ETV Bharat / state

'ದೇವೇಗೌಡರ ಮೊಮ್ಮಕ್ಕಳನ್ನು ಗೆಲ್ಲಿಸಿಕೊಂಡು ಬರುವ ತಾಕತ್ತು ಸಿದ್ದ್ರಾಮಣ್ಣಗೆ ಇದೆ’

author img

By

Published : Apr 2, 2019, 6:19 PM IST

ದೇವೇಗೌಡರು ಹಾಗೂ ಅವರ ಮೊಮ್ಮಕ್ಕಳನ್ನ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್​ ಅಧ್ಯಕ್ಷ ಮುನೇಗೌಡ ಬಣ್ಣಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್​ ಅಧ್ಯಕ್ಷ ಮುನೇಗೌಡ

ಬೆಂಗಳೂರು: ಜೆಡಿಎಸ್​ ವರಿಷ್ಠ ದೇವೇಗೌಡರ ಮೊಮ್ಮಕ್ಕಳಾದ ಪ್ರಜ್ವಲ್ ಮತ್ತು ನಿಖಿಲ್​ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ, ನಮ್ಮ ಟಗರು ಸಿದ್ದ್ರಾಮಣ್ಣನವರ ಮೇಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್​ ಅಧ್ಯಕ್ಷ ಮುನೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಭ್ಯರ್ಥಿಯ ಆಯ್ಕೆಯಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ‌ ಮೈತ್ರಿ ಕಾರ್ಯಕರ್ತರಲ್ಲಿ ಅಸಮಾಧಾನ ಹೆಚ್ಚಾಗಿದ್ದು ಪರಿಣಾಮ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿಗೆ ಇದೊಂದು ನುಂಗಲಾರದ ತುತ್ತಾಗಿದೆ ಎನ್ನಲಾಗುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಮೊಯ್ಲಿ ನೇತೃತ್ವದ‌ಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಮುನೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಗರು ಸಿದ್ದ್ರಾಮಣ್ಣ ಎಂದು ಕರೆಯುವ ಮೂಲಕ ಜೆಡಿಎಸ್​ ಅಭ್ಯರ್ಥಿಗಳ ಗೆಲುವಿನ ಸಾರಥಿ ಎಂದು ಬಣ್ಣಿಸಿದರು. ಅಲ್ಲದೆ ಕಾರ್ಯಕರ್ತರಲ್ಲಿದ್ದ ಅಸಮಾಧಾನ ಶಮನಗೊಳಿಸಲು ಪ್ರಯತ್ನಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್​ ಅಧ್ಯಕ್ಷ ಮುನೇಗೌಡ

ದೇವೇಗೌಡರು, ಪ್ರಜ್ವಲ್, ನಿಖಿಲ್ ಜೆಡಿಎಸ್​​ ಪಕ್ಷದ ಮೂರು ಕಣ್ಣು:

ಈಶ್ವರನಿಗೆ ಮೂರು ಕಣ್ಣುಗಳಿದ್ದಂತೆ ಮಾಜಿ ಪ್ರಧಾನಿ ದೇವೇಗೌಡರು, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾಸ್ವಾಮಿ ಜೆಡಿಎಸ್​​ ಪಕ್ಷದ ಮೂರು ಕಣ್ಣು‌ಗಳು. ಕರ್ನಾಟಕ‌ದಲ್ಲಿ ಟಗರು ಅಂತಾನೇ ಪ್ರಸಿದ್ಧಿ ಪಡೆದಿರುವ ನಮ್ಮ ಸಿದ್ದ್ರಾಮಣ್ಣನವರು ಈ ಮೂವರನ್ನು ಗೆಲ್ಲಿಸಿಕೊಂಡು ಬರಲು ಸಾರಥಿ‌ಯಂತೆ ನಿಂತಿದ್ದಾರೆ ಎಂದು ಮುನೇಗೌಡ ಹೇಳಿದರು.

Intro:ಜೆಡಿಎಸ್ ವರಿಷ್ಠ ದೇವೇಗೌಡರು ಅವರ ಮೊಮ್ಮಕ್ಕಳಾದ ಪ್ರಜ್ವಲ್ ಮತ್ತು ನಿಖಿಲ್ ಮೂವರನ್ನು ಗೆಲ್ಲಿಸ್ಕೊಂಡು ಬರುವ ಸಾರಥಿ ನಮ್ಮ ಟಗರು ಸಿದ್ದ್ರಾಮಣ್ಣನವರಿಗಿದೆಯೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನೇಗೌಡ ವಿಶ್ವಾಸ ವ್ಯಕ್ತ‌ಪಡಿಸಿದ್ದಾರೆ.

Body:ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ‌ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ‌ಗಳ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್ ನಾ ವೀರಪ್ಪ ಮೊಯ್ಲಿ. ಸ್ಥಳೀಯ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡ‌ರು ಪರಸ್ಪರ ಒಂದಾಗದೇ ತಮ್ಮ ಅಸಮಾಧಾನ‌ವನ್ನು ವ್ಯಕ್ತಪಡಿಸಿದ್ದಾರು. ಸ್ಥಳೀಯ ಮುಖಂಡರ ಪರಸ್ಪರ ಕಿತ್ತಾಟ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ‌ಗೆ ದೊಡ್ಡ ತಲೆನೋವಾಗಿ‌ತ್ತು. ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡ‌ರು ಒಂದಾಗಿ ಕೈ ಜೋಡಿಸಿದ್ದಾರೆ. ಮೊಯ್ಲಿ ನೇತೃತ್ವದ‌ಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನೇಗೌಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಟಗರು ಸಿದ್ದ್ರಾಮಣ್ಣರೆಂದು ಕರೆಯುವ ಮೂಲಕ ಜೆಡಿಎಸ್ ಅಭ್ಯರ್ಥಿ ಗಳ ಗೆಲುವಿನ ಸಾರಥಿ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕನ್ನಡ ಜಾಗೃತಿ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡ‌ರು ಏಕತೆ‌ಯ ಮಂತ್ರ ಜಪಿಸಿದರು. ಇದೇ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನೆಗೌಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಗುಣಗಾನ ಮಾಡಿದರು. ಮುಖ್ಯಮಂತ್ರಿ ಕುಮಾರಸ್ವಾಮಿ‌ಯವರ ಕಾರ್ಯವೈಖರಿ‌ಯ ಬಗ್ಗೆ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ‌ದ ಹಿಂದಿನ ಯೋಜನೆ‌ಗಳನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆ ರಾಜ್ಯದ ಅನ್ನದಾತನ ಮೇಲಿದ್ದ 40 ಸಾವಿನ ಕೋಟಿ ಸಾಲ ಮನ್ನಾ ಮಾಡಿರುವ ಕುಮಾರಸ್ವಾಮಿ‌ಯವರ ಕಾರ್ಯವೈಖರಿಯ ಬಗ್ಗೆ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈಶ್ವರನಿಗೆ ಮೂರು ಕಣ್ಣುಗಳಿದಂತೆ ಜೆಡಿಎಸ್ ಪಕ್ಷದ ಮೂರು ಕಣ್ಣು‌ಗಳು ದೇವೇಗೌಡರು,ಪ್ರಜ್ವಲ್, ನಿಖಿಲ್. ಈ ಮೂವರನ್ನು ಗೆಲ್ಲ ಬೇಕಾದ್ದಾರೆ ಸಾರಥಿ‌ಯಂತೆ ನಿಂತೂ ಕೆಲಸ ಮಾಡ ಬೇಕಿರೋದು ಸಿದ್ದರಾಮಯ್ಯ. ಕರ್ನಾಟಕ‌ದಲ್ಲಿ ಟಗರು ಅಂತಾನೇ ಪ್ರಸಿದ್ಧಿ ಪಡೆದಿರೋದು ನಮ್ಮ ಟಗರು ಸಿದ್ದ್ರಾಮಣ್ಣ. ಈ ಮೂವರ ಗೆಲ್ಲುವಲ್ಲಿ ಸಿದ್ದರಾಮಯ್ಯ ತಮ್ಮ ಖದರ್ ತೋರಿಸ ಬೇಕಿದೆ. ದೇವೇಗೌಡರು,ಪ್ರಜ್ವಲ್, ಮತ್ತು ನಿಖಿಲ್ ರನ್ನು ಸಿದ್ದರಾಮಯ್ಯ ಗೆಲ್ಲಿಸಿದ್ದೆ ಆದ್ದಲ್ಲಿ ಇನ್ನುಳಿದ ಇತರೆ ಕ್ಷೇತ್ರ‌ಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಬಹಳ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ. ನಾವು ಗೆದ್ದಾರೆ ಅದು ಸಿದ್ದರಾಮಯ್ಯರವರ ಗೆಲುವು ಸೋತ್ತಾರೇ ಸಿದ್ದರಾಮಯ್ಯ‌ರವರ ಸೋಲೆಂದು ಹೇಳುವ ಮೂಲಕ ದೇವೇಗೌಡರ ಕುಟುಂಬಕ್ಕೆ ನಿಷ್ಠೆ‌ಯನ್ನು ತೋರಿಸಿದರು ಮುನೇಗೌಡ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.