ETV Bharat / state

ಕಲಾಪಕ್ಕೆ ಆಡಳಿತ ಪಕ್ಷದವರ ಗೈರು: ಆಕ್ಷೇಪ ವ್ಯಕ್ತಪಡಿಸಿ ಸಿದ್ದರಾಮಯ್ಯ ತರಾಟೆ - ಬಿಜೆಪಿ ಮಂತ್ರಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಇಂದು ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಬೆರಳಣಿಕೆಯಷ್ಟು ಶಾಸಕರಷ್ಟೇ ಹಾಜರಿದ್ದರು. ಸಚಿವರ ಹಾಜರಿ ಕೂಡ ವಿರಳವಾಗಿತ್ತು. ಈ ಹಿನ್ನೆಲೆ ಸಿದ್ದರಾಮಯ್ಯ ಬಿಜೆಪಿ ಮಂತ್ರಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.

Siddaramaiah has raised objections against BJP ministers
ಕಲಾಪಕ್ಕೆ ಆಡಳಿತ ಪಕ್ಷದವರ ಗೈರು
author img

By

Published : Feb 19, 2020, 7:47 PM IST

ಬೆಂಗಳೂರು: ಶಾಸಕರು ಹಾಗೂ ಸಚಿವರ ಗೈರು ಹಾಜರಿ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಇಂದು ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಬೆರಳಣಿಕೆಯಷ್ಟು ಶಾಸಕರಷ್ಟೇ ಹಾಜರಿದ್ದರು. ಸಚಿವರ ಹಾಜರಿ ಕೂಡ ವಿರಳವಾಗಿತ್ತು. ಈ ಹಿನ್ನೆಲೆ ಸಿದ್ದರಾಮಯ್ಯರ ಆಕ್ಷೇಪಕ್ಕೆ ಕಾಂಗ್ರೆಸ್​ನ ಪಿ.ಟಿ.ಪರಮೇಶ್ವರ್ ನಾಯ್ಕ​ ಮತ್ತು ಜಮೀರ್ ಅಹಮದ್​ ಖಾನ್​ ಕೂಡ ಬೆಂಬಲ ವ್ಯಕ್ತಪಡಿಸಿ ಬಿಜೆಪಿ ಶಾಸಕರ ವಿರುದ್ಧ ಹರಿಹಾಯ್ದರು.

ಕಲಾಪಕ್ಕೆ ಆಡಳಿತ ಪಕ್ಷದವರ ಗೈರು

ಈ ಮಧ್ಯೆ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ರಾಮದಾಸ್​ ಮತ್ತು ಎಂ.ಸಿ.ಮನಗೊಳಿ ಕಲಾಪಕ್ಕೆ ಗೈರು ಹಾಜರಾಗಲು ಅನುಮತಿ ಕೇಳಿರುವ ಪತ್ರಗಳನ್ನು ಸದನದ ಗಮನಕ್ಕೆ ತಂದರು. ನಂತರ ಮಾತು ಆರಂಭಿಸಿದ ಸಿದ್ದರಾಮಯ್ಯ, ಮಂತ್ರಿಗಳ ಗೈರು ಹಾಜರಿ ಕಂಡು ಕೆಂಡಾಮಂಡಲರಾದರು. ಇದು ಎಲ್ಲಾ ಕಾಲದಲ್ಲೂ ಇರುವ ರೋಗ. ಆದರೆ, ಬಿಜೆಪಿ ಆಡಳಿತದಲ್ಲಿ ಇದು ಜಾಸ್ತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.