ETV Bharat / state

ಹೈಕಮಾಂಡ್ ಸೂಚಿಸಿದ ಕಡೆ ಸ್ಪರ್ಧಿಸುವೆ : ಸಿದ್ದರಾಮಯ್ಯ - ಈಟಿವಿ ಭಾರತ ಕನ್ನಡ

ಹೈಕಮಾಂಡ್​ ಸೂಚಿಸದ ಕಡೆ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ
ಸಿದ್ದರಾಮಯ್ಯ
author img

By

Published : Mar 18, 2023, 4:19 PM IST

ಬೆಂಗಳೂರು: ಹೈಕಮಾಂಡ್ ನಾಯಕರು ವರುಣಾದಲ್ಲಿ ಹೇಳಿದ್ರೆ ಅಲ್ಲಿ, ಕೋಲಾರದಲ್ಲಿ ಹೇಳಿದ್ರೆ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನ ಶಿವಾನಂದವೃತ್ತ ಸಮೀಪದ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ವಿಧಾನಸಭಾ ಚುನಾವಣೆ ಸ್ಪರ್ಧೆ ಬಗ್ಗೆ ನಾನು ಟೆನ್ಷನ್ ಆಗಿಲ್ಲ. ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಈ ತಿಂಗಳು 22ಕ್ಕೆ ಪಟ್ಟಿ ಬಿಡುಗಡೆ ಆಗಲಿದೆ ಅಂದು ಯುಗಾದಿ ಹಬ್ಬ ಒಳ್ಳೆ ದಿ‌ನ ಬಿಡುಗಡೆಯಾಗುತ್ತೆ ಎಂದರು.

ಬಳಿಕ ಹಾಲಿ ಶಾಸಕರ ಟಿಕೆಟ್​ ವಿಚಾರವಾಗಿ ಮಾತನಾಡಿ, ಇನ್ನು ​ಹಾಲಿ ಶಾಸಕರದ್ದು ಟಿಕೆಟ್​ ಫೈನಲ್ ಆಗಿಲ್ಲ. ಒಂದು ಹೆಸರಿರೋ ಮತ್ತು ಗೊಂದಲ ಇಲ್ಲದ ಕಡೆ ಟಿಕೆಟ್​ ಫೈನಲ್ ಆಗಿದೆ. ವರುಣಾ ಕ್ಷೇತ್ರದಿಂದ ಈಗ ಯತೀಂದ್ರ ಇದ್ದು ಈ ಕ್ಷೇತ್ರದಿಂದ ಸದ್ಯ ಇದು ಒಂದೇ ಹೆಸರು ಇರೋದು ಎಂದರು. ಬಳಿಕ ಕಾಂಗ್ರೆಸ್​ ಪಕ್ಷಕ್ಕೆ ಬಿಜೆಪಿ ನಾಯಕರ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ, ಪಕ್ಷಕ್ಕೆ ಬಿಜೆಪಿಯಿಂದ ಇನ್ನಷ್ಟು ನಾಯಕರು ಬರಬಹುದು ಎಂದು ಹೇಳಿದರು.

ಇನ್ನು ಕೋಲಾರದರಿಂದ ಸ್ಪರ್ಧೆ ಬಗ್ಗೆ ಕೇಳಿದ ಪ್ರಶ್ನೆಗೆ, ಹೈಕಮಾಂಡ್ ತೀರ್ಮಾನ ಮಾಡುತ್ತೆ. ಏನ್ ಹೇಳ್ತಾರೋ ಗೊತ್ತಿಲ್ಲ, ಒಂದ್ ಕಡೆ ಸ್ಪರ್ಧೆಗೆ ಹೇಳ್ತಾರೋ ಅಥವಾ ಮೂರು ಕಡೆ ಹೇಳ್ತಾರೋ ಗೊತ್ತಿಲ್ಲ ಎಂದ ಅವರು ಜನಸೇವೆ ಮಾಡೋಕೆ ನಾವು ಇರೋದು ಎಂದುರು. ಇನ್ನು ಬಾದಾಮಿ ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಾಯದ ಬಗ್ಗೆ ಕೇಳಿದ ಪ್ರಶ್ನೆಗೆ, ಬಾದಾಮಿ‌ ಕ್ಷೇತ್ರದವರೂ ಅಲ್ಲಿಂದ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ನನ್ನ ಪ್ರಕಾರ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಹೇಳಲ್ಲ. ಆದರೂ ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ಹೇಳಿದ ಕ್ಷೇತ್ರದಿಂದ ನಾನು ಸ್ಫರ್ಧೆ‌ ಮಾಡುತ್ತೇನೆ. ಈವರೆಗೂ ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿ ಹಾಕಿಲ್ಲ. ಇದನ್ನೆಲ್ಲ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇನೆ ಎಂದು ತಿಳಿಸಿದರು.

ಇನ್ನು ಕೋಲಾರದಲ್ಲಿ ಮೆನ ನೋಡಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನಾನು ಕೋಲಾರದಲ್ಲಿ ಮನೆ ಮಾಡಿಲ್ಲ ಆದರೇ ಮನೆ ನೋಡಿದ್ದು ನಿಜ ಎಂದು ನುಡಿದರು. ಕೋಲಾರ ಪ್ರವಾಸ ರದ್ದು ಬಗ್ಗೆ ಕೇಳಿದ ಪ್ರಶ್ನೆಗೆ, ನಾಳೆ ಬೆಳಗಾವಿಗೆ ಹೋಗಬೇಕಾಗಿದೆ. ಆದ ಕಾರಣ ಕೋಲಾರ ಪ್ರವಾಸ ರದ್ದು ಮಾಡಿದ್ದೇನೆ ಎಂದು ಹೇಳಿದರು. ಬೆಂಗಳೂರು-ಮೈಸೂರು ಹೈವೇ ರಸ್ತೆಯಲ್ಲಿ ಮಳೆ ನೀರು ನಿಂತ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಸರಿಯಾದ ರೀತಿಯಲ್ಲಿ ಹೆದ್ದಾರಿ ಕೆಲಸ ಆಗಿಲ್ಲ. ತರಾತುರಿಯಲ್ಲಿ ಎಲೆಕ್ಷನ್ ಹಿನ್ನೆಲೆ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ನೀರು ಹೋಗಲು ಅವಕಾಶ ಮಾಡಿಕೊಟ್ಟಿಲ್ಲ. ರಸ್ತೆಯ 20% ಕೆಲಸ ಇನ್ನೂ ಆಗಿಲ್ಲ. ಇನ್ನು ಈ ರಸ್ತೆ ಅಪ್ರೂವಲ್ ಆಗಿದ್ದು ಕಾಂಗ್ರೆಸ್ ಅವಧಿಯಲ್ಲಿ. ಸ್ಟೇಟ್ ಹೈವೇ ಇದ್ದಿದ್ದನ್ನ ನ್ಯಾಶನಲ್ ಹೈವೇ ಮಾಡಿದರು ಎಂದು ಹೇಳಿದರು.

ಇದನ್ನೂ ಓದಿ: ಒಕ್ಕಲಿಗರ ಸಂಘ ಕೂಡಲೇ ಮೂರು ಜನರ ಮೇಲೆ ಎಫ್​ಐಆರ್ ದಾಖಲಿಸಲಿ: ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.