ಬೆಂಗಳೂರು: ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ರಾಜ್ಯ ಸರ್ಕಾರದ ಕ್ರಮವನ್ನು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಸ್ವಾಗತಿಸಿದ್ದು, ಇದನ್ನ ಖಾಸಗಿ ಆಸ್ಪತ್ರೆಗಳು ದುರ್ಬಳಕೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
![Siddaramaiah reaction](https://etvbharatimages.akamaized.net/etvbharat/prod-images/kn-bng-07-siddu-corona-tweet-script-7208077_16062020182602_1606f_1592312162_1011.jpg)
ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ಹೊರ ಹಾಕಿರುವ ಅವರು, ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ ಈ ಅವಕಾಶವನ್ನು ಖಾಸಗಿ ಆಸ್ಪತ್ರೆಗಳು ದುರ್ಬಳಕೆ ಮಾಡಿಕೊಂಡು ರೋಗಿಗಳ ಸುಲಿಗೆ ಮಾಡದ ರೀತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿಗಾ ವಹಿಸಬೇಕು ಎಂದು ವಿವರಿಸಿದ್ದಾರೆ.
![Siddaramaiah reaction](https://etvbharatimages.akamaized.net/etvbharat/prod-images/kn-bng-07-siddu-corona-tweet-script-7208077_16062020182602_1606f_1592312162_468.jpg)
ಕರ್ನಾಟಕ ಆರೋಗ್ಯ ಸೇವಾ ಸಂಘಗಳ ಒಕ್ಕೂಟ, ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ದಿನದ ಚಿಕಿತ್ಸೆಗೆ ರೂ.15,000, ಆಮ್ಲಜನಕ ಪೂರೈಕೆ ಚಿಕಿತ್ಸೆಗೆ ರೂ.20,000, ವೆಂಟಿಲೇಟರ್ ಸೇವೆಗೆ 35,000 ರೂಪಾಯಿ ನಿಗದಿಪಡಿಸಿರುವ ಪ್ರಸ್ತಾವವನ್ನು ರಾಜ್ಯದ ಮುಖ್ಯಮಂತ್ರಿಗಳು ಒಪ್ಪಿಕೊಂಡರೆ ಜನರನ್ನು ಸಾವಿನ ದವಡೆಗೆ ನೂಕಿದಂತೆ ಎಂದು ಎಚ್ಚರಿಕೆ ನೀಡಿದ್ದಾರೆ.