ETV Bharat / state

ಔತಣ​ ತಂದ ಆಪತ್ತು... ಮದೀನಾ ನಗರದಲ್ಲಿ ಮತ್ತೆ 6 ಕೊರೊನಾ ಕೇಸ್​​: ತಾಯಿಗೆ ನೆಗೆಟಿವ್,​ ಮಗುವಿಗೆ ಪಾಸಿಟಿವ್​ - ಮಂಗಮ್ಮನಪಾಳ್ಯ ವಾರ್ಡ್​ನ ಮದೀನಾನಗರ

ರಂಜಾನ್ ಹಬ್ಬಕ್ಕೂ ಮೊದಲೇ ರೋಗಿ ಸಂಖ್ಯೆ 911 ವ್ಯಕ್ತಿ ಮನೆಯಲ್ಲಿ ಔತಣ ಕೂಟ ಏರ್ಪಡಿಸಿದ್ದರಿಂದ ಅಲ್ಲಿಗೆ ಬಂದಿದ್ದ 22 ಜನರನ್ನೂ ಪ್ರಾಥಮಿಕ ಸಂಪರ್ಕಿತರು ಎಂದು ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್​ನಲ್ಲಿ ಇದ್ದವರಲ್ಲಿ ಆರು ಜನರಿಗೆ ಕೊರೊನಾ ಪಾಸಿಟಿವ್​ ಬಂದಿದೆ.

Six corona positive case found in Madinanagara of Bangalore
ಮದೀನಾನಗರದಲ್ಲಿ ಮತ್ತೆ ಆರು ಕೊರೊನಾ ಪ್ರಕಣ ದಾಖಲು
author img

By

Published : May 28, 2020, 9:20 AM IST

Updated : May 28, 2020, 1:46 PM IST

ಬೆಂಗಳೂರು: ಮಂಗಮ್ಮನಪಾಳ್ಯ ವಾರ್ಡ್​ನ ಮದೀನಾ ನಗರದಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಮೆರೆದಿದೆ. ಇಂದು ಆರು ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಗೂಡ್ಸ್ ಆಟೋ ಚಾಲಕನಾಗಿದ್ದ ರೋಗಿ ಸಂಖ್ಯೆ 911 ನಿಂದ ಮತ್ತೆ ಆರು ಜನರಿಗೆ ಕೊರೊನಾ ಹಬ್ಬಿದೆ. ಈಗಾಗಲೇ ಕಂಟೈನ್ಮೆಂಟ್ ಝೋನ್ ಆಗಿದ್ದ ಈ ವಾರ್ಡ್ ನಲ್ಲಿ ಕೊರೊನಾ ಆರ್ಭಟ ಮುಂದುವರೆಸಿದ್ದು, ಜನರು ಭಯಭೀತರಾಗಿದ್ದಾರೆ.

ಇನ್ನು ಈ ರೋಗಿ ಸಂಖ್ಯೆ 911 ರ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರು 22 ಜನ, ದ್ವಿತೀಯ ಸಂಪರ್ಕಿತರು 18 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಹದಿನಾಲ್ಕು ದಿನದ ಬಳಿಕ ಟೆಸ್ಟ್ ಮಾಡಿದಾಗ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಆರು ಜನರಲ್ಲಿ ಮೂವರು ಹೆಣ್ಣು, ಇಬ್ಬರು ಗಂಡು ಹಾಗೂ ನಾಲ್ಕು ವರ್ಷದ ಮಗುವಿಗೂ ಸೋಂಕು ಹರಡಿದೆ. ತಾಯಿಗೆ ನೆಗೆಟಿವ್ ಬಂದಿದ್ದು, ನಾಲ್ಕು ವರ್ಷದ ಮಗುವಿಗೆ ಪಾಸಿಟಿವ್ ಬಂದಿದೆ. ಮಗುವಿಗೆ ಪ್ರತ್ಯೇಕ ವಾರ್ಡ್​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಂಜಾನ್ ಹಬ್ಬಕ್ಕೂ ಮೊದಲೇ ರೋಗಿ ಸಂಖ್ಯೆ 911 ವ್ಯಕ್ತಿ ಮನೆಯಲ್ಲಿ ಔತಣ ಕೂಟ ಏರ್ಪಡಿಸಿದ್ದರಿಂದ ಅಲ್ಲಿಗೆ ಬಂದಿದ್ದ 22 ಜನರನ್ನೂ ಪ್ರಾಥಮಿಕ ಸಂಪರ್ಕಿತರು ಎಂದು ಕ್ವಾರಂಟೈನ್ ಮಾಡಲಾಗಿತ್ತು.

Last Updated : May 28, 2020, 1:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.