ಬೆಂಗಳೂರು: ಹಲವು ಮಹತ್ವದ ವಿಚಾರಗಳ ಚರ್ಚೆಗಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಬೆಳಗ್ಗೆ 9 ಕ್ಕೆ ವಿಧಾನಸೌಧದಲ್ಲಿ ಶಾಸಕಾಂಗ ಸಭೆ ಕರೆದಿದ್ದಾರೆ.
![siddaramaih-invited-the-party-leaders-for-congress-legislature-meeting](https://etvbharatimages.akamaized.net/etvbharat/prod-images/kn-bng-06-siddu-call-clp-script-7208077_01032021152020_0103f_1614592220_1005.jpg)
ಸಭೆಗೆ ತಪ್ಪಿಕೊಳ್ಳದೇ ಎಲ್ಲ ಶಾಸಕರು ಹಾಜರಿರಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ತುಕಾರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒನ್ ನೇಷನ್ ಒನ್ ಎಲೆಕ್ಷನ್, ರಾಜ್ಯ ಬಜೆಟ್ ಜೊತೆಗೆ ಎಪಿಎಂಸಿ ಕಾಯ್ದೆ ವಿರುದ್ಧ ಜನಾಂದೋಲನ ರೂಪಿಸುವ ಬಗ್ಗೆ ಹಾಗೂ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಗೊಂದಲಗಳ ನಿವಾರಣೆ ವಿಚಾರವಾಗಿಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಓದಿ: 3ನೇ ಲಸಿಕಾ ಅಭಿಯಾನ ಪ್ರಾರಂಭ : ನಿರ್ಭಯವಾಗಿ ಲಸಿಕೆ ಪಡೆದ ಹಿರಿಯ ನಾಗರಿಕರು
ಗುರುವಾರವೇ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮೊದಲ ಎರಡು ದಿನ ಒನ್ ನೇಷನ್, ಒನ್ ಎಲೆಕ್ಷನ್ ವಿಚಾರವಾಗಿ ಚರ್ಚೆ ನಡೆಯಲಿದೆ. ಸೋಮವಾರ ಬಜೆಟ್ ಮಂಡನೆಯಾಗುವ ಹಿನ್ನೆಲೆ ಬಜೆಟ್ ಮೇಲಿನ ಚರ್ಚೆಯಲ್ಲಿ ಯಾವ ರೀತಿ ಭಾಗವಹಿಸಬೇಕು ಎಂಬ ವಿಚಾರ ಕೂಡ ಶಾಸಕಾಂಗ ಸಭೆಯಲ್ಲಿ ಚರ್ಚೆಗೆ ಬರಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಐವರು ಕಾರ್ಯಾಧ್ಯಕ್ಷ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.