ಬೆಂಗಳೂರು : ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣದ ಪ್ರಮುಖ ಆರೋಪಿ ನರೇಶ್ ಹಾಗೂ ಆತನ ಆಪ್ತ ಅರುಣ್ ಮನೆ ಮೇಲೆ ಎಸ್ಐಟಿ ತಂಡ ದಾಳಿ ನಡೆಸಿದೆ.
ನರೇಶ್ ನಿವಾಸದಲ್ಲಿ ಎಸ್ಐಟಿ ತಂಡ ಪರಿಶೀಲನೆ ನಡೆಸಿದ್ದು, ನರೇಶ್ ಆಪ್ತನಾಗಿದ್ದ ಅರುಣ್ ನಿವಾಸದಲ್ಲೂ ಪರಿಶೀಲನೆ ನಡೆಯುತ್ತಿದೆ. ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಿರುವ ಅಧಿಕಾರಿಗಳ ತಂಡ, ಮಂಜುನಾಥ ನಗರದಲ್ಲಿರುವ ನರೇಶ್ ನಿವಾಸದಲ್ಲಿ ಮಧ್ಯಾಹ್ನದಿಂದ ಜಾಲಾಡುತ್ತಿದೆ. ಲಗ್ಗೆರೆಯಲ್ಲಿರುವ ಅರುಣ್ ನಿವಾಸದಲ್ಲಿಯೂ ಪರಿಶೀಲನೆ ಮುಂದುವರೆದಿದೆ.