ETV Bharat / state

ಒಂದೇ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ, ಬೊಮ್ಮಾಯಿ, ಸೋಮಣ್ಣ

Ramanashree Sharana Awards 2023: 18ನೇ ವರ್ಷದ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ‌ ಕಾರ್ಯಕ್ರಮದಲ್ಲಿ ಸಿಎಂ‌ ಸಿದ್ದರಾಮಯ್ಯ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವಿ.ಸೋಮಣ್ಣ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.

siddaramaiah
ಸಿಎಂ‌ ಸಿದ್ದರಾಮಯ್ಯ
author img

By ETV Bharat Karnataka Team

Published : Nov 17, 2023, 6:45 AM IST

ಬೆಂಗಳೂರು: ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಆಯೋಜಿಸಿದ್ದ ಹದಿನೆಂಟನೇ ವರ್ಷದ 'ರಮಣಶ್ರೀ ಶರಣ ಪ್ರಶಸ್ತಿ' ಪ್ರದಾನ‌ ಕಾರ್ಯಕ್ರಮದಲ್ಲಿ ಸಿಎಂ‌ ಸಿದ್ದರಾಮಯ್ಯ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವಿ.ಸೋಮಣ್ಣ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಮೂವರು ನಾಯಕರು ಒಂದೇ ವೇದಿಕೆ ಹಂಚಿಕೊಂಡಿರುವುದು ವಿಧಾನಸಭಾ ಚುನಾವಣೆಯ ಬಳಿಕ ಇದೇ ಮೊದಲು.‌

ವಿ.ಸೋಮಣ್ಣ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಅದಾದ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಸೋಮಣ್ಣ ಬಿಜೆಪಿಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದರು. ಬಿಜೆಪಿ ರಾಜ್ಯಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸೋಮಣ್ಣ, ಬಿ.ವೈ.ವಿಜಯೇಂದ್ರ ಆಯ್ಕೆಯಿಂದ ಅಸಮಾಧಾನಗೊಂಡಿದ್ದರು. ಹೀಗಾಗಿ ಅವರು ಮತ್ತೆ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸೋಮಣ್ಣನ ಮೇಲೆ ನನಗೆ ದ್ವೇಷ ಇಲ್ಲ: ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ, "ಸೋಮಣ್ಣ ಮತ್ತು ಬೊಮ್ಮಾಯಿ ಅವರನ್ನು ಹೊಗಳಿದರು. ನಾನು ಸೋಮಣ್ಣ, ಬೊಮ್ಮಾಯಿ ಒಂದೇ ಪಕ್ಷದಲ್ಲಿ ಇದ್ದೆವು. ಆಗ ಬಹಳ ಪ್ರೀತಿ, ವಿಶ್ವಾಸ ಇತ್ತು. ಈಗಲೂ ಬೊಮ್ಮಾಯಿಯವರ ಜತೆ ಅದೇ ಪ್ರೀತಿ ಇದೆ. ವೈಯಕ್ತಿಕವಾಗಿ ಬೊಮ್ಮಾಯಿಯವರ ತಂದೆ ನನಗೆ ಬಹಳ ಸಹಾಯ ಮಾಡಿದ್ದಾರೆ. ಇವರಿಗೆ ನನ್ನ ಮೇಲೆ ಆಂತರಿಕ ಪ್ರೀತಿ ಇದೆ. ಸೋಮಣ್ಣ ವರುಣಾದಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದ. ಆದರೂ ಸೋಮಣ್ಣನಿಗೂ ನನ್ನ ಮೇಲೆ ಪ್ರೀತಿ ಇದೆ.‌ ಪಾಪ ಹೈಕಮಾಂಡ್ ಹೇಳಿದ್ರು ಅಂತ ನನ್ನ ವಿರುದ್ಧ ನಿಂತ್ಕೊಂಡಿದ್ದ" ಎಂದರು.

ಸಿದ್ದರಾಮಯ್ಯ ಅತ್ಯಂತ ಆತ್ಮೀಯರು: ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಿದ ವಿ.ಸೋಮಣ್ಣ, "ಆಡಳಿತ, ವಿಪಕ್ಷ ಅನ್ನೋದು ಇಲ್ಲ. ಕರ್ನಾಟಕದಲ್ಲಿ ಬೇರೆ ರಾಜ್ಯಗಳಿಗಿಂತ ರಾಜಕೀಯದಲ್ಲಿ ಉತ್ತಮ ಬಾಂಧವ್ಯ ಇದೆ. ನನಗೆ ಸಿದ್ದರಾಮಯ್ಯ ಮತ್ತು ಬೊಮ್ಮಾಯಿಯವರು ಅತ್ಯಂತ ಆತ್ಮೀಯರು. ಜನತಾ ಪಕ್ಷದಲ್ಲಿ ಇದ್ದವರು ನಾವು. ಈಗ ಎಲ್ಲೇ ಇದ್ರೂ ನಮ್ಮದೇ ನೀತಿ ತತ್ವದಡಿ ಸಣ್ಣ ಅಪಚಾರವೂ ಇಲ್ಲದೇ ಬದುಕುತ್ತಿದ್ದೀವಿ" ಎಂದು ತಿಳಿಸಿದರು.

ಕಾಂಗ್ರೆಸ್ ಸೇರುವ ಅವಶ್ಯಕತೆ ಈಗಿಲ್ಲ: "ಪಕ್ಷಕ್ಕೆ ನನ್ನದೂ ದುಡಿಮೆ,‌ ಶ್ರಮ ಇದೆ. ನನಗೆ ಡಬಲ್ ಗೇಮ್ ಮಾಡೋದು ಗೊತ್ತಿಲ್ಲ. ಅಭಿಪ್ರಾಯವನ್ನು ಮುಂದೆ ತಿಳಿಸುತ್ತೇನೆ. ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ. ಆದರೆ ಕಾಂಗ್ರೆಸ್ ಸೇರುವ ಅವಶ್ಯಕತೆ ನನಗೆ ಈಗಿಲ್ಲ" ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ನೆಹರು ಬದುಕಿನ ಮೌಲ್ಯಗಳು : ಸಿದ್ದರಾಮಯ್ಯ ಸ್ಮರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.