ETV Bharat / state

ನೂತನ ಸಚಿವರಿಂದ ಕ್ಯಾಬಿನೆಟ್ ಪುಸ್ತಕಕ್ಕೆ ಸಹಿ: ಸಿಎ‌ಂ ಜತೆ ಅನೌಪಚಾರಿಕ ಮಾತುಕತೆ!

ನೂತನ ಸಚಿವರಾದ ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಶ್ರೀಮಂತ್ ಪಾಟೀಲ್, ಶಿವರಾಂ ಹೆಬ್ಬಾರ್, ಡಾ.ಸುಧಾಕರ್, ಬಿ.ಸಿ.ಪಾಟೀಲ್, ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್, ನಾರಾಯಣಗೌಡ ಆಗಮಿಸಿ ಕ್ಯಾಬಿನೆಟ್ ಪುಸ್ತಕಕ್ಕೆ ಸಹಿ ಹಾಕಿದರು.

ನೂತನ ಸಚಿವರು ,  Signing of the new Cabinet book by the new Minister
ನೂತನ ಸಚಿವರು
author img

By

Published : Feb 6, 2020, 2:15 PM IST

ಬೆಂಗಳೂರು: ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನೂತನ‌ ಸಚಿವರು ವಿಧಾನಸೌಧಕ್ಕೆ ಆಗಮಿಸಿ ಸಂಪುಟ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿದರು.

10 ಮಂದಿ ನೂತನ ಶಾಸಕರು ವಿಧಾನಸೌಧಕ್ಕೆ ಆಗಮಿಸಿ, ಸಿಎಂಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಅನೌಪಚಾರಿಕವಾಗಿ ಸ್ವಲ್ಪ ಹೊತ್ತು ಸಿಎಂ ಬಳಿ ಮಾತುಕತೆ ನಡೆಸಿದ ಬಳಿಕ ನೂತನ ಸಚಿವರು ವಾಪಸಾದರು‌.

ನೂತನ ಸಚಿವರಾದ ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಶ್ರೀಮಂತ್ ಪಾಟೀಲ್, ಶಿವರಾಂ ಹೆಬ್ಬಾರ್, ಡಾ.ಸುಧಾಕರ್, ಬಿ.ಸಿ.ಪಾಟೀಲ್, ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್, ನಾರಾಯಣಗೌಡ ಆಗಮಿಸಿ ಕ್ಯಾಬಿನೆಟ್ ಪುಸ್ತಕಕ್ಕೆ ಸಹಿ ಹಾಕಿದರು.

ನೂತನ ಸಚಿವರು

ಬಳಿಕ ಮಾತನಾಡಿದ ಸಚಿವ ಗೋಪಾಲಯ್ಯ, ಸಿಎಂ ಯಡಿಯೂರಪ್ಪ ಅವರು ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ‌. 10 ಮಂದಿಯನ್ನೂ ಸಚಿವರನ್ನಾಗಿ ಮಾಡಿದ್ದಾರೆ. ನನಗೆ ಯಾವ ಖಾತೆ ಕೊಟ್ಟರೂ ಅದನ್ನು ನಿಭಾಯಿಸುತ್ತೇನೆ‌. ರಾಜ್ಯಕ್ಕೆ, ಪಕ್ಷಕ್ಕೆ ಗೌರವ ತರುವ ರೀತಿ ಕೆಲಸ ಮಾಡುತ್ತೇನೆ ಎಂದರು.

ಇದೇ ವೇಳೆ ಮಾತನಾಡಿದ ಸಚಿವ ಶಿವರಾಂ ಹೆಬ್ಬಾರ್, ಪ್ರಮಾಣ ವಚನ ಸ್ವೀಕರಿಸಿ ಸಂತೋಷವಾಗಿದೆ. ಯಾವ ಖಾತೆ ಕೊಟ್ಟರೂ ಅದನ್ನು ಪಕ್ಷಕ್ಕೆ, ರಾಜ್ಯಕ್ಕೆ ಗೌರವ ಬರುವ ನಿಟ್ಟಿನಲ್ಲಿ ನಿಭಾಯಿಸುತ್ತೇನೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.