ETV Bharat / state

'ರೈತರ ಭದ್ರತೆ ದೇಶದ ಭದ್ರತೆ' ಪುಸ್ತಕ ಬಿಡುಗಡೆ ಮಾಡಿದ ಸಿದ್ದರಾಮಯ್ಯ - ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್

ವಿಧಾನಸಭೆಯ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನ ಶಿವಾನಂದ ವೃತ್ತದಲ್ಲಿರುವ ಗಾಂಧಿ ಭವನದಲ್ಲಿ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಬರೆದಿರುವ 'ರೈತರ ಭದ್ರತೆ ದೇಶದ ಭದ್ರತೆ' ಪುಸ್ತಕವನ್ನು ಬಿಡುಗಡೆ ಮಾಡಿದರು.

Siddaramaiah
Siddaramaiah
author img

By

Published : Sep 13, 2020, 3:31 PM IST

ಬೆಂಗಳೂರು: ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ಬರೆದಿರುವ 'ರೈತರ ಭದ್ರತೆ ದೇಶದ ಭದ್ರತೆ' ಪುಸ್ತಕವನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ಬೆಂಗಳೂರಿನ ಶಿವಾನಂದ ವೃತ್ತದಲ್ಲಿರುವ ಗಾಂಧಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಉತ್ಪಾದಕರು ರೈತರು, ಆದರೆ ಈ ಉತ್ಪಾದಕರಾಗಿರುವ ರೈತರಿಗೆ ತಮ್ಮ ಉತ್ಪಾದನೆಯ ಬೆಲೆ ನಿಗದಿ ಮಾಡುವ ಅಧಿಕಾರ ಇಲ್ಲ. ಬೆಂಕಿ ಪೊಟ್ಟಣದ ಫ್ಯಾಕ್ಟರಿಯ ಮಾಲೀಕ ಬೆಂಕಿ ಪೊಟ್ಟಣದ ಬೆಲೆ ನಿಗದಿ ಮಾಡ್ತಾನೆ. ಆದರೆ ರೈತರು‌ ಮಾತ್ರ ತಾವು ಬೆಳೆದ ಬೆಳೆಯ ಬೆಲೆ ನಿಗದಿ ಮಾಡುವ ಅಧಿಕಾರ ಹೊಂದಿಲ್ಲ. ಆದ್ದರಿಂದಲೇ ರೈತರು ಶೋಷಣೆಗೆ ಒಳಗಾಗಿದ್ದಾರೆ ಎಂದರು.

'ರೈತರ ಭದ್ರತೆ ದೇಶದ ಭದ್ರತೆ' ಪುಸ್ತಕದಲ್ಲಿ ಸಾಕಷ್ಟು ಮಾಹಿತಿ ಇದೆ. ಮುಖ್ಯವಾಗಿ ಭೂ ಸುಧಾರಣೆ ಬಗ್ಗೆ ಒಳ್ಳೆಯ ಮಾಹಿತಿ ಇದೆ. ನಾಗಮೋಹನ್ ದಾಸ್ ರೈತರ ಕುಟುಂಬದಿಂದ ಬಂದವರು. ಹಳ್ಳಿಗಾಡಿನ ಕೃಷಿ ಕ್ಷೇತ್ರದ ಬಗ್ಗೆ ಹೆಚ್ಚು ಅನುಭವವಿದೆ. ರೈತರಿಗೆ ಶೋಷಣೆ ಆಗುತ್ತೆ ಅಂತ ಕಾಯ್ದೆ ತರುವುದು ಸರಿಯಲ್ಲ, ಎಪಿಎಂಸಿ ಆ್ಯಕ್ಟ್ ಜಾರಿ ಮಾಡಿದೆ. ಒಂದು ಕಡೆ ಭಾಷಣ ಮಾಡೋದು, ಮತ್ತೊಂದು ಕಡೆ ಕಾಯ್ದೆಯನ್ನು ಜಾರಿ ಮಾಡುವುದು. ಇದು ಸರ್ಕಾರದ ಅವೈಜ್ಞಾನಿಕ ತೀರ್ಮಾನ. ಬಲವಂತವಾಗಿ ಭಾರ ಹೊರಿಸಿದರೆ ಹೊರಬೇಕೇ?, ಕೇಂದ್ರದ ಮುಂದೆ ರಾಜ್ಯ ಸರ್ಕಾರ ಕೋಲೆ ಬಸವನಂತಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕೊರೊನಾದಿಂದಾಗಿ ಜನ ಸಾಯ್ತಿದ್ದಾರೆ. ಇದೇ ವೇಳೆ ಏಕಾಏಕಿ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದಿದ್ದಾರೆ. ಅರಸರ ಕಾಯ್ದೆಯ ಸೆಕ್ಷನ್ ಗಳನ್ನೇ ಕೈಬಿಟ್ಟಿದ್ದಾರೆ. ಕಾಯ್ದೆ ತರಬೇಕಾದರೆ ತುರ್ತು ಅವಶ್ಯಕತೆಯಿರಬೇಕು. ಆದರೆ ಈಗ ಅಂತ ಅವಶ್ಯಕತೆಯೂ ಇಲ್ಲ, ಅದೇಗೆ ತರಾತುರಿಯಲ್ಲಿ ಈ ಕಾಯ್ದೆಯನ್ನು ತಂದ್ರು. ಎಪಿಎಂಸಿ ಕಾಯ್ದೆ ಜಾರಿ ಅವಶ್ಯಕತೆ ಇಲ್ಲ. ರೈತರ ಜೊತೆಗೆ ಚರ್ಚೆ ಮಾಡದೆ ಎಪಿಎಂಸಿ ಕಾಯ್ದೆ ಜಾರಿ ಮಾಡಿದ್ದಾರೆ. ಇದರ ಅವಶ್ಯಕತೆ ಏನಿತ್ತು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಎಪಿಎಂಸಿ ಕಾಯ್ದೆ ಹಿಂಪಡೆಯಬೇಕು:
ರೈತ ನಾಯಕ ಪ್ರಕಾಶ್ ಕಮ್ಮರಡಿ ಸಮಾರಂಭ ಉದ್ದೇಶಿಸಿ ಮಾತನಾಡಿ, ಭೂ ಸ್ವಾಧೀನ, ಎಪಿಎಂಸಿ ಕಾಯ್ದೆ ಜಾರಿ ರಾಜ್ಯದ ರೈತರಿಗೆ ಮಾಡಿದ ದೊಡ್ಡ ಅನ್ಯಾಯ. ಇದರಿಂದ ರೈತರ ಅವನತಿ ಆಗಲಿದೆ. ಈ‌ ವಿವಾದಾತ್ಮಕ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ಸಂವಿಧಾನ ವಿರುದ್ಧವಾಗಿ ಸುಗ್ರೀವಾಜ್ಞೆ ಮೂಲಕ ಈ ಕಾಯ್ದೆ ಜಾರಿಗೆ ತರಲಾಗಿದೆ. ಇದರ ವಿರುದ್ಧ ಹಸಿರು, ನೀಲಿ, ಕೆಂಪು ಪಡೆಗಳ ಹೋರಾಟ ಅನಿವಾರ್ಯ. ಸದನದ ಹೊರಗೆ ರೈತ, ಕಾರ್ಮಿಕ, ದಲಿತರ ಹೋರಾಟ ನಡೆಯಲಿದೆ. ಸದನದ ಒಳಗೆ ಪ್ರತಿಪಕ್ಷಗಳು‌ ಹೋರಾಡಬೇಕಿದೆ ಎಂದು ವಿವರಿಸಿದರು.

ಸರ್ಕಾರದ ಕ್ರಮ ಸರಿಯಲ್ಲ:
ಕೃತಿಯ ಲೇಖಕ ಹಾಗೂ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಮಾತನಾಡಿ, ರೈತರ ಭೂಮಿ ಕಿತ್ತು ಕಾರ್ಪೋರೇಟ್ ಕಂಪನಿಗಳಿಗೆ ನೀಡುವ ಪ್ರಯತ್ನ ಸರ್ಕಾರದಿಂದ ನಡೆದಿದೆ. ರೈತರಿಗೆ ಅಗತ್ಯ ಸೌಲಭ್ಯಗಳನ್ನ ಸರ್ಕಾರ ಕೊಡಬೇಕು. ಆದರೆ ರೈತರ ಭೂಮಿ ಕಬಳಿಸುವ ಕೆಲಸ ನಡೆದಿದೆ. ಇವತ್ತಿನ ಪರಿಸ್ಥಿತಿ ಹೋರಾಟಕ್ಕೆ ದಾರಿ ಮಾಡಿಕೊಟ್ಟಿದೆ ಎಂದರು.

ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಭೂಸುಧಾರಣಾ ತಿದ್ದುಪಡಿ ಸುಗ್ರೀವಾಜ್ಞೆಯಿಂದ ರಿಯಲ್ ಎಸ್ಟೇಟ್ ಧಣಿಗಳಿಗೆ ಲಾಭ ಆಗಲಿದೆ. ಭ್ರಷ್ಟಾಚಾರಿಗಳಿಗೆ, ಕಾಳಧನಿಕರಿಗೆ ಲಾಭ ದೊರೆಯಲಿದೆ. ರೈತರು ಮಾತ್ರ ಸಾಲದಲ್ಲೇ ಸಾಯಬೇಕಾಗುತ್ತೆ. ರೈತರು, ದಲಿತರು, ಕಾರ್ಮಿಕರು ಒಗ್ಗೂಡಿ ಸರ್ಕಾರದ ಅವೈಜ್ಙಾನಿಕ‌ ತೀರ್ಮಾನದ ವಿರುದ್ಧ ಧ್ವನಿಯೆತ್ತಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.