ETV Bharat / state

ಐಎಂಎಗೆ ಸೇರಿದ ಕಂಪನಿಗಳ ಮೇಲೆ ಮುಂದುವರೆದ ಎಸ್ಐಟಿ ರೇಡ್...​ - company

ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಇಂದು ಮನ್ಸೂರ್​ಗೆ ಸೇರಿದ ಕಂಪನಿಗಳ ಮೇಲೆ ದಾಳಿ ನಡೆಸಿದ್ದಾರೆ.

ಎಸ್ಐಟಿ ರೇಡ್​
author img

By

Published : Jun 29, 2019, 7:53 PM IST

Updated : Jun 29, 2019, 8:21 PM IST

ಬೆಂಗಳೂರು: ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಇಂದು ಬಹುಕೋಟಿ ವಂಚಕ ಮನ್ಸೂರ್​ಗೆ ಸೇರಿದ ಕಂಪನಿಗಳ ಮೇಲೆ ದಾಳಿ ಮಾಡಿದ್ದಾರೆ.

ಐಎಂಎಗೆ ಸಂಬಂಧಿಸಿದ ಫ್ರಂಟ್‌ಲೈನ್ ಸೆಂಟ್ರಲ್ ವೇರ್ ಹೌಸ್ ಮಳಿಗೆ ಸೇರಿದಂತೆ ನಗರದಲ್ಲಿರುವ 21 ಮೆಡಿಸಿನ್ ಮಳಿಗೆಗಳ ಮೇಲೆ ದಾಳಿ ನಡೆಸಿದ್ದಾರೆ. ಔಷಧಿ, ಔಷಧಿ ಉಪಕರಣಗಳು ಹಾಗೂ ಸೌಂದರ್ಯವರ್ಧಕ ಮಳಿಗೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಕಾರ್ಯ ಮುಂದುವರೆಸಿದ್ದಾರೆ. ದಾಳಿ ವೇಳೆ 15 ಲಕ್ಷ ಮೌಲ್ಯದ ಸುಗಂಧ ದ್ರವ್ಯಗಳು, ಬಟ್ಟೆ, ಬ್ಯಾಗ್, ಜರ್ಕೀನ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ ಒಂದು ಕೋಟಿ ಮೌಲ್ಯದ ಔಷಧಿಗಳು, ಒಂದು ಟಾಟಾ ಏಸ್ ವಾಹನ ಸೇರಿ ಹಲವು ಬಗೆಯ ವಿದ್ಯುನ್ಮಾನ ಉಪಕರಣಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಕಳೆದ ಎರಡು ದಿನಗಳಿಂದ ಮನ್ಸೂರ್​ಗೆ ಸೇರಿದ ಗೃಹೋಪಯೋಗಿ, ದಿನಸಿ ಅಂಗಡಿಗಳು ಹಾಗೂ ಮಾಲ್​ಗಳ ಮೇಲೆ ರೇಡ್​ ಮಾಡಿ ಜಪ್ತಿ ಮಾಡಿದ್ದಾರೆ.

Intro:nullBody:ಐಎಂಗೆ ಸೇರಿದ ಕಂಪೆನಿಗಳ ಮೇಲೆ ದಾಳಿ ಮುಂದುವರೆಸಿದ ಎಸ್ಐಟಿ
ಬೆಂಗಳೂರು: ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಇಂದು ಮನ್ಸೂರ್ ಸೇರಿದ ಕಂಪೆನಿಗಳ ಮೇಲೆ ರೈಡ್ ಮಾಡಿದ್ದಾರೆ.
ಐಎಂಎಗೆ ಸಂಬಂಧಿಸಿದ ಫ್ರಂಟ್ ಲೈನ್ ಸೆಂಟ್ರಲ್ ವೇರ್ ಹೌಸ್ ಮಳಿಗೆ ಸೇರಿದಂತೆ ನಗರದಲ್ಲಿರುವ 21 ಮೆಡಿಸಿನ್ ಮಳಿಗೆಗಳ ಮೇಲೆ ದಾಳಿ ನಡೆಸಿರುವ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಔಷಧಿ ಉಪಕರಣಗಳು, ಔಷಧಿಗಳು ಹಾಗೂ ಸೌಂದರ್ಯವರ್ಧಕಗಳ ಶಾಪ್ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಕಾರ್ಯ ಮುಂದುವರೆಸಿದ್ದಾರೆ.
ಕಳೆದ ಎರಡು ದಿನಗಳಿಂದ ಮನ್ಸೂರ್ ಸೇರಿದ ಗೃಹಯೋಪಯೋಗಿ ಹಾಗೂ ಮಾಲ್ಗಳ ಮೇಲೆ ದಾಳಿ ದಿನಸಿ ಹಾಗೂ ಗೃಹಯೋಪಯೋಗಿ ವಸ್ತುಗಳನ್ನು ಜಪ್ತಿ ಮಾಡಿಕೊಂಡಿತ್ತು.Conclusion:null
Last Updated : Jun 29, 2019, 8:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.