಬಗ್ಗೆ ಸಮರ್ಥಿಸಿಕೊಂಡಿರುವ ಆಡಳಿತ ಪಕ್ಷದ ನಾಯಕ ವಾಜಿದ್, ಸರ್ಕಾರ ಪೂರ್ಣ ಪ್ರಮಾಣದ ಬಜೆಟ್​ಗೆ ಒಪ್ಪಿಗೆ ಸೂಚಿಸಿದೆ. ಆದಾಯ ನೋಡಿಕೊಂಡು ಉಳಿದ ಬಜೆಟ್ ಮೊತ್ತವನ್ನು ಪೂರಕವಾಗಿ ಮಂಡಿಸುವಂತೆ ತಿಳಿಸಿದೆ. ಖಾತಾ ವರ್ಗಾವಣೆ ಸೇರಿದಂತೆ ಅನೇಕ ಹೊಸ ಯೋಜನೆಗಳಲ್ಲಿ ಪಾಲಿಕೆಗೆ ಅತಿ ಹೆಚ್ಚು ತೆರಿಗೆ ಬರಲಿದೆ. ಇದರಿಂದ ಖಂಡಿತವಾಗಿ ಪಾಲಿಕೆ ಆದಾಯ ಹೆಚ್ಚಾಗುತ್ತೆ ಎಂದು ಸಮರ್ಥಿಸಿಕೊಂಡಿದ್ದಾರೆ.

Intro:ಪಾಲಿಕೆ ಬಜೆಟ್ ಗಾತ್ರ ಕುಗ್ಗಿದ ಎಫೆಕ್ಟ್- ಕಾರ್ಪೋರೇಟರ್ಸ್, ಶಾಸಕರ ಫಂಡ್ ಗಳಲ್ಲಿ ಕಡಿತ

ಬೆಂಗಳೂರು- ನಿರೀಕ್ಷೆಯಂತೆ ಬಿಬಿಎಂಪಿ ಅವೈಜ್ಞಾನಿಕ ಬಜೆಟ್ ಮಂಡಿಸಿ, ಸರ್ಕಾರದ ಅನುಮೋದನೆಗೆ ಕಳಿಸುವ ಮೊದಲು ಇನ್ನಷ್ಟು ಬಜೆಟ್ ಗಾತ್ರ ಏರಿಕೆ ಮಾಡಿತ್ತು. ಕಡೆಗೂ 1,308 ಕೋಟಿ ರೂಪಾಯಿ ಕಡಿತಗೊಳಿಸಿ, 11,649 ಕೋಟಿ ರೂಪಾಯಿಗೆ ಸರ್ಕಾರ ಅನುಮೋದನೆ ನೀಡಿದೆ. ಇದೀಗ ಬಜೆಟ್ ಅನುಷ್ಠಾನದ ಕುರಿತು ಯೋಚಿಸಿರುವ ಪಾಲಿಕೆ ಕಡಿತಗೊಂಡ ಅನುದಾನ ಸರಿದೂಗಿಸಲು ನಗರದ ಕಾಂಗ್ರೆಸ್ ಪಾಲಿಕೆ ಸದಸ್ಯರು ಹಾಗೂ ಶಾಸಕರಿಗೆ ನೀಡಿರುವ ಹೆಚ್ಚುವರಿ ವೈಯಕ್ತಿಕ ಅನುದಾನಗಳನ್ನು ಕಡಿತಗೊಳಿಸಲು ತೀರ್ಮಾನಿಸಿದೆ.

ಹೌದು ಮೊದಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಂಡಿಸಿದ್ದ, 10691 ಕೋಟಿ ರೂಪಾಯಿ ಗಾತ್ರದ ಆಯವ್ಯಯಕ್ಕೆ ಕೌನ್ಸಿಲ್ ನಲ್ಲಿ ನಡೆದ ಚರ್ಚೆ ಬಳಿಕ 12,958 ಕೋಟಿ ರೂಪಾಯಿಗೆ ಪರಿಷ್ಕೃತ ಗೊಳಿಸಿ ಸರ್ಕಾರದ ಅನುಮೋದನೆಗೆ ಕಳಿಸಲಾಗಿತ್ತು. ಆದ್ರೆ ಪಾಲಿಕೆಯ ಆದಾಯಕ್ಕಿಂತ ಎರಡುಮೂರು ಪಟ್ಟು ಹೆಚ್ಚಿರುವ ಬಜೆಟ್ ಅನ್ನು ಜಾರಿಗೊಳಿಸುವ ಅಸಾಧ್ಯ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನೂ ಬರೆದಿದ್ದರು. ಕಡೆಗೂ ಕಳೆದ ವರ್ಷದ ಬಜೆಟ್ ಗಿಂದ ಶೇಕಡಾ ಹದಿನೈದರಷ್ಟು ಏರಿಕೆ ಮಾಡಿ, 11649 ಕೋಟಿ ರುಪಯಿಗೆ ಅನುಮೋದನೆ ನೀಡಿದೆ. ಉಳಿದ 1308 ಕೋಟಿ ರುಪಾಯಿಗೆ ಪೂರಕ ಅಂದಾಜು ಮಂಡಿಸಿ ಹೊಂದಿಸಿಕೊಳ್ಳುವಂತೆ ಸಲಹೆ ನೀಡಿದೆ.
ಈ ಕುರಿತು ಈಗಾಗಲೇ ಲೆಕ್ಕಾಚಾರಗಳು ನಡೆದಿದ್ದು, ಬಜೆಟ್ ನಲ್ಲಿ ಘೋಷಿಸಿರುವ ಪಾಲಿಕೆ ಪ್ರಮುಖ ಯೋಜನೆಗಳನ್ನು ಹಾಗೂ ನಿರ್ವಹಣಾ ವೆಚ್ಚವನ್ನು ಕೈಬಿಡಲಾಗುವುದಿಲ್ಲ. ಹೀಗಾಗಿ ಪಾಲಿಕೆ ಸದಸ್ಯರಿಗೆ ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ನೀಡಿದ ಅನುದಾನ ಹಾಗೂ ಮೇಯರ್ ಫಂಡ್ ಗಳಲ್ಲೇ ಕಡಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಆಡಳಿತ ಪಕ್ಷದ ನಾಯಕ ವಾಜಿದ್ ತಿಳಿಸಿದರು.
ಪ್ರತೀ 75 ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ 7 ಕೋಟಿ ರೂ ಅನುದಾನ ನೀಡಿದ್ದು ಇದನ್ನು 5 ಕೋಟಿ ರೂಗೆ ಇಳಿಸುವುದು, ಇದರಿಂದ 150 ಕೋಟ ರೂಪಾಯಿ ಉಳಿತಾಯವಗಲಿದೆ. ಹಾಗೆಯೇ ಮೇಯರ್ ಫಂಡ್ 200 ಕೋಟಿ ರೂ, ವಿಪಕ್ಷ ನಾಯಕ ಪದ್ಮನಾಭ ರೆಡ್ಡಿಯವರ ಐವತ್ತು ಕೋಟಿ ರೂ ಫಂಡ್ ನಲ್ಲಿ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ನೀಡಿರುವ ಹೆಚ್ಚುವರಿ ಫಂಡ್ ಗಳನ್ನು ಕಡಿತಗೊಳಿಸುವ ಕುರಿತೂ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿದೆ.
ಒಟ್ಟಿನಲ್ಲಿ ಬಜೆಟ್ ಮಂಡನೆ ಬಳಿಕ , ಕೌನ್ಸಿಲ್ ಚರ್ಚೆ ಪರಿಷ್ಕೃತಗೊಂಡ ಅನುದಾನಗಳನ್ನು ಕಡಿತಗೊಳಿಸಿ, ಅನುಮೋದನೆಗೊಂಡ ಅನುದಾನಕ್ಕೆ ಸರಿದೂಗಿಸಲು ಪಾಲಿಕೆ ಸಜ್ಜಾಗಿದೆ.
ಆದ್ರೆ ಸರ್ಕಾರ ಪಾಲಿಕೆಯ ಆಯವ್ಯಯದ ಗಾತ್ರ ಕುಗ್ಗಿಸಿರುವ ಬಗ್ಗೆ ಸಮರ್ಥಿಸಿಕೊಂಡಿರುವ ಆಡಳಿತ ಪಕ್ಷದ ನಾಯಕ ವಾಜಿದ್, ಸರ್ಕಾರ ಪೂರ್ಣಪ್ರಮಾಣದ ಬಜೆಟ್ ಗೆ ಒಪ್ಪಿಗೆ ಸೂಚಿಸಿದೆ. ಆದಾಯ ನೋಡಿಕೊಂಡು ಉಳಿದ ಬಜೆಟ್ ಮೊತ್ತವನ್ನು ಪೂರಕವಾಗಿ ಮಂಡಿಸುವಂತೆ ತಿಳಿಸಿದೆ. ಖಾತಾ ವರ್ಗಾವಣೆ ಸೇರಿದಂತೆ ಅನೇಕ ಹೊಸ ಯೋಜನೆಗಳಲ್ಲಿ ಪಾಲಿಕೆಗೆ ಅತಿಹೆಚ್ಚು ತೆರಿಗೆ ಬರಲಿದೆ. ಇದರಿಂದ ಖಂಡಿತವಾಗಿ ಪಾಲಿಕೆ ಆದಾಯ ಹೆಚ್ಚಾಗುತ್ತೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಸೌಮ್ಯಶ್ರೀ
KN_BNG_02_24_bbmp_budget_cut_script_sowmya_7202707Body:..Conclusion:...
ETV Bharat Logo

Copyright © 2024 Ushodaya Enterprises Pvt. Ltd., All Rights Reserved.