ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಎಸ್ಐಟಿ ತನಿಖೆ ಗಂಟೆಗೊಂದು ಟ್ವಿಸ್ಟ್ ಗಳನ್ನು ಪಡೆಯುತ್ತಿದ್ದು, ಸಾಲು ಸಾಲು ಸುದ್ದಿಗಳು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪ್ರಕರಣದ ಕುರಿತು ತನಿಖೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ಇಮೇಲ್ನಲ್ಲಿ ಕಳುಹಿಸಿದ್ದ ನೋಟಿಸ್ನ್ನು ಯುವತಿ ನೋಡಿದ್ದಾಳೆ ಎನ್ನುವ ಮಾಹಿತಿ ಹೊರಬಿದ್ದಿದೆ. ಆದರೆ, ಪೊಲೀಸರ ನೋಟಿಸ್ಗೆ ಆಕೆಯಿಂದ ಯಾವುದೇ ಉತ್ತರ ದೊರೆತಿಲ್ಲ ಎನ್ನಲಾಗ್ತಿದೆ.
ಸಿಡಿ ಲೇಡಿಗೆ ಮತ್ತೊಂದು ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆದಿದ್ದು, ಎಸ್ ಐ ಟಿ ಅಧಿಕಾರಿಗಳು ದೇಶದೆಲ್ಲೆಡೆ ಹುಡುಕಾಟವನ್ನು ಮುಂದುವರೆಸಿದ್ದಾರೆ. ನೋಟಿಸ್ ತಲುಪಿದ ಕೂಡಲೇ ವಿಚಾರಣೆಗೆ ಹಾಜರಾಗುವಂತೆ ವಾಟ್ಸಪ್, ಇ ಮೇಲ್ ಮೂಲಕ ಸಂದೇಶ ರವಾನಿಸಲಾಗಿದ್ದು, ಇದುವರೆಗೆ ಯುವತಿಗೆ ಒಟ್ಟು ಐದು ನೋಟಿಸ್ ಜಾರಿ ಮಾಡಿದಂತಾಗಿದೆ.
ಓದಿ: ಕೊನೆಗೂ ಸಿಡಿ ಲೇಡಿ ಪೋಷಕರು ಪತ್ತೆ: ಯುವತಿಯ ತಂದೆ-ತಾಯಿ ಹೇಳಿಕೆ ದಾಖಲು?
ವಿಧಾನಸೌಧ ತಲುಪಿದ ಎಸ್ಐಟಿ ತಂಡ : ಈ ನಡುವೆ ಎಸ್ ಐ ಟಿ ಅಧಿಕಾರಿಗಳು ವಿಧಾನಸೌಧಕ್ಕೆ ತಲುಪಿ ಮುಖ್ಯಮಂತ್ರಿ, ಗೃಹ ಸಚಿವರಿಗೆ ಮಾಹಿತಿ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ಸಿಡಿ ವಿಚಾರದಲ್ಲಿ ಎತ್ತುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಸಿಎಂ ಯಡಿಯೂರಪ್ಪ ಅವರು ಎಸ್ಐಟಿ ಅಧಿಕಾರಿಗಳನ್ನು ಕರೆಸಿ ಚರ್ಚೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.