ETV Bharat / state

ಕುಮಾರಸ್ವಾಮಿ ಲೂಸ್ ಟಾಕ್ ಕಡೆಗಣಿಸಲು ತೀರ್ಮಾನ: ಹೆಚ್​ಡಿಕೆ ಅಸ್ತ್ರಕ್ಕೆ ಕಾಂಗ್ರೆಸ್​ ಪ್ರತ್ಯಸ್ತ್ರ ತಂತ್ರ

ನಿನ್ನೆ ಮಾಜಿ ಸಿಎಂ ಕುಮಾರಸ್ವಾಮಿಯವರು ಕಾಂಗ್ರೆಸ್​ ಪಕ್ಷದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಕಾಂಗ್ರೆಸ್​ ನಾಯಕರು ಕೆಂಡಮಂಡಲವಾಗಿದ್ದಾರೆ. ಹೆಚ್​ಡಿಕೆ ಮುಂದಿನ ದಿನಗಳಲ್ಲಿ ಏನೇ ಮಾತನಾಡಿದರು ಅದನ್ನು ಕಡೆಗಣಿಸಬೇಕೆಂಬ ತೀರ್ಮಾನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಬಂದಿದ್ದಾರೆ.

ಸಿದ್ದರಾಮಯ್ಯ
Siddaramaiah
author img

By

Published : Dec 6, 2020, 2:53 PM IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮುಂದಿನ ದಿನಗಳಲ್ಲಿ ಏನೇ ಮಾತನಾಡಿದರು ಅದನ್ನು ಕಡೆಗಣಿಸಬೇಕೆಂಬ ತೀರ್ಮಾನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಬಂದಿದ್ದಾರೆ.

ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಸಭೆ ನಡೆಸಲಾಯಿತು. ಈ ವೇಳೆ ನಾಯಕರು ಇಂತದೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಕುಮಾರಸ್ವಾಮಿಯವರ ಲೂಸ್ ಟಾಕ್​​ಗಳಿಗೆ ನಾವು ಯಾವುದೇ ರೀತಿಯ ಬೆಲೆ ಕೊಡುವುದು ಬೇಡ. ಅವರನ್ನು ನಿರ್ಲಕ್ಷಿಸುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಕಾಂಗ್ರೆಸ್ ವಿರುದ್ಧದ ಕುಮಾರಸ್ವಾಮಿ ಹೇಳಿಕೆಗಳಿಗೆ ಬಹಳ ಮನ್ನಣೆ ಕೊಡೋದು ಬೇಡ. ಕುಮಾರಸ್ವಾಮಿ ಲೂಸ್ ಟಾಕ್ ಅಂತಲೇ ಪರಿಗಣಿಸೋಣ. ಹಿರಿಯ ನಾಯಕರು ಯಾರೂ ಕೂಡ ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯೆ ಕೊಡೋದು ಬೇಡ. ಕೇವಲ ಶಾಸಕರು ಮಾತ್ರ ಕುಮಾರಸ್ವಾಮಿಗೆ ಉತ್ತರ ಕೊಟ್ಟರೆ ಸಾಕು. ಇಲ್ಲದಿದ್ದರೆ ಕುಮಾರಸ್ವಾಮಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ. ಅದನ್ನೇ ಬಿಜೆಪಿ ಕೂಡ ಲಾಭ ಮಾಡಿಕೊಳ್ಳಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಇದನ್ನೂ ಓದಿ :ನಾಳೆಯಿಂದ ಅಧಿವೇಶನ: ಸಿದ್ದರಾಮಯ್ಯ ನಿವಾಸದಲ್ಲಿ ಉಭಯ ಸದನಗಳ ಕಾಂಗ್ರೆಸ್​ ನಾಯಕರ ಸಭೆ

ಪರಿಷತ್​​ನಲ್ಲಿ ಜೆಡಿಎಸ್ ನಮಗೆ ಕೈ ಕೊಡುವುದು ಪಕ್ಕಾ. ಆದರೆ ಜೆಡಿಎಸ್ ಮೋಸ ಮಾಡಿದೆ ಎಂಬುದನ್ನೇ ನಾವು ಪ್ರಚಾರ ಮಾಡಿದರೆ ಸಾಕು. ಯಾವುದೇ ಕಾರಣಕ್ಕೂ ಮತ್ತೆ ಜೆಡಿಎಸ್ ಬೆಂಬಲ ಪಡೆಯುವ ಅಗತ್ಯವಿಲ್ಲ. ಪರಿಷತ್ ಸಭಾಪತಿ ಆಯ್ಕೆ ವಿಚಾರದಲ್ಲಿ ಸೋಲಾದರೂ ಚಿಂತೆಯಿಲ್ಲ, ಮುಂದೆ ಯಾವತ್ತೂ ಜೆಡಿಎಸ್ ಬೆಂಬಲ ಕೇಳುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಇದೆ. ಹಿರಿಯ ನಾಯಕರ ಸಭೆಯಲ್ಲಿ ಹೆಚ್​ಡಿಕೆ ಅಸ್ತ್ರಕ್ಕೆ ಕಡೆಗಣನೆಯ ಪ್ರತ್ಯಸ್ತ್ರ ನಿಮ್ಮ ತೀರ್ಮಾನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು .

ETV Bharat Logo

Copyright © 2024 Ushodaya Enterprises Pvt. Ltd., All Rights Reserved.