ETV Bharat / state

ದುರುದ್ದೇಶದಿಂದ ಬಿಜೆಪಿ ಸರ್ಕಾರ ಎರಡು ಮಸೂದೆಗಳನ್ನು ತರಲು ಹೊರಟಿದೆ: ಸಿದ್ದರಾಮಯ್ಯ - ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಸಿದ್ದರಾಮಯ್ಯ ಆಕ್ರೋಶ

ಇಂದು ವಿಧಾನಸಭೆ ಕಲಾಪದಲ್ಲಿ ವಿಪಕ್ಷಗಳ ಗದ್ದಲದ ನಡುವೆ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ತಿದ್ದುಪಡಿ ಮಸೂದೆಗಳಿಗೆ ತಿದ್ದುಪಡಿ ಮಾಡಲಾಯಿತು. ಈ ಕುರಿತಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

Siddaramaiah
ಸಿದ್ದರಾಮಯ್ಯ
author img

By

Published : Sep 16, 2021, 10:46 PM IST

ಬೆಂಗಳೂರು: ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ತಿದ್ದುಪಡಿ ಮಸೂದೆಯನ್ನು ದುರುದ್ದೇಶದಿಂದ ತರುವುದಕ್ಕೆ ಬಿಜೆಪಿ ಸರ್ಕಾರ ಹೊರಟಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚುನಾವಣೆಯನ್ನು ಮುಂದೂಡಬೇಕೆಂಬ ಕಾರಣಕ್ಕೆ ದುರುದ್ದೇಶದಿಂದ ತಿದ್ದುಪಡಿ ತರುವುದಕ್ಕೆ ಹೊರಟಿದ್ದಾರೆ. ಬಿಜೆಪಿಯವರಿಗೆ ಚುನಾವಣೆ ಮಾಡುವುದಕ್ಕೆ ಇಷ್ಟವಿಲ್ಲ. ಅವರಿಗೆ ಸೋಲುವ ಭಯವಿದೆ ಎಂದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ

ಚುನಾವಣೆ ಬರುವ ಆರು ತಿಂಗಳ ಮೊದಲು ವಿಧೇಯಕ ತರಬೇಕಿತ್ತು. ಆದರೆ ಚುನಾವಣೆ ಮುಂದೂಡುವ ದುರುದ್ದೇಶದಿಂದ ಈ ವಿಧೇಯಕ ತರಲಾಗಿದೆ. ಎಲ್ಲೆಲ್ಲಿ ವಿರೋಧ ಪಕ್ಷದ ಅಭ್ಯರ್ಥಿಗಳು ಸ್ಟ್ರಾಂಗ್ ಇರುತ್ತಾರೋ ಅಲ್ಲಿ ಮೀಸಲಾತಿ ತರುತ್ತಾರೆ. ಐದು ವರ್ಷದೊಳಗೆ ಚುನಾವಣೆ ಮಾಡಬೇಕು ಅನ್ನೋದು ಮ್ಯಾಂಡೇಟರಿ. ಆದರೆ ಅದನ್ನು ಪಾಲಿಸದೆ ಚುನಾವಣೆ ಮುಂದೂಡಲು ಈ ವಿಧೇಯಕ ತರುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೆಲ್ಲ ನ್ಯಾಯಾಲಯ ಗಮನಿಸುತ್ತಿದೆ. ಸದ್ಯ ಸೆ.20 ರಂದು ಕೋರ್ಟ್​​​ನಲ್ಲಿ ಪರಿಶೀಲನೆ ಮಾಡ್ತಾರೆ. ನ್ಯಾಯಾಲಯ ಏನು ತೀರ್ಮಾನ ಮಾಡುತ್ತದೆ ಎಂಬುದನ್ನು ನೋಡೋಣ. ಬಳಿಕ ನಾವೂ ಕೋರ್ಟ್‌ಗೆ ಹೋಗುವುದರ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.

ಇದನ್ನೂ ಓದಿ: ನಾಲ್ಕನೇ ದಿನದ ಕಲಾಪ: ಹೆಚ್​​​ಡಿಕೆಯಿಂದ ಸಿದ್ದುಗೆ ಗುದ್ದು, ಸಿಂಧೂರಿ ವಿರುದ್ದ ಸಾರಾ ಕಿಡಿ, ವಿಧೇಯಕ ಗದ್ದಲವೇ ಹೈಲೈಟ್ಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.