ETV Bharat / state

ನಾನು ದಪ್ಪ ಆದ್ರೂ ಪಂಚೆ ಬದಲಾಗಲ್ಲ: ಸದನದಲ್ಲಿ ಹಾಸ್ಯ ಚಟಾಕಿ ಹಾರಿಸಿದ ಸಿದ್ದರಾಮಯ್ಯ!

ವ್ಯಾಪಾರ ಮೊದಲಿನಂತೆ ನಡೆಯುತ್ತಿಲ್ಲ. ಎಲ್ಲಿ ಉತ್ಪಾದನೆ ಇರುತ್ತದೋ ಅಲ್ಲಿ ಕೊಂಡುಕೊಳ್ಳುವ ಶಕ್ತಿಯೂ ಇರುತ್ತದೆ. ಎಲ್ಲಿ ಉತ್ಪಾದನೆ ಇರಲ್ಲವೋ, ಅಲ್ಲಿ ಕೊಂಡುಕೊಳ್ಳುವ ಶಕ್ತಿಯೂ ಇರಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

siddramaih-talk-about-price-hike-in-assembly-session
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
author img

By

Published : Mar 19, 2021, 8:49 PM IST

ಬೆಂಗಳೂರು: ಬೆಲೆ ಏರಿಕೆ ಕುರಿತ ಚರ್ಚೆ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ ಬಟ್ಟೆ ಖರೀದಿ ವಿಚಾರದಲ್ಲಿ ಸ್ವಾರಸ್ಯಕರ ಪ್ರಸಂಗ ನಡೆಯಿತು.

ವಿಧಾನಸಭೆಯಲ್ಲಿ ಇಂದು ನಿಯಮ 69 ರಡಿಯಲ್ಲಿ ಮಾತನಾಡಿದ ಅವರು, ಅಂಗಡಿಯಲ್ಲಿ ಸಾಮಾನು ಖರೀದಿ ಮಾಡುವುದಕ್ಕೆ ಆಗುತ್ತಿಲ್ಲ. ಅಷ್ಟೊಂದು ಬೆಲೆ ಏರಿಕೆಯಾಗಿದೆ ಎಂದರು. ಈ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶ ಮಾಡಿ, ನೀವು ಅಂಗಡಿಗೆ ಹೋಗುವ ಸ್ಥಿತಿಯಲ್ಲಿ ಇಲ್ಲ ಬಿಡಿ. ಎಲ್ಲವೂ ಮನೆಗೆ ಬರುತ್ತದೆ ಎಂದು ಕಾಲೆಳೆದರು. ಹಾಗಾದರೆ ನೀನು‌ ಹೋಗುತ್ತಿಯಾ? ಎಂದು ಸಿದ್ದರಾಮಯ್ಯ ಕೇಳಿದರು. ಮುಂದುವರೆದು ಹೆಚ್.ಡಿ. ರೇವಣ್ಣ ಕೂಡ ಅಂಗಡಿಗೆ ಹೋಗಲ್ಲ‌. ಅವರ ಬಟ್ಟೆ ಕೂಡ ಅವರ ಮನೆಯವರೇ ತಂದು ಕೊಡುತ್ತಾರೆ ಎಂದರು.

ಸದನದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು

ಈ ಸಂದರ್ಭದಲ್ಲಿ ಬಟ್ಟೆ ಖರೀದಿಗೆ ಸಿದ್ದರಾಮಯ್ಯ ಹೋಗಿದ್ರು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಆಗ ಸಿದ್ದರಾಮಯ್ಯ, ಹೌದು ನಾನು ಬಟ್ಟೆ ಖರೀದಿಸಿದ್ದು ಟಿವಿಯಲ್ಲಿ ಬಂತು ಎಂದರು. ಆಗ ಬೊಮ್ಮಾಯಿ ಅವರು, 90 ಸೆಟ್ ಬಟ್ಟೆ ತಂದ್ರಿ‌, ಅಷ್ಟೊಂದು ಏನು ಮಾಡ್ತೀರಾ ಅಂದರು. ನಾನು ದಪ್ಪ ಆದ್ರೂ ಪಂಚೆ ಬದಲಾಗಲ್ಲ. ನಾನು ಹೇಗೆ ಇದ್ರೂ ಪಂಚೆ ಹಾಕಬಹುದು. ಅದಕ್ಕೆ ಅಷ್ಟೊಂದು ಬಟ್ಟೆ ತಂದಿದ್ದೆ ಎಂದು ಸಮಜಾಯಿಷಿ ನೀಡಿದರು.

ಮಾನ ಮುಚ್ಚಿಕೊಳ್ಳುವುದಕ್ಕೆ ಬಟ್ಟೆ ಹಾಕೋದು. ದುಡ್ಡಿಲ್ಲದೆ ಕೊಂಡು ಕೊಳ್ಳುವ ಶಕ್ತಿಯೂ ಹೋಗಿದೆ. ವ್ಯಾಪಾರ ಮೊದಲಿನಂತೆ ನಡೆಯುತ್ತಿಲ್ಲ. ಎಲ್ಲಿ ಉತ್ಪಾದನೆ ಇರುತ್ತದೋ ಅಲ್ಲಿ ಕೊಂಡುಕೊಳ್ಳುವ ಶಕ್ತಿಯೂ ಇರುತ್ತದೆ. ಎಲ್ಲಿ ಉತ್ಪಾದನೆ ಇರಲ್ಲ, ಅಲ್ಲಿ ಕೊಂಡುಕೊಳ್ಳುವ ಶಕ್ತಿಯೂ ಇರಲ್ಲ ಎಂದರು.

2014 ರಲ್ಲಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದಾಗ ಪೆಟ್ರೋಲ್ ಮೇಲೆ ವಿಧಿಸುತ್ತಿದ್ದ ಅಬಕಾರಿ ಸುಂಕ 9 ರೂಪಾಯಿ 21 ಪೈಸೆ ಇತ್ತು ಹಾಗೂ ಡೀಸೆಲ್‌ ಮೇಲೆ 3 ರೂಪಾಯಿ 46 ಪೈಸೆ ಇತ್ತು, ಇಂದು ಪೆಟ್ರೋಲ್ ಮೇಲೆ 32 ರೂಪಾಯಿ 98 ಪೈಸೆ ಹಾಗೂ ಡೀಸೆಲ್‌ ಮೇಲೆ 31 ರೂಪಾಯಿ 83 ಪೈಸೆ ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2014ರ ಕಚ್ಚಾತೈಲದ ಬೆಲೆಯ ಪ್ರಕಾರ, ಒಂದು ಬ್ಯಾರಲ್ ಗೆ ರೂ.6,794 ಆಗುತ್ತಿತ್ತು. ಇಂದು ಪ್ರತೀ ಬ್ಯಾರಲ್ ಗೆ ರೂ.4,008 ಆಗುತ್ತಿದೆ. ಕಚ್ಚಾತೈಲ ಬೆಲೆ ಕಡಿಮೆಯಾದಂತೆ ಪೆಟ್ರೋಲ್ ಬೆಲೆ ಕಡಿಮೆಯಾಗಬೇಕಿತ್ತಲ್ಲವೇ? ಇದಕ್ಕೆ ನರೇಂದ್ರ ಮೋದಿಯವರ ಸರ್ಕಾರವನ್ನು ಹೊಣೆ ಮಾಡದೆ ಇನ್ಯಾರನ್ನು ಹೊಣೆ ಮಾಡಬೇಕು?.

2013-14 ರಲ್ಲಿ ಭಾರತ 184 ಮಿಲಿಯನ್ ಟನ್ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿತ್ತು. 2019-20 ರಲ್ಲಿ 228 ಮಿಲಿಯನ್ ಟನ್ ಗೆ ಏರಿಕೆಯಾಗಿದೆ. ಕಚ್ಚಾತೈಲ ಆಮದು ಕಡಿಮೆ ಮಾಡಿಲ್ಲ ಎಂದು ಹಿಂದಿನ ಸರ್ಕಾರಗಳನ್ನು ದೂರುವ ಪ್ರಧಾನಿ ನರೇಂದ್ರ ಮೋದಿಯವರು ಕಳೆದ 7 ವರ್ಷಗಳಿಂದ ತಾವೇನು ಮಾಡಿದ್ದಾರೆ ಎಂದು ಒಮ್ಮೆ ನೋಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಥಿಯೇಟರ್​ಗಳಲ್ಲಿ ಶೇ.100ರಷ್ಟು ಆಸನ ಭರ್ತಿ ಮುಂದುವರಿಕೆ.... ಸಿನಿಮಾ ಮಂದಿಗೆ ಸಿಹಿ ಸುದ್ದಿ ನೀಡಿದ ಸಿಎಂ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ವೊಂದಕ್ಕೆ 125 ಡಾಲರ್ ಇದ್ದಾಗ ದೇಶದಲ್ಲಿ ಪೆಟ್ರೋಲ್ ಬೆಲೆ 57 ರೂಪಾಯಿ ಇತ್ತು. ಈಗ ಕಚ್ಚಾತೈಲ ಬೆಲೆ ಪ್ರತೀ ಬ್ಯಾರಲ್ ಗೆ ಕೇವಲ 54.77 ಡಾಲರ್ ಇದೆ. ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 94 ರೂಪಾಯಿ ಆಗಿದೆ. ಇದನ್ನು ಕೇಂದ್ರ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಕರೆದರೆ ತಪ್ಪೇನು? ಎಂದು ಪ್ರಶ್ನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.