ಬೆಂಗಳೂರು: ನಗರದಲ್ಲಿ ಇಂದು ನಡೆದ ಮಾಜಿ ಸಚಿವ ಹೆಚ್.ವೈ.ಮೇಟಿ ಅವರ ಮೊಮ್ಮಗ ಅಚ್ಯುತರಾವ್ ಮೇಟಿ ಮತ್ತು ರೇವತಿ ಬೆಳ್ಳೆ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಗವಹಿಸಿ ಶುಭ ಹಾರೈಸಿದರು. ಬೆಂಗಳೂರಿನಲ್ಲಿ ನಡೆದ ಆರತಕ್ಷತೆ ಸಮಾರಂಭದಲ್ಲಿ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಆರ್. ಶಂಕರ್ ಕೂಡ ಭಾಗವಹಿಸಿದ್ದರು.
ಇದನ್ನೂ ಓದಿ: ಸಿಪಿ ಯೋಗೇಶ್ವರ್ಗೆ ಮಂತ್ರಿಗಿರಿ ನೀಡುವಂತೆ ವರಿಷ್ಠರಲ್ಲಿ ಚರ್ಚಿಸಿದ್ದೇನೆ: ರಮೇಶ್ ಜಾರಕಿಹೊಳಿ
ಈ ಭೇಟಿ ಸಂದರ್ಭ ಸಿದ್ದರಾಮಯ್ಯ ಹಾಗೂ ರಮೇಶ್ ಜಾರಕಿಹೊಳಿ ಮತ್ತು ಆರ್ ಶಂಕರ್ ಪರಸ್ಪರ ಸುದೀರ್ಘ ಕಾಲ ಸಮಾಲೋಚನೆ ನಡೆಸಿದರು. ಕಾಂಗ್ರೆಸ್ ಪಕ್ಷವನ್ನು ತೊರೆದು ಸರ್ಕಾರದ ಪತನಕ್ಕೆ ಕಾರಣರಾದ ರಮೇಶ್ ಜಾರಕಿಹೊಳಿ ಹಾಗೂ ಸಚಿವರಾಗಿದ್ದು ರಾಜೀನಾಮೆ ಸಲ್ಲಿಸಿದ್ದ ಪಕ್ಷೇತರ ಸದಸ್ಯ ಆರ್ ಶಂಕರ್ ಇದೇ ಮೊದಲಬಾರಿಗೆ ಸಿದ್ದರಾಮಯ್ಯ ಜೊತೆ ಆಪ್ತವಾಗಿ ಸುದೀರ್ಘ ಸಮಯ ಮಾತುಕತೆ ನಡೆಸಿದರು.
ಇದನ್ನೂ ಓದಿ: ಬಿಜೆಪಿಯ ಹಣ ಬಲ ನಮ್ಮನ್ನು ಸೋಲಿಸಿತು; ಶಿರಾ ಸೋಲಿಗೆ ಅಸಲಿ ಕಾರಣ ಕೊಟ್ಟ ಸಿದ್ದರಾಮಯ್ಯ
ಮೈತ್ರಿ ಸರ್ಕಾರ ಪತನದ ನಂತರ ಎಲ್ಲಿಯೂ ಉಭಯ ನಾಯಕರ ಭೇಟಿ ಆಗಿರಲಿಲ್ಲ. ಇಂದು ಆರತಕ್ಷತೆ ಸಮಾರಂಭದಲ್ಲಿ ಆಕಸ್ಮಿಕವಾಗಿ ಭೇಟಿಯಾದ ನಾಯಕರು ರಾಜಕೀಯೇತರ ವಿಚಾರವಾಗಿ ಚರ್ಚೆ ನಡೆಸಿದರು. ಅಚ್ಯುತರಾವ್ ಮೇಟಿ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗಂಗೂಬಾಯಿ ಮೇಟಿ ಅವರ ಪುತ್ರ.