ETV Bharat / state

ವಯಸ್ಸಿನ ಬಗ್ಗೆ ಪರಸ್ಪರ ಕಾಲೆಳೆದುಕೊಂಡ ಸಿದ್ದರಾಮಯ್ಯ- ಈಶ್ವರಪ್ಪ - ಸಿದ್ದರಾಮಯ್ಯ- ಈಶ್ವರಪ್ಪ ನಡುವೆ ಯವಸ್ಸಿನ ಬಗ್ಗೆ ಚರ್ಚೆ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಿಯಮ 69 ರ ಅಡಿ ಚರ್ಚೆ ಆರಂಭಿಸಿದಾಗ, ಬಿಜೆಪಿ ಸದಸ್ಯರು ‘ಏನ್ ಕ್ಲೀನ್ ಶೇವ್ ಮಾಡಿಕೊಂಡು ಬಂದಿದ್ದೀರಿ’ ಎಂದು ಕಾಲೆಳೆದರು. ಇದಕ್ಕೆ ಸಿದ್ದರಾಮಯ್ಯ, ನನಗೆ 75 ವರ್ಷ ವಯಸ್ಸಾಗಿದೆ. ಆ ರೀತಿ ಕಾಣಬಾರದು ಎಂದು ಈ ರೀತಿ ಬಂದಿದ್ದೇನೆ ಎಂದು ನಗುತ್ತಾ ಉತ್ತರಿಸಿದರು.

ವಯಸ್ಸಿನ ಬಗ್ಗೆ ಪರಸ್ಪರ ಕಾಲೆಳೆದುಕೊಂಡ ಸಿದ್ದರಾಮಯ್ಯ- ಈಶ್ವರಪ್ಪ

author img

By

Published : Mar 24, 2022, 10:52 PM IST

ಬೆಂಗಳೂರು : ವಯಸ್ಸಿನ ಕುರಿತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಪರಸ್ಪರ ಕಾಲೆಳೆದುಕೊಂಡ ಘಟನೆ ವಿಧಾನಸಭೆಯಲ್ಲಿ ಗುರುವಾರ ನಡೆಯಿತು. ಸಿದ್ದರಾಮಯ್ಯ ಸೇರಿದಂತೆ ಜನ್ಮದಿನಾಂಕ ತಿಳಿಯದ ಶಾಸಕರ ಜನ್ಮ ದಿನಾಂಕ ಹಾಗೂ ನಿಜವಾದ ವಯಸ್ಸನ್ನು ಅರಿಯಲು ವಿಶೇಷ ಆಯೋಗ ರಚನೆ ಮಾಡಿ ವರದಿ ತರಿಸುವ ಕುರಿತು ಸ್ವಾರಸ್ಯಕರ ಚರ್ಚೆಗೆ ನಾಂದಿಯಾಯಿತು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಿಯಮ 69 ರ ಅಡಿ ಚರ್ಚೆ ಆರಂಭಿಸಿದಾಗ, ಬಿಜೆಪಿ ಸದಸ್ಯರು ‘ಏನ್ ಕ್ಲೀನ್ ಶೇವ್ ಮಾಡಿಕೊಂಡು ಬಂದಿದ್ದೀರಿ’ ಎಂದು ಕಾಲೆಳೆದರು.

ಇದಕ್ಕೆ ಸಿದ್ದರಾಮಯ್ಯ, ನನಗೆ 75 ವರ್ಷ ವಯಸ್ಸಾಗಿದೆ. ಆ ರೀತಿ ಕಾಣಬಾರದು ಎಂದು ಈ ರೀತಿ ಬಂದಿದ್ದೇನೆ ಎಂದು ನಗುತ್ತಾ ಉತ್ತರಿಸಿದರು. ಇದಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ, ನೀವು 75 ವರ್ಷದ ಥರ ಕಾಣುವುದಿಲ್ಲ ಬಿಡಿ ಎಂದು ಕಾಲೆಳೆದರು. ಈ ವೇಳೆ ಸಿದ್ದರಾಮಯ್ಯ, ನಿಜವಾಗಿ ಹೇಳಬೇಕೆಂದರೆ ನನಗೆ ನನ್ನ ಹುಟ್ಟಿದ ದಿನಾಂಕ ಗೊತ್ತಿಲ್ಲ. ನಮ್ಮ ಅಪ್ಪ-ಅಮ್ಮ ಹೆಬ್ಬೆಟ್ಟುಗಳು ಅವರು ಬರೆದಿಟ್ಟಿಲ್ಲ. ಹೀಗಾಗಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳಲು ಹೋಗುವುದಿಲ್ಲ. ನಾನು 5ನೇ ತರಗತಿಗೆ ನೇರವಾಗಿ ದಾಖಲಾಗಿದ್ದೆ. ಆಗ ನಮ್ಮ ಮೇಷ್ಟ್ರು 3-8-1947 ಎಂದು ದಿನಾಂಕ ಬರೆದುಕೊಂಡಿದ್ದರು. ಅದರ ಪ್ರಕಾರ ನನಗೆ 75 ವರ್ಷ ವಯಸ್ಸಾಗಿದೆ. ನೀವು 60 ವರ್ಷ ಎಂದರೂ ಪರವಾಗಿಲ್ಲ ಎಂದು ಹಾಸ್ಯಚಟಾಕಿ ಹಾರಿಸಿದರು.

ಮಧ್ಯೆ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಇಲ್ಲಿ ತುಂಬಾ ಸದಸ್ಯರದ್ದು ಇದೇ ಸಮಸ್ಯೆ ಇದೆ. ಇಂತಹ ಪ್ರಕರಣಗಳಲ್ಲಿ ನಿಜವಾದ ಹುಟ್ಟಿದ ದಿನಾಂಕ ವಯಸ್ಸು ತಿಳಿದುಕೊಳ್ಳಲು ನಾನು ಈ ಕುರ್ಚಿಯಲ್ಲಿ ಕುಳಿತು ಆಯೋಗ ರಚನೆ ಮಾಡಲು ಸೂಚಿಸಬೇಕಾಗುತ್ತದೆ. ವರದಿ ಆಧಾರದ ಮೇಲೆ ಮುಂದಿನದ್ದು ನಿರ್ಧಾರ ಮಾಡಬಹುದು’ ಎಂದು ಹಾಸ್ಯಚಟಾಕಿ ಸಿಡಿಸಿದರು.

ವಯಸ್ಸಿನ ಬಗ್ಗೆ ಸದನದಲ್ಲಿ ಸದಸ್ಯರ ಚರ್ಚೆ

ಇದನ್ನೂ ಓದಿ: ಮೇಕೆದಾಟು: ಕಾಲಹರಣ ಮಾಡದೇ ಅರಣ್ಯ, ಪರಿಸರ ಇಲಾಖೆ ಒಪ್ಪಿಸಿ- ಜೆಡಿಎಸ್‌

ವ್ಯಾಕರಣ ಜ್ಞಾನ : ಸಿದ್ದರಾಮಯ್ಯ ಶಾಲಾ ಶಿಕ್ಷಣದ ಬಗ್ಗೆ ಮಾತನಾಡುವಾಗ ಸ್ಪೀಕರ್ ಕಾಗೇರಿ, ಕೃಷ್ಣಬೈರೇಗೌಡ ಸೇರಿದಂತೆ ಹಲವರು ಅವರ ವ್ಯಾಕರಣ ಜ್ಞಾನ, ಕನ್ನಡದ ಹಾಗೂ ಹಣಕಾಸು ಇಲಾಖೆ ಬಗ್ಗೆ ಇರುವ ಪಟ್ಟಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಇದಕ್ಕೆ ಸಿದ್ದರಾಮಯ್ಯ, ನನ್ನ ಕನ್ನಡ ವ್ಯಾಕರಣ ಕಲಿಕೆಗೆ ಕಾರಣ ನಮ್ಮ ಹೆಸ್ಕೂಲ್ ಮೇಷ್ಟ್ರು. ನಾನು ಮೈಸೂರಿನ ವಿದ್ಯಾವರ್ಧಕ ಸಂಘ ಶಾಲೆಯಲ್ಲಿ ಓದುತ್ತಿದ್ದಾಗ ಮೇಷ್ಟ್ರು ಹೇಳಿಕೊಟ್ಟಿರುವ ಪಾಠದಿಂದ ನಾವು ಏನನ್ನೂ ಮರೆತಿಲ್ಲ. ನನಗೆ ಪಾಠ ಹೇಳಿಕೊಟ್ಟಿರುವ ಮೇಷ್ಟ್ರ ಹೆಸರು ಈಶ್ವರಾಚಾರಿ ಎಂದು ತುಂಬಾ ಹೊತ್ತು ನೆನಪಿಸಿಕೊಂಡು ಹೇಳಿದರು. ಈ ವೇಳೆ ಈಶ್ವರಪ್ಪ ಅವರ ಕಡೆ ಕೈ ತೋರಿಸಿ ಎಲ್ಲರೂ ನಕ್ಕಾಗ, ‘ಏಯ್ ನೀನ್​ ಅಲ್ಲಪ್ಪಾ. ಅವರು ಹೆಸರು ಈಶ್ವರಾಚಾರಿ ಅವರು ಆಚಾರ್ರು’ ಎಂದು ಸಿದ್ದರಾಮಯ್ಯ ಹೇಳಿದಾಗ ಸದನ ನಗೆಗಡಲ್ಲಿ ತೇಲಿತು.

‘ಪ್ರಿಯಾಂಕ್ ಖರ್ಗೆ ಮೇಲೆ ಇರುವ ಪ್ರೀತಿ ನನ್ನ ಮೇಲೆ ಪ್ರೀತಿ ಏಕಿಲ್ಲ?’ : ಬಿಜೆಪಿ ಸದಸ್ಯ ಎ.ಎಸ್. ಪಾಟೀಲ್ ನಡಹಳ್ಳಿ ಹೇಳಿಕೆಯು ಸದನದಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ಇದೇ ವೇಳೆ ‘ಕಾಂಗ್ರೆಸ್‌ನಲ್ಲಿದ್ದಾಗ ಪ್ರೌಡ್ ಆಫ್ ಸಿದ್ದರಾಮಯ್ಯ ಮ್ಯಾನ್ ಆಗಿದ್ದೆ’ ಎಂದು ಹೊಗಳಿದ ಪ್ರಸಂಗವೂ ನಡೆಯಿತು. ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಮಾತನಾಡಿದ ಬಳಿಕ ನಡಹಳ್ಳಿ ಸಹ ಮಾತನಾಡಲು ಮುಂದಾದರು. ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸುಮ್ಮನಾಗುವಂತೆ ಸೂಚಿಸಿದರು. ಆಗ ನಡಹಳ್ಳಿ ಅವರು, ಪ್ರಿಯಾಂಕ್ ಖರ್ಗೆ ಮೇಲೆ ಇರುವ ಪ್ರೀತಿ ನನ್ನ ಮೇಲೆ ಏಕಿಲ್ಲ ಎಂದು ಕಿಚಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ‘ನಿನ್ನ ಮೇಲೆ ಪ್ರೀತಿ ಇರುವುದರಿಂದಲೇ ನೀನು ನನ್ನನ್ನು ಬಿಟ್ಟು ಅಲ್ಲಿಗೆ ಹೋಗಿದ್ದು ಎಂದು ಕಾಲೆಳೆದರು. ಪ್ರತಿಯಾಗಿ ನಡಹಳ್ಳಿ, ಯಾರ್ಯಾರನ್ನು ಇಲ್ಲಿಗೆ ಕಳಿಸಿದ್ದೀರಿ, ಅವರನ್ನು ಮಂತ್ರಿಗಳನ್ನಾಗಿ ಮಾಡಿದ್ರಿ. ನನ್ನನ್ನು ಏಕೆ ಮಂತ್ರಿ ಮಾಡಿಲ್ಲ ಎಂದು ರೇಗಿಸಿದರು. ಕಾಂಗ್ರೆಸ್ ಅವಧಿಯಲ್ಲಿ ಸಚಿವರನ್ನಾಗಿ ಮಾಡಲಿಲ್ಲ ಎಂದರು ಎಂದು ಭಾವಿಸಿದ ಸಿದ್ದರಾಮಯ್ಯ, ನಮ್ಮಲ್ಲಿ 125 ಶಾಸಕರಿದ್ದರು. ಎಲ್ಲರನ್ನು ಮಂತ್ರಿ ಮಾಡಲು ಆಗ್ತಿತ್ತಾ? ನಾನು ನಿಮ್ಮನ್ನು ಮಂತ್ರಿ ಮಾಡಿಲ್ಲ ಎಂದು ಅಲ್ಲಿಗೆ (ಬಿಜೆಪಿ) ಹೊರಟು ಹೋದಿರಿ. ಆದರೆ, ಬಿಜೆಪಿಯಲ್ಲಿ ಮಾಡಿದ್ರಾ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನಡಹಳ್ಳಿ, ಪರವಾಗಿಲ್ಲ, ನಾನು ಸಂತೋಷವಾಗಿದ್ದೇನೆ. ಐ ಆ್ಯಮ್ ಪ್ರೌಡ್ ಆಫ್​ ಬಿಜೆಪಿ ಮ್ಯಾನ್ ಅಂದ್ರು. ಓ ಹೋ ಹೋ ನಮ್ಮಲ್ಲಿದ್ದಾಗ ಇದೇ ಹೇಳುತ್ತಿದ್ದದ್ದು.. ಐ ಆ್ಯಮ್​ ಪ್ರೌಡ್ ಆಫ್ ಜೆಡಿಎಸ್, ಪ್ರೌಡ್ ಆಫ್ ಕಾಂಗ್ರೆಸ್ ಎಂಎಲ್ ಎ ಎಂದು ಹೇಳುತ್ತಿದ್ದರು ಎಂದು ಸಿದ್ದರಾಮಯ್ಯ ಕಿಚಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.