ETV Bharat / state

ಇದು ಅಭಿವೃದ್ಧಿ ವಿರೋಧಿ, ಸಾಲದ ಶೂಲಕ್ಕೆ ದೂಡುವ ಬಜೆಟ್​​.. ಸರ್ಕಾರದ ಮೇಲೆ ಸಿದ್ದರಾಮಯ್ಯ ಕಿಡಿ

author img

By

Published : Mar 15, 2021, 7:07 PM IST

33 ಇಲಾಖೆಗಳನ್ನು ವಲಯವಾರು ಮಾಡಿರುವುದು ತಪ್ಪು. ಯಾವ ಇಲಾಖೆಗೆ ಎಷ್ಟು ಖರ್ಚು ಮಾಡುತ್ತೀರಿ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆ ಮೂಲಕ ಆಪರೇಷನ್ ಕಮಲ‌ ಮಾಡಿ ಆಡಳಿತಕ್ಕೆ ಬಂದು ಆಪರೇಷನ್ ಬರ್ಬಾದ್ ಮಾಡ್ತಾ ಇದ್ದಾರೆ ಎಂದು ಕಿಡಿ ಕಾರಿದರು..

siddaramaiah
ಸಿದ್ದರಾಮಯ್ಯ

ಬೆಂಗಳೂರು : 2021-22ನೇ ಸಾಲಿನ ಬಜೆಟ್ ಅಭಿವೃದ್ಧಿ ವಿರೋಧಿ, ಸಾಲದ ಶೂಲಕ್ಕೆ ದೂಡುವ, ದಲಿತ, ಬಡವರ ವಿರೋಧಿ ಬಜೆಟ್ ಆಗಿದೆ. ಈ ಬಜೆಟ್‌ನ ತೀವ್ರವಾಗಿ ವಿರೋಧ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಈ ಸರ್ಕಾರ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿಲ್ಲ. ಇದು ಅನಿವಾರ್ಯವಾಗಿ ವಿರೋಧ ಮಾಡುವ ಬಜೆಟ್ ಆಗಿದೆ. ಈ ಬಜೆಟ್ ಪಾರದರ್ಶಕವಾಗಿಲ್ಲ. ಹಿಂದಿನ ಪದ್ಧತಿ ಬದಲಾವಣೆ ಮಾಡಲಾಗಿದೆ.

ಕಳೆದ ವರ್ಷದಿಂದ 6 ವಲಯಗಳನ್ನಾಗಿ ಬಜೆಟ್ ಮಂಡನೆ ಮಾಡಲಾಗುತ್ತಿದೆ‌. ಯಾವ ಇಲಾಖೆಗೆ ಎಷ್ಟು ಹಣ ಇಟ್ಟಿದ್ದಾರೆ. ಎಷ್ಟು ಹಣ ಖರ್ಚಾಗಿದೆ. ಎಷ್ಟು ಹಣ ಖರ್ಚು ಮಾಡಲಾಗುವುದು. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಜೆಟ್​​​ನ ಪಾವಿತ್ರ್ಯತೆನೇ ಹೋಗಿಬಿಟ್ಟಿದೆ. ಕಳೆದ ಬಾರಿಗಿಂತ 16,000 ಕೋಟಿ ರೂ. ಬಜೆಟ್ ಜಾಸ್ತಿಯಾಗಿದೆ. ಆದರೆ, ಕಳೆದ ಬಾರಿಗಿಂತ ಕ್ಷೇತ್ರವಾರು ಅನುದಾನ ಕಡಿಮೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ವಲಯ ಎರಡರಲ್ಲಿ ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣ, ಆರೋಗ್ಯ, ಸಮಾಜ‌ಕಲ್ಯಾಣ, ವಸತಿ, ಕಾರ್ಮಿಕ ಇಲಾಖೆ ಬರುತ್ತವೆ. ಈ ಸರ್ವೋದಯ ವಲಯಕ್ಕೆ ಕಳೆದ ಬಾರಿ 72,093 ಕೋಟಿ ಮೀಸಲಿಡಲಾಗಿತ್ತು. ಈ ಬಾರಿ 62,150 ಕೋಟಿ ಅನುದಾನ ನೀಡಲಾಗಿತ್ತು. ಆ ಮೂಲಕ 9,943 ಕೋಟಿ ರೂ. ಕಡಿಮೆಯಾಗಿದೆ.

ಮೂರನೇ ವಲಯದಲ್ಲಿ ಮೂಲಸೌಕರ್ಯ, ಕೈಗಾರಿಕೆ, ಬಂದರು, ಗಣಿ, ಕುಡಿಯುವ ನೀರು ಪೂರೈಕೆ ಇಲಾಖೆ ಬರುತ್ತದೆ. ಇದಕ್ಕೆ ಕಳೆದ ಬಾರಿ 55,732 ಕೋಟಿ ಇಟ್ಟಿದ್ದರು. ಈ ಬಾರಿ 52,529 ಕೋಟಿ ರೂ. ನೀಡಿದ್ದಾರೆ. ಆ ಮೂಲಕ 3,203 ಕೋಟಿ ಕಡಿಮೆಯಾಗಿದೆ.

ವಲಯ ನಾಲ್ಕು ಬೆಂಗಳೂರು ಅಭಿವೃದ್ಧಿಗೆ ಕಳೆದ ಬಾರಿ 8,772 ಕೋಟಿ ರೂ. ಇಡಲಾಗಿದೆ. ಆದರೆ, ಈ ಬಾರಿ 7,795 ಕೋಟಿ ರೂ. ಇಟ್ಟಿದ್ದಾರೆ. ಆ ಮೂಲಕ 977 ಕೋಟಿ ರೂ. ಕಡಿಮೆಯಾಗಿದೆ. ವಲಯ 5ರಲ್ಲಿ ಸಂಸ್ಕೃತಿ ಪರಂಪರೆ, ನೈಸರ್ಗಿಕ ಸಂಪನ್ಮೂಲ ವಲಯಗಳು ಬರುತ್ತವೆ. ಇದಕ್ಕೆ ಕಳೆದ ಬಾರಿ 4,552 ಕೋಟಿ ರೂ. ಅನುದಾನ ನೀಡಿದ್ದರು. ಈ ಬಾರಿ 2,645 ಕೋಟಿ ರೂ. ನೀಡಿದ್ದಾರೆ. 1,907 ಕೋಟಿ ರೂ. ಕಡಿತ ಆಗಿದೆ ಎಂದರು.

33 ಇಲಾಖೆಗಳನ್ನು ವಲಯವಾರು ಮಾಡಿರುವುದು ತಪ್ಪು. ಯಾವ ಇಲಾಖೆಗೆ ಎಷ್ಟು ಖರ್ಚು ಮಾಡುತ್ತೀರಿ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆ ಮೂಲಕ ಆಪರೇಷನ್ ಕಮಲ‌ ಮಾಡಿ ಆಡಳಿತಕ್ಕೆ ಬಂದು ಆಪರೇಷನ್ ಬರ್ಬಾದ್ ಮಾಡ್ತಾ ಇದ್ದಾರೆ ಎಂದು ಕಿಡಿ ಕಾರಿದರು.

ಮೃತ ಕುರಿಗೆ ಪರಿಹಾರ ಹಣ ಬಿಡುಗಡೆ ಮಾಡುತ್ತೇನೆ : ಸತ್ತ ಕುರಿಗೆ ಪಾರಿಹಾರ ನೀಡುತ್ತಿಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಮೃತ ಕುರಿಗೆ ನೀಡಲಾಗುವ ಪರಿಹಾರ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ.‌ ನಾನೇ ನನ್ನ ಕುರಿಗಳು ಸತ್ತಿರುವ ಸಂಬಂಧ ಅರ್ಜಿ ಸಲ್ಲಿಸಿದ್ದೇನೆ.

ಆದರೆ, ಯಾವುದೇ ಪರಿಹಾರ ಸಿಕ್ಕಿಲ್ಲ. ಇಲಾಖೆ ಅಧಿಕಾರಿಗಳೇ ಯೋಜನೆ ಸ್ಥಗಿತವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಬಾಕಿ ಇರುವ 38 ಕೋಟಿ ರೂ.‌ ಹಣವನ್ನು ಎರಡು‌ ಮೂರು ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ. ಯೋಜನೆ ಸ್ಥಗಿತಗೊಳಿಸಲ್ಲ ಎಂದರು.

ನಮ್ಮ ಸರ್ಕಾರ 165 ಭರವಸೆಗಳಲ್ಲಿ 98% ರಷ್ಟು ಅನುಷ್ಠಾನ ‌ಮಾಡಿದ್ದೇವೆ. ಏನು ಕೆಲಸ‌ ಮಾಡದೇ ಭಾವನಾತ್ಮಕ ವಿಚಾರ ಹೇಳಿ ಮತ ಗಳಿಸುತ್ತೇವೆ ಎಂಬುದು ಬಿಜೆಪಿ ಅವರ ಯೋಚನೆ. ನಿಜವಾದ ಅಂಶಗಳ ಬಗ್ಗೆ ಮಾತನಾಡಲ್ಲ. ಮೋದಿ ಅವರು ಪೆಟ್ರೋಲ್ ಬಗ್ಗೆ ಮಾತನಾಡಲ್ಲ.

ಪುಲ್ವಾಮಾ, ಪಾಕಿಸ್ತಾನ ಬಗ್ಗೆ ಮಾತನಾಡುತ್ತಾರೆ. ಅವರು ಬುದ್ಧಿವಂತರು. ಆ ಜಾಣ್ಮೆ ನಿಮಗಿದೆ, ನಮಗಿಲ್ಲ. ನಾವು ಭೂಮಿ ಕೊಟ್ಟರೆ ನೀವು ಕಿತ್ತುಕೊಳ್ಳುತ್ತೀರಿ. ನೀವು ಖಾಸಗಿಕರಣ ಬೇಕು ಅಂತೀರಾ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಾನು ಸಿಎಂ ಆಗಿದ್ದಾಗ ಒಟ್ಟು 1.36 ಲಕ್ಷ ಕೋಟಿ ರೂ. ಸಾಲ ಇತ್ತು. ನನ್ನ ಕಾಲದಲ್ಲಿ ಹೊಣೆಗಾರಿಕೆ 25% ವಿತ್ತೀಯ ಹೊಣೆಗಾರಿಕೆ ನಿಯಮದ ಒಳಗೇ ಇತ್ತು. ಆದರೆ, ಈಗ ಅದು ಮೀರಿದೆ. ಐದು ವರ್ಷದಲ್ಲಿ ನಾನು ಮಾಡಿದ್ದು 1.06 ಲಕ್ಷ ಕೋಟಿ ರೂ. ಸಾಲ.

ಇವರು ಎರಡು ವರ್ಷದಲ್ಲಿ 41 ಸಾವಿರ ಕೋಟಿ ರೂ. ಸಾಲ ಮಾಡಿದ್ದಾರೆ. ಇನ್ನು ಮುಂದೆ ಎಷ್ಟು ಸಾಲ ಮಾಡುತ್ತಾರೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕೊರೊನಾ ಸೋಂಕು ಹೆಚ್ಚಳ: ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.