ETV Bharat / state

ಪ್ರತ್ಯೇಕ ಜಿಲ್ಲೆ ಬಗ್ಗೆ ನಮ್ಮನ್ನು ವಿಶ್ವಾಸಕ್ಕೆ ತೆಗದುಕೊಳ್ಳಲು ವಿಶ್ವನಾಥ್ ಯಾರು?: ಸಿದ್ದು ತಿರುಗೇಟು - ಸಿಎಂ ಯಡಿಯೂರಪ್ಪ

ಯಡಿಯೂರಪ್ಪ ಸಭೆ ಕರೆದು ಮಾತನಾಡಬೇಕು. ಎಚ್.ವಿಶ್ವನಾಥ್ ಅನರ್ಹ ಶಾಸಕರಾಗಿದ್ದಾರೆ. ಅವರು ಪ್ರತ್ಯೇಕ ಜಿಲ್ಲೆ ರಚನೆ ಸಂಬಂಧ‌ ನಿರ್ಧಾರ ಕೈಗೊಳ್ಳಲು ಆಗುತ್ತಾ?. ಆ ನಿರ್ಧಾರವನ್ನು ಸಿಎಂ ಯಡಿಯೂರಪ್ಪ ತೆಗೆದುಕೊಳ್ಳಬೇಕು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
author img

By

Published : Oct 15, 2019, 7:45 PM IST

ಬೆಂಗಳೂರು : ಪ್ರತ್ಯೇಕ ಜಿಲ್ಲೆ ರಚನೆ ಸಂಬಂಧ ಎಚ್. ವಿಶ್ವನಾಥ್ ನಿರ್ಧಾರ ಕೈಗೊಳ್ಳಲು ಅವರು ಯಾರು ಎಂದು ಪ್ರತಿಪಕ್ಷ ‌ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮೈಸೂರು ವಿಭಜನೆ ಬಗ್ಗೆ ಮಾತನಾಡಲು ವಿಶ್ವನಾಥ್ ಯಾರು?. ಅವರು ನನಗಿಂತ ಮುಂಚಿನಿಂದ ರಾಜಕೀಯದಲ್ಲಿ ಇದ್ದಾರೆ. ಇಲ್ಲಿ ತನಕ ಅವರು ಪ್ರತ್ಯೇಕ ಜಿಲ್ಲೆ ಸಂಬಂಧ ಮಾತನಾಡಿಲ್ಲ. ಆ ಬಗ್ಗೆ ಪ್ರಯತ್ನವೂ ಮಾಡಿಲ್ಲ. ಈಗ ಅವರು ಏಕಾಏಕಿ ಪ್ರತ್ಯೇಕ ಜಿಲ್ಲೆ ಬಗ್ಗೆ ಮಾತನಾಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಲಾಭ ಬಿಟ್ಟು ಬೇರೆ ಏನೂ ಉದ್ದೇಶ‌ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ವಿಭಜನೆ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ

ಈ ಬಗ್ಗೆ ಮಾತನಾಡಬೇಕು ಅಂದರೆ ಯಡಿಯೂರಪ್ಪ ಸಭೆ ಕರೆದು ಮಾತನಾಡಬೇಕು. ಎಚ್.ವಿಶ್ವನಾಥ್ ಅನರ್ಹ ಶಾಸಕರಗಿದ್ದಾರೆ. ಅವರು ಪ್ರತ್ಯೇಕ ಜಿಲ್ಲೆ ರಚನೆ ಸಂಬಂಧ‌ ನಿರ್ಧಾರ ಕೈಗೊಳ್ಳಲು ಆಗುತ್ತಾ?. ಆ ನಿರ್ಧಾರವನ್ನು ಸಿಎಂ ಯಡಿಯೂರಪ್ಪ ತೆಗೆದುಕೊಳ್ಳಬೇಕು. ಆ ಭಾಗದ ಎಲ್ಲ ಶಾಸಕರನ್ನು ಕರೆದು ಸಿಎಂ ಚರ್ಚೆ ನಡೆಸಬೇಕು. ದೇವರಾಜು ಅರಸು ಹುಣಸೂರು ಕ್ಷೇತ್ರಕ್ಕೆ ಸೀಮಿತರಲ್ಲ. ಅರಸು ರಾಷ್ಟ್ರೀಯ ನಾಯಕ. ಮೈಸೂರು ವಿಭಜನೆ ಬಗ್ಗೆ ನನ್ನ ಪ್ರಬಲ ವಿರೋಧ ಇದೆ. ಇದೊಂದು ರಾಜಕೀಯ ಗಿಮಿಕ್ ಎಂದು ಕಿಡಿ‌ಕಾರಿದರು.

ಮೈಸೂರು- ಚಾಮರಾಜನಗರ ಪ್ರತ್ಯೇಕ ಆದಾಗ ವಿಶ್ವನಾಥ್ ಮಾತನಾಡಿಲ್ಲ. ಬೆಳಗಾವಿ ವಿಭಜನೆ ಬಗ್ಗೆ ಈ ಹಿಂದೆಯೇ ಪ್ರಸ್ತಾಪ ಇತ್ತು. ನನ್ನ ಪ್ರಕಾರ ಬೆಳಗಾವಿ ವಿಭಜನೆ ಆಗಬೇಕು‌. ಈ ಸಂಬಂಧ ಶಿಫಾರಸು ಮಾಡಲಾಗಿತ್ತು‌. ಆದರೆ, ಆ ಬಗ್ಗೆ ಒಮ್ಮತ ಮೂಡಿರಲಿಲ್ಲ ಎಂದು ತಿಳಿಸಿದರು.

ಇಂದು ಸಿದ್ದರಾಮಯ್ಯ ದೆಹಲಿಗೆ

ನಾನು ಇವತ್ತು ರಾತ್ರಿ ದೆಹಲಿಗೆ ಹೋಗುತ್ತಿದ್ದೇನೆ. ಪ್ರತಿಪಕ್ಷ ನಾಯಕ ಆದ ಮೇಲೆ ಹೋಗಿರಲಿಲ್ಲ. ಹೀಗಾಗಿ ಹೈ ಕಮಾಂಡ್ ನಾಯಕರನ್ನ ಭೇಟಿಯಾಗಿ ಕೃತಜ್ಞತೆ ಸಲ್ಲಿಸಲಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.

Intro:Body:KN_BNG_04_SIDDARAMAYA_BYTE_SCRIPT_7201951

ಪ್ರತ್ಯೇಕ ಜಿಲ್ಲೆ ಬಗ್ಗೆ ನಮ್ಮನ್ನು ವಿಶ್ವಾಸಕ್ಕೆ ತೆಗದುಕೊಳ್ಳಲು ವಿಶ್ವನಾಥ್ ಯಾರು?: ಸಿದ್ದು ಗುದ್ದು

ಬೆಂಗಳೂರು: ಪ್ರತ್ಯೇಕ ಜಿಲ್ಲೆ ರಚನೆ ಸಂಬಂಧ ಎಚ್.ವಿಶ್ವನಾಥ್ ನಿರ್ಧಾರ ಕೈಗೊಳ್ಳಲು ಅವರು ಯಾರು ಎಂದು ಪ್ರತಿಪಕ್ಷ ‌ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮೈಸೂರು ವಿಭಜನೆ ಬಗ್ಗೆ ಮಾತನಾಡಲು ವಿಶ್ವನಾಥ್ ಯಾರು?. ಎಚ್.ವಿಶ್ವನಾಥ್ ನನಗಿಂತ ಮುಂಚಿನಿಂದ ರಾಜಕೀಯದಲ್ಲಿ ಇದ್ದಾರೆ. ಇಲ್ಲಿ ತನಕ ಅವರು ಪ್ರತ್ಯೇಕ ಜಿಲ್ಲೆ ಸಂಬಂಧ ಮಾತನಾಡಿಲ್ಲ. ಆ ಬಗ್ಗೆ ಪ್ರಯತ್ನವೂ ಮಾಡಿಲ್ಲ. ಈಗ ಅವರು ಏಕಾಏಕಿ ಪ್ರತ್ಯೇಕ ಜಿಲ್ಲೆ ಬಗ್ಗೆ ಮಾತನಾಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಲಾಭ ಬಿಟ್ಟು ಬೇರೆ ಏನು ಉದ್ದೇಶ‌ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಬೇಕು ಅಂದರೆ ಯಡಿಯೂರಪ್ಪ ಸಭೆ ಕರೆದು ಮಾತನಾಡಬೇಕು. ಎಚ್.ವಿಶ್ವನಾಥ್ ಅನರ್ಹ ಶಾಸಕರಗಿದ್ದಾರೆ. ಅವರು ಪ್ರತ್ಯೇಕ ಜಿಲ್ಲೆ ರಚನೆ ಸಂಬಂಧ‌ ನಿರ್ಧಾರ ಕೈಗೊಳ್ಳಲು ಆಗುತ್ತಾ?. ಆ ನಿರ್ಧಾರವನ್ನು ಸಿಎಂ ಯಡಿಯೂರಪ್ಪ ತೆಗೆದುಕೊಳ್ಳಬೇಕು. ಆ ಭಾಗದ ಎಲ್ಲ ಶಾಸಕರನ್ನು ಕರೆದು ಯಡಿಯೂರಪ್ಪ ಚರ್ಚೆ ನಡೆಸಬೇಕು. ನಮ್ಮನ್ನು ವಿಶ್ವಾಸಕ್ಕೆ ತೆಗದುಕೊಳ್ಳಲು ವಿಶ್ವನಾಥ್ ಯಾರು?. ದೇವರಾಜು ಅರಸು ಹುಣಸೂರು ಕ್ಷೇತ್ರಕ್ಕೆ ಸೀಮಿತರಲ್ಲ. ಅರಸು ರಾಷ್ಟ್ರೀಯ ನಾಯಕ. ಮೈಸೂರು ವಿಭಜನೆ ಬಗ್ಗೆ ನನ್ನ ಪ್ರಬಲ ವಿರೋಧ ಇದೆ. ಇದೊಂದು ರಾಜಕೀಯ ಗಿಮಿಕ್ ಎಂದು ಕಿಡಿ‌ಕಾರಿದರು.

ನನಗಿಂತ ಮುಂಚಿನಿಂದಲೂ ರಾಜಕಾರಣದಲ್ಲಿ ವಿಶ್ವನಾಥ್ ಇದ್ದಾರೆ. ಆಗ ಮೈಸೂರು- ಚಾಮರಾಜನಗರ ಪ್ರತ್ಯೇಕ ಆದಾಗ ಅವರು ಮಾತನಾಡಿಲ್ಲ. ಬೆಳಗಾವಿ ವಿಭಜನೆ ಬಗ್ಗೆ ಈ ಹಿಂದೆಯೇ ಪ್ರಸ್ತಾಪ ಇತ್ತು. ನನ್ನ ಪ್ರಕಾರ ಬೆಳಗಾವಿ ವಿಭಜನೆ ಆಗಬೇಕು‌. ಈ ಸಂಬಂಧ ಶಿಫಾರಸು ಮಾಡಲಾಗಿತ್ತು‌. ಆದರೆ ಆ ಬಗ್ಗೆ ಒಮ್ಮತ ಮೂಡಿರಲಿಲ್ಲ ಎಂದು ತಿಳಿಸಿದರು.

ಇಂದು ಸಿದ್ದರಾಮಯ್ಯ ದೆಹಲಿಗೆ:

ನಾನು ಇವತ್ತು ರಾತ್ರಿ ದೆಹಲಿಗೆ ಹೋಗುತ್ತಿದ್ದೇನೆ. ಪ್ರತಿಪಕ್ಷ ನಾಯಕ ಆದ ಮೇಲೆ ಹೋಗಿರಲಿಲ್ಲ. ಹೀಗಾಗಿ ಹೈ ಕಮಾಂಡ್ ರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಲಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.