ಬೆಂಗಳೂರು : ರಾಜ್ಯದಲ್ಲಿ ಹಿಂದಿ ಹೇರಿಕೆ ಅಷ್ಟು ಸುಲಭವಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಭದ್ರಾವತಿ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕಡೆಗಣನೆ ವಿಚಾರವಾಗಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆಯಾಗಿದೆ. ಇದನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ.
ಅಮಿತ್ ಶಾಗೆ ಕನ್ನಡ ಬರುತ್ತೇನ್ರಿ?, ಕಾರ್ಯಕ್ರಮ ನಡೆದಿರುವುದು ಕರ್ನಾಟಕದಲ್ಲಿ. ಹಾಗಾಗಿ, ಕನ್ನಡ ಭಾಷಾ ಬಳಕೆ ಇರಲೇಬೇಕಿತ್ತು. ಕನ್ನಡ ಭಾಷೆ ಬಳಸದೆ ಇರುವುದು ಅಪರಾಧ ಎಂದು ಅಭಿಪ್ರಾಯಪಟ್ಟರು.
ಬಿಎಸ್‌ವೈ ಸರ್ಕಾರದ ಬಗ್ಗೆ ಅಮಿತ್ ಶಾ ಗುಣಗಾನ ವಿಚಾರ ಮಾತನಾಡಿ, ಅವರಿಗೆ ಒಳ್ಳೆಯ ಸರ್ಕಾರ ಕೊಟ್ಟಿರೋದು ಗೊತ್ತಿಲ್ಲ. ಕೇಂದ್ರದಲ್ಲಿ ಒಳ್ಳೆಯ ಸರ್ಕಾರ ನೀಡಿದ್ದಾರಾ?. ಹಾಗಾಗಿ, ಯಡಿಯೂರಪ್ಪ ಸರ್ಕಾರವನ್ನ ಸಮರ್ಥಿಸಿಕೊಳ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಮರ್ಥಿಸಿಕೊಳ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಗೋ ಮಾಂಸ ತಿನ್ನುವ ಸಿದ್ದರಾಮಯ್ಯನವರೊಂದಿಗೆ ಆರೆಸ್ಸೆಸ್ ನಾಯಕರು ಮಾತಾಡಲ್ಲ; ಕಟೀಲ್