ETV Bharat / state

ಬಿಜೆಪಿ, ಅನರ್ಹ ಶಾಸಕರು ಇಬ್ಬರೂ ಸೇರಿ ನಾಟಕ ಮಾಡಿದ್ರು: ಸಿದ್ದರಾಮಯ್ಯ - ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಕೆಪಿಸಿಸಿ ಕಚೇರಿಯಲ್ಲಿ ಜವಾಹರ​ ಲಾಲ್​ ನೆಹರೂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನೆಹರೂ ಅವರ ಗುಣಗಾನ ಮಾಡಿ, ಅನರ್ಹ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ
author img

By

Published : Nov 14, 2019, 12:43 PM IST

ಬೆಂಗಳೂರು: ಅನರ್ಹರು, ಬಿಜೆಪಿಯವರು ಇಷ್ಟು ದಿನ ನಾಟಕ ಆಡಿದ್ರು. ಇವರೆಲ್ಲ ಅನರ್ಹರಾಗಿಯೇ ಚುನಾವಣೆಗೆ ಹೋಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ಕೆಪಿಸಿಸಿ ಕಚೇರಿಯಲ್ಲಿ ಜವಾಹರ​ ಲಾಲ್​ ನೆಹರೂ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಅನರ್ಹ ಎಂದು ಹಣೆಪಟ್ಟಿ ಇಟ್ಟುಕೊಂಡು ಮತ ಕೇಳಬೇಕು. ಅನರ್ಹರು ಅಂತ ಕಳಂಕ ಹೊತ್ತುಕೊಂಡು ಹೋಗಬೇಕು. ಕಳಂಕ ಹೊತ್ತವರನ್ನ ಜನ ಗೆಲ್ಲಿಸಲ್ಲ ಎಂದರು.

ಸ್ಥಳೀಯ ಸಂಸ್ಥೆಗಳ ಫಲಿತಾಂಶದಲ್ಲಿ ಕೂಡ ನಮಗೆ ಮೇಲುಗೈ ಸಿಗುತ್ತಿದೆ. ಸಂಜೆಯ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಇನ್ನೂ ಪೂರ್ಣ ಫಲಿತಾಂಶ ಬಂದಿಲ್ಲ. ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದರು.

ಮಕ್ಕಳೆಂದರೆ ಪ್ರೀತಿ:
ಜವಾಹರ ಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಮಕ್ಕಳೇ ಭವಿಷ್ಯದ ಪ್ರಜೆಗಳು, ರಾಷ್ಟ್ರದ ಸಂಪತ್ತು. ಮುಂದಿನ ದೇಶದ ಆಗು ಹೋಗುಗಳಲ್ಲಿ ಭಾಗವಹಿಸುವ ಜನ ಎಂದು ನಂಬಿದ್ದರು. ಅದಕ್ಕೆ ಅವರನ್ನ ಚಾಚಾ ನೆಹರೂ ಎಂದು ಕರೆಯಲಾಗುತ್ತಿತ್ತು. ಒಬ್ಬ ಅಪ್ರತಿಮ ನಾಯಕ, ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಡಿದ ಅನೇಕ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಇವರೂ ಒಬ್ಬರು. ಇವರಂತ ಹಲವರ ಪರಿಶ್ರಮದಿಂದ ನಾವು ಸ್ವಾತಂತ್ರ್ಯ ಗಳಿಸಿದ್ದೇವೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಹಾಗೂ ಸಂವಿಧಾನ ಬಂದಿದ್ದರಿಂದಲೇ ಮೋದಿ ಪ್ರಧಾನಮಂತ್ರಿಯಾಗಿದ್ದು, ನಾನು ಮುಖ್ಯಮಂತ್ರಿಯಾಗಿದ್ದು. ಅನೇಕ ಮಂದಿ ಎಂಎಲ್ಎ, ಮಂತ್ರಿ ಹಾಗೂ ಮುಖ್ಯಮಂತ್ರಿಗಳಾಗಿದ್ದಾರೆ. ನಮ್ಮ ಸಂವಿಧಾನ ಹಾಗೂ ಹೋರಾಟಗಾರರ ಫಲ ಇದು ಎಂದು ಹೇಳಬಯಸುತ್ತೇನೆ. ಎಲ್ಲ ಹೋರಾಟಗಾರರನ್ನು ಇದಕ್ಕಾಗಿ ನಾನು ಸ್ಮರಿಸಬೇಕಾಗುತ್ತದೆ ಹಾಗೂ ಗೌರವ ಸಲ್ಲಿಸಬೇಕಾಗುತ್ತದೆ ಎಂದರು.

jawaharlal nehru birth anniversary in Vidhana Soudha
ನೆಹರೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಸಿಎಂ

ಇತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜವಹರ ಲಾಲ್ ನೆಹರೂರವರ 130ನೇ ವರ್ಷದ ಜನ್ಮ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ನೆಹರೂ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತಿತರ ನಾಯಕರು ಹಾಜರಿದ್ದರು.

Intro:newsBody:ಬಿಜೆಪಿಯವರೂ ನಾಟಕ ಆಡಿದರು, ಅನರ್ಹ ಶಾಸಕರೂ ನಾಟಕ ಆಡಿದರು: ಸಿದ್ದರಾಮಯ್ಯ

ಬೆಂಗಳೂರು: ಅನರ್ಹರು, ಬಿಜೆಪಿ ಅವರು ಇಷ್ಟು ದಿನ ನಾಟಕ ಆಡಿದ್ರು. ಇವ್ರೆಲ್ಲ ಅನರ್ಹರಾಗಿ ಚುನಾವಣೆಗೆ ಹೋಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜವಾಹರ್ಲಾಲ್ ನೆಹರು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ಆಗುತ್ತಿದ್ದಾರೆ. ಅನರ್ಹ ಅಂತ ಹಣೆಪಟ್ಟಿ ಇಟ್ಟುಕೊಂಡು ಮತ ಕೇಳಬೇಕು. ಅನರ್ಹರು ಅಂತ ಕಳಂಕ ಹೊತ್ತಿಕೊಂಡು ಹೋಗಬೇಕು. ಕಳಂಕ ಹೊತ್ತವರನ್ನ ಜನ ಗೆಲ್ಲಿಸೊಲ್ಲ ಎಂದರು.
ಸ್ಥಳೀಯ ಸಂಸ್ಥೆಗಳ ಫಲಿತಾಂಶದಲ್ಲಿ ಕೂಡ ನಮಗೆ ಮೇಲುಗೈ ಸಿಗುತ್ತಿದೆ. ಸಂಜೆಯ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಇನ್ನು ಪೂರ್ಣ ಪಲಿತಾಂಶ ಬಂದಿಲ್ಲ ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದರು.
ಮಕ್ಕಳೆಂದರೆ ಪ್ರೀತಿ
ಜವಾಹರ್ ಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಮಕ್ಕಳೇ ಭವಿಷ್ಯದ ಪ್ರಜೆಗಳು ರಾಷ್ಟ್ರದ ಸಂಪತ್ತು ಮುಂದಿನ ದೇಶದ ಆಗುಹೋಗುಗಳಲ್ಲಿ ಭಾಗವಹಿಸುವ ಜನ ಎಂದು ನಂಬಿದ್ದರು. ಅದಕ್ಕೆ ಅವನ ಚಾಚಾ ನೆಹರು ಎಂದು ಕರೆಯಲಾಗುತ್ತಿತ್ತು. ಒಬ್ಬ ಅಪ್ರತಿಮ ನಾಯಕ, ಮಹಾತ್ಮ ಗಾಂಧಿ ಅವರ ಜೊತೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಹಾಗೂ ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಡಿದ ಅನೇಕ ಸ್ವತಂತ್ರ ಹೋರಾಟಗಾರರಲ್ಲಿ ಇವರು ಒಬ್ಬರು. ಇಂದು ಯುವರಂತ ಹಲವರ ಪರಿಶ್ರಮದಿಂದ ನಾವು ಸ್ವಾತಂತ್ರ್ಯವನ್ನು ಗಳಿಸಿದ್ದೇವೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರಿಂದ ಹಾಗೂ ಸಂವಿಧಾನ ಬಂದಿದ್ದರಿಂದಲೇ ಮೋದಿ ಪ್ರಧಾನಮಂತ್ರಿ ಯಾಗಿದ್ದು ನಾನು ಮುಖ್ಯಮಂತ್ರಿಯಾಗಿದ್ದು. ಅನೇಕ ಮಂದಿ ಎಂಎಲ್ಎ, ಮಂತ್ರಿ ಹಾಗೂ ಮುಖ್ಯಮಂತ್ರಿಗಳಾಗಿದ್ದಾರೆ. ನಮ್ಮ ಸಂವಿಧಾನ ಹಾಗೂ 15ರ ಹೋರಾಟಗಾರರ ಫಲ ಇದು ಎಂದು ಹೇಳಬಯಸುತ್ತೇನೆ. ಎಲ್ಲ ಹೋರಾಟಗಾರರನ್ನು ಇದಕ್ಕಾಗಿ ನಾನು ಸ್ಮರಿಸಬೇಕಾಗುತ್ತದೆ ಹಾಗೂ ಗೌರವ ಸಲ್ಲಿಸಬೇಕಾಗುತ್ತದೆ. ಅವರ ಆದರ್ಶ ಪಾಲನೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗುತ್ತದೆ. ನೆಹರು ಅವರು ಸ್ವಾತಂತ್ರ ಬಂದ ನಂತರ ಮೊದಲ ಪ್ರಧಾನಿಯಾಗಿದ್ದವರು. ಸುದೀರ್ಘ 17 ವರ್ಷಗಳ ಕಾಲ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ್ದರು. ಪ್ರಜಾಪ್ರಭುತ್ವ ಇಂದಿನವರೆಗೂ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದಾರೆ ಅದಕ್ಕೆ ಭದ್ರ ಬುನಾದಿ ಹಾಕಿದವರು ನೆಹರು ಎಂದು ಹೇಳಿದರು.
ವಿಜ್ಞಾನ-ತಂತ್ರಜ್ಞಾನ ಕೈಗಾರಿಕೆ ಕೃಷಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಕ್ಷೇತ್ರಗಳ ಬೆಳವಣಿಗೆಗೆ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರುವಲ್ಲಿ ನೆಹರು ಪ್ರಮುಖ ಪಾತ್ರವಹಿಸಿದ್ದರು. ಇಂದು ಬಿಜೆಪಿ ಸೇರಿದಂತೆ ಪ್ರತಿಯೊಂದು ರಾಜಕೀಯ ಪಕ್ಷಗಳು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದರೆ ಅದಕ್ಕೆ ಮಹಾತ್ಮ ಗಾಂಧಿ ಹಾಗೂ ನೆಹರು ಅವರಂಥ ವ್ಯಕ್ತಿಗಳೇ ಕಾರಣ. ದೇಶದಲ್ಲಿ ಒಂದು ವ್ಯವಸ್ಥಿತ ಬೆಳವಣಿಗೆ ಆಗಬೇಕು ಎಂಬ ನಿಟ್ಟಿನಲ್ಲಿ ಅನೇಕ ಕೊಡುಗೆಗಳನ್ನು ನೆಹರು ದೇಶಕ್ಕೆ ಕೊಟ್ಟಿದ್ದಾರೆ. ಪಂಚವಾರ್ಷಿಕ ಯೋಜನೆ, ಯೋಜನಾ ಆಯೋಗ ರಚನೆ ಆಗಿದ್ದರೆ ಹಾಗೂ ಕೈಗಾರಿಕಾ ಕ್ಷೇತ್ರ ಬೆಳವಣಿಗೆ ಆಗಿದ್ದರೆ, ದೇಶದಲ್ಲಿ ಸಂಯುಕ್ತ ನೀತಿಯನ್ನು ರೂಪಿಸಿ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಜಾರಿಗೆ ತಂದವರು ಜವಾಹರ್ ಲಾಲ್ ನೆಹರು ಎಂದು ಬಣ್ಣಿಸಿದರು.

Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.