ETV Bharat / state

ಇಂಡೋ-ಚೀನಾ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಸಿದ್ದರಾಮಯ್ಯ ಸಂತಾಪ - Indian soldiers

ಇಡೀ ರಾಷ್ಟ್ರವು ಹುತಾತ್ಮರ ಕುಟುಂಬಗಳೊಂದಿಗೆ ಇರುತ್ತದೆ ಎಂದು ಹೇಳಿರುವ ಸಿದ್ದರಾಮಯ್ಯ, ದೇಶದ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿರುವ ಸೈನಿಕರ ಕೊಡುಗೆ ಸ್ಮರಿಸಿದ್ದಾರೆ.

Siddaramaiah condolences to martyred Indian soldiers on the China-India border
ಚೀನಾ-ಭಾರತ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಸಿದ್ದರಾಮಯ್ಯ ಸಂತಾಪ
author img

By

Published : Jun 16, 2020, 5:40 PM IST

ಬೆಂಗಳೂರು : ಭಾರತ-ಚೀನಾ ಗಡಿಯಲ್ಲಿ ಹುತಾತ್ಮರಾದ ದೇಶದ ಸೈನಿಕರಿಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಲಡಾಖ್​ನಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ನನ್ನ ಪ್ರಾಮಾಣಿಕ ಗೌರವ ವಂದನೆ ಸಲ್ಲಿಸುತ್ತೇನೆ. ಅವರು ನಮ್ಮನ್ನು ರಕ್ಷಿಸಲು ಧೈರ್ಯದಿಂದ ಹೋರಾಡಿದರು. ಅಲ್ಲದೇ ಅವರ ತ್ಯಾಗಕ್ಕೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ.

ಇಡೀ ರಾಷ್ಟ್ರವು ಹುತಾತ್ಮರ ಕುಟುಂಬಗಳೊಂದಿಗೆ ಇರುತ್ತದೆ ಎಂದು ಹೇಳಿರುವ ಸಿದ್ದರಾಮಯ್ಯ, ದೇಶದ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿರುವ ಸೈನಿಕರ ಕೊಡುಗೆಯನ್ನು ಸ್ಮರಿಸಿದ್ದಾರೆ. ಚೀನಾ ಭಾರತದ ಕೆಲಭಾಗವನ್ನು ಆಕ್ರಮಿಸಿಕೊಂಡಿದ್ದು, ಈ ಸ್ಥಳವನ್ನು ತೆರವು ಮಾಡುವಂತೆ ಭಾರತೀಯ ಸೇನೆ ಹೋರಾಟಕ್ಕೆ ಇಳಿದಿತ್ತು. ಈ ಸಂದರ್ಭ ಭಾರತೀಯ ಸೇನೆಯ ಮೂವರು ಯೋಧರು ಸಾವನ್ನಪ್ಪಿದ್ದಾರೆ.

ಇಡೀ ದೇಶವೇ ಹುತಾತ್ಮ ಸೈನಿಕರಿಗೆ ವಂದನೆ ಸಲ್ಲಿಸಿದೆ. ರಾಜ್ಯ ರಾಜಕೀಯ ನಾಯಕರು ಕೂಡ ಹುತಾತ್ಮ ಯೋಧರ ಕೊಡುಗೆ ಸ್ಮರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.