ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್ ಕುರಿತಾದ ನಿರೀಕ್ಷೆಗಳೆಲ್ಲ ಹುಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಜೆಟ್ನಿಂದ ಜನರ ನಿರೀಕ್ಷೆಗಳು ಬುಡಮೇಲಾಗಿವೆ. ಕಾರ್ಮಿಕರು, ಹಿಂದುಳಿದ ವರ್ಗದವರಿಗೆ ಉಪಯೋಗವಾಗುವಂತ ಬಜೆಟ್ ಮಂಡಿಸಿಲ್ಲ. ಈ ಬಜೆಟ್ನಲ್ಲಿ ನ್ಯೂನ್ಯತೆಗಳ ವಿರುದ್ಧ ನಮ್ಮ ಸಂಸದರು ಹೋರಾಟ ಮಾಡಬೇಕು. ಬಜೆಟ್ ಬರೀ ಬಂಡವಾಳಶಾಹಿಗಳ ಪರವಾಗಿದೆ. ಹಿಂದಿನಿಂದಲೂ ಬಿಜೆಪಿಯವರು ಕರ್ನಾಟಕಕ್ಕೆ ಅನ್ಯಾಯ ಮಾಡಿಕೊಂಡೇ ಬಂದಿದ್ದಾರೆ. ರಾಜ್ಯಕ್ಕೆ ನೀಡಬೇಕಾದ ಅನುದಾನದ ವಿಚಾರದಲ್ಲೂ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರದ ಬಜೆಟ್ ಬಡವರ ವಿರೋಧಿ ಬಜೆಟ್, ರೈತರ, ಕಾರ್ಮಿಕರ ವಿರೋಧಿ ಬಜೆಟ್. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಖಂಡ್ರೆ ಹೇಳಿದ್ದಾರೆ.