ETV Bharat / state

ವಿಧಾನಮಂಡಲ ಜಂಟಿ ಅಧಿವೇಶನಕ್ಕೆ ಸಜ್ಜಾಗುವಂತೆ ಶಾಸಕರಿಗೆ ಸಿದ್ದರಾಮಯ್ಯ ಕರೆ - ಬೆಂಗಳೂರು ಸುದ್ದಿ

ಸರ್ಕಾರದ ವಿರುದ್ಧ ಅತ್ಯಂತ ವ್ಯವಸ್ಥಿತವಾಗಿ ಸಿದ್ಧತೆ ನಡೆಸಿಕೊಂಡು ಮುಗಿಬೀಳಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಇದೇ ವಿಚಾರವನ್ನು ಇಂದು ಶಾಸಕರು, ಪರಿಷತ್ ಸದಸ್ಯರ ಜೊತೆ ಸಿದ್ದರಾಮಯ್ಯ ಚರ್ಚಿಸಿದರು.

ಶಾಸಕರಿಗೆ ಆನ್​ಲೈನ್ ಮೂಲಕ ಸಿದ್ದರಾಮಯ್ಯ ಕರೆ
ಶಾಸಕರಿಗೆ ಆನ್​ಲೈನ್ ಮೂಲಕ ಸಿದ್ದರಾಮಯ್ಯ ಕರೆ
author img

By

Published : Sep 7, 2020, 1:37 PM IST

ಬೆಂಗಳೂರು: ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್​ ಶಾಸಕರೊಂದಿಗೆ ಆನ್​ಲೈನ್ ಮೂಲಕ ಸಂವಾದ ನಡೆಸಿದರು.

ಸೆಪ್ಟಂಬರ್ 21ರಿಂದ ವಿಧಾನಮಂಡಲದ ಮಳೆಗಾಲದ ಜಂಟಿ ಅಧಿವೇಶನ ಹಿನ್ನೆಲೆ ಜವಾಬ್ದಾರಿಯುತ ಪ್ರತಿಪಕ್ಷವಾಗಿ ತಾವು ನಡೆದುಕೊಳ್ಳಬೇಕಾದ ರೀತಿ ನೀತಿಯ ಕುರಿತು ಈ ಸಂದರ್ಭ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಶಾಸಕರಿಗೆ ವಿವರಿಸಿದರು.

ಸರ್ಕಾರದ ವಿರುದ್ಧ ಅತ್ಯಂತ ವ್ಯವಸ್ಥಿತವಾಗಿ ಸಿದ್ಧತೆ ನಡೆಸಿಕೊಂಡು ಮುಗಿಬೀಳಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಇದೇ ವಿಚಾರವನ್ನು ಇಂದು ಶಾಸಕರು, ಪರಿಷತ್ ಸದಸ್ಯರ ಜೊತೆ ಸಿದ್ದರಾಮಯ್ಯ ಚರ್ಚಿಸಿದರು.

ಶಾಸಕರಿಗೆ ಆನ್​ಲೈನ್ ಮೂಲಕ ಸಿದ್ದರಾಮಯ್ಯ ಕರೆ

ಸದನದಲ್ಲಿ ಧ್ವನಿ ಎತ್ತಬೇಕಿರುವ ವಿಷಯಗಳ ಬಗ್ಗೆ ಚರ್ಚೆ, ಸರ್ಕಾರದ ವಿವಾದಾತ್ಮಕ ಕಾಯ್ದೆಗಳ ಜಾರಿ ವಿರುದ್ಧ ಅತ್ಯಂತ ವಸ್ತುನಿಷ್ಠವಾದ ನಡೆಸುವ ಬಗ್ಗೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದು, ಕಾರ್ಮಿಕ ತಿದ್ದುಪಡಿ ಕಾಯ್ದೆ, ಡಿಜೆಹಳ್ಳಿ ಗಲಭೆ ಪ್ರಕರಣ, ಬೆಂಗಳೂರಿನಲ್ಲಿ ನಡೆಯೆತ್ತಿರುವ ಡ್ರಗ್ಸ್ ಮಾಫಿಯಾ ಕುರಿತು ಚರ್ಚೆ ನಡೆಸಿರುವ ಸಿದ್ದರಾಮಯ್ಯ ಇದನ್ನು ಸದನದಲ್ಲಿ ಪ್ರಸ್ತಾಪಿಸುವ ಹಾಗೂ ಚರ್ಚಿಸುವ ಕುರಿತು ಶಾಸಕರ ಜೊತೆ ಸಮಾಲೋಚನೆ ನಡೆಸಿದರು. ಎಲ್ಲರೂ ಪಕ್ಷದ ನಿಲುವಿಗೆ ಬದ್ಧರಾಗಿ ಸಹಕರಿಸಬೇಕು ಎಂದು ಸೂಚನೆ ನೀಡಿದರು.

ಈ ಎಲ್ಲಾ ವಿಚಾರಗಳನ್ನ ಪ್ರಸ್ತಾಪಿಸಿ ಸರ್ಕಾರಕ್ಕೆ ಮುಜುಗರ ಸೃಷ್ಟಿಸಲು ಪಕ್ಷ ಸೂಕ್ತ ತಯಾರಿ ನಡೆಸಿಕೊಳ್ಳಬೇಕು. ಈ ವಿಚಾರದಲ್ಲಿ ವಿಷಯ ತಜ್ಞತೆ ಇರುವ ಶಾಸಕರಿಗೆ ಮಾತನಾಡುವ ಅವಕಾಶ ಕೋರಲಾಗುವುದು. ಆ ಸಂದರ್ಭ ಶಾಸಕರು ತಮ್ಮ ಜವಾಬ್ದಾರಿ ಅರಿತು ಪರಿಣಾಮಕಾರಿಯಾಗಿ ಮಾತನಾಡಬೇಕು. ಡ್ರಗ್ಸ್ ಮಾಫಿಯಾ ವಿಚಾರದ ಬಗ್ಗೆ ಹೆಚ್ಚು ಗಮನ ಹರಿಸಿ. ಹೆಚ್ಚು ಜಾಗರೂಕರಾಗಿರುವಂತೆ ಶಾಸಕರಿಗೆ ಸಲಹೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.