ETV Bharat / state

ದುಬೈನಲ್ಲಿ ಡಿಕೆಶಿ ವಿಶ್ರಾಂತಿ​: ಭಾವಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬ್ಯುಸಿ - ಡಾ ಬಿ ಆರ್ ಅಂಬೇಡ್ಕರ್ ಸಮುದಾಯ ಭವನ

ಪುತ್ರ ಡಾ ಯತೀಂದ್ರ ಪ್ರತಿನಿಧಿಸುವ ವರುಣಾ ಬಿಟ್ಟರೆ ಸಿದ್ದರಾಮಯ್ಯಗೆ ಗೆಲ್ಲುವ ಭರವಸೆ ನೀಡುವ ಯಾವೊಂದು ಕ್ಷೇತ್ರವೂ ಕಾಣಿಸುತ್ತಿಲ್ಲ. ಇತ್ತೀಚೆಗಷ್ಟೇ ಕೋಲಾರದಿಂದ ಕಣಕ್ಕಿಳಿಯಲು ಇಚ್ಛಿಸಿದ್ದ ಸಿದ್ದರಾಮಯ್ಯ ಕ್ಷೇತ್ರವನ್ನು ಸೂಚಿಸದೇ ಮುಂದಿನ ವಿಧಾನಸಭೆ ಚುನಾವಣೆಗೆ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದೀಗ ಕ್ಷೇತ್ರ ಹುಡುಕಾಟದಲ್ಲಿ ಬೇಸತ್ತಿರುವ ಅವರು ಮೈಸೂರಿನ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದೆ.

ದುಬೈನಲ್ಲಿ ಜಾಲಿ ಮೂಡಲ್ಲಿ ಡಿಕೆಶಿ
ದುಬೈನಲ್ಲಿ ಜಾಲಿ ಮೂಡಲ್ಲಿ ಡಿಕೆಶಿ
author img

By

Published : Dec 7, 2022, 5:23 PM IST

Updated : Dec 7, 2022, 5:52 PM IST

ಬೆಂಗಳೂರು: ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ದುಬೈನಲ್ಲಿ ವಿಶ್ರಾಂತಿ ದಿನಗಳನ್ನು ಅನುಭವಿಸುತ್ತಿದ್ದಾರೆ. ಇನ್ನೊಂದೆಡೆ ಕ್ಷೇತ್ರದ ಹುಡುಕಾಟದಲ್ಲಿ ಸಾಕಷ್ಟು ತಲೆ ಕೆಡಿಸಿಕೊಂಡಿರುವ ಸಿದ್ದರಾಮಯ್ಯ ಮೈಸೂರಿನತ್ತ ನಾಳೆ ಪ್ರಯಾಣ ಬೆಳೆಸಲಿದ್ದಾರೆ.

2023ರ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಪಾಲಿಗೆ ನಿರ್ಣಾಯಕ. ಇಡೀ ದೇಶದ ಪ್ರಗತಿಗೆ ಕರ್ನಾಟಕದ ಗೆಲುವು ಆಕ್ಸಿಜನ್ ಆಗಲಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ತಿಳಿಸಿದ್ದಾರೆ. ಇದು ಇಲ್ಲಿನ ನಾಯಕರಿಗೆ ಸವಾಲಿದೆ. ಮುಂದಿನ ಚುನಾವಣಾ ಸಿದ್ಧತೆಯಲ್ಲಿ ಇವರು ತೊಡಗಿಕೊಳ್ಳಬೇಕಿದ್ದು, ಕೆಲ ದಿನ ಒಂದಿಷ್ಟು ವಿಶ್ರಾಂತಿ ಪಡೆಯುವ ಜತೆಗೆ ಜಾಲಿಯಾಗಿ ಕೆಲ ದಿನ ಕಳೆದು ಬರಲು ಡಿಕೆಶಿ ದುಬೈಗೆ ತೆರಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಆಗಲೇ ಎರಡು ದಿನ ಕಳೆದಿದ್ದು, ಅಲ್ಲಿನ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿ ಸಂತಸದ ಕ್ಷಣ ಕಳೆಯುತ್ತಿದ್ದಾರೆ. ಇವರಿಗೆ ಶಾಸಕ ಎನ್​ ಎ ಹ್ಯಾರಿಸ್ ಸಾಥ್​​​ ನೀಡಿದ್ದಾರೆ. ಡಿಸೆಂಬರ್ ‌8 ಕ್ಕೆ ವಾಪಸ್ ಆಗಲಿರುವ ಡಿಕೆಶಿ, ನಂತರ ಸಕ್ರಿಯವಾಗಿ ಪಕ್ಷ ಸಂಘಟನೆ, ಬಲವರ್ಧನೆ, ರಾಜ್ಯ ಪ್ರವಾಸ, ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುವ ಕಾರ್ಯ ಆರಂಭಿಸಲಿದ್ದಾರೆ. ಬೆಂಗಳೂರಿಗೆ ಬಂದ ತಕ್ಷಣ ಮತ್ತೊಮ್ಮೆ ಪಕ್ಷ ಸಂಘಟನೆ ಚುರುಕು ನೀಡಲಿರುವ ಡಿ. ಕೆ ಶಿವಕುಮಾರ್ ಎಲ್ಲರನ್ನೂ ಒಗ್ಗಟ್ಟಿನಿಂದ ಕರೆದೊಯ್ಯುವ ಸಂಕಲ್ಪ ತೊಟ್ಟಿದ್ದಾಗಿ ಈಗಾಗಲೇ ಹೇಳಿಕೊಂಡಿದ್ದಾರೆ.

ಕ್ಷೇತ್ರ ಸಿಗದೇ ಬಳಲಿದ ಸಿದ್ದರಾಮಯ್ಯ: ಪುತ್ರ ಡಾ. ಯತೀಂದ್ರ ಪ್ರತಿನಿಧಿಸುವ ವರುಣಾ ಬಿಟ್ಟರೆ ಸಿದ್ದರಾಮಯ್ಯಗೆ ಗೆಲ್ಲುವ ಭರವಸೆ ನೀಡುವ ಯಾವೊಂದು ಕ್ಷೇತ್ರವೂ ಕಾಣಿಸುತ್ತಿಲ್ಲ. ಇತ್ತೀಚೆಗಷ್ಟೇ ಕೋಲಾರದಿಂದ ಕಣಕ್ಕಿಳಿಯಲು ಇಚ್ಛಿಸಿದ್ದ ಸಿದ್ದರಾಮಯ್ಯ ಕ್ಷೇತ್ರವನ್ನು ಸೂಚಿಸದೇ ಮುಂದಿನ ವಿಧಾನಸಭೆ ಚುನಾವಣೆಗೆ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದೀಗ ಕ್ಷೇತ್ರ ಹುಡುಕಾಟದಲ್ಲಿ ಬೇಸತ್ತಿರುವ ಅವರು ಮೈಸೂರಿನ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದೆ.

ದುಬೈಗೆ ತೆರಳಿರುವ ಡಿ ಕೆ ಶಿವಕುಮಾರ್
ದುಬೈಗೆ ತೆರಳಿರುವ ಡಿ ಕೆ ಶಿವಕುಮಾರ್

ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದರಾಮಯ್ಯ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಈ ನಿಟ್ಟಿನಲ್ಲಿ ಎರಡು ದಿನ ಮೈಸೂರು ಜಿಲ್ಲೆಗೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಡಿಸೆಂಬರ್ 8 ಮತ್ತು 9 ರಂದು ಪ್ರವಾಸ ಕೈಗೊಳ್ಳಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ಜತೆಗೆ ವಿಶ್ರಾಂತಿ ಮೊರೆ ಹೋಗಲಿದ್ದಾರೆ.

ನೂತನ ಹಾಲಿನ ಶಿಥಿಲೀಕರಣ ಘಟಕ ಉದ್ಘಾಟನೆ: ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಸಿದ್ದರಾಮಯ್ಯ ಭಗೀರಥ ಭವನ, ಕನಕ ಭವನ ಉದ್ಘಾಟಿಸಲಿದ್ದಾರೆ. ತದನಂತರ ಒಂದು ಆರೋಗ್ಯ ಕೇಂದ್ರಕ್ಕೆ ಚಾಲನೆ ನೀಡಿ ಮೈಸೂರಿನ ಸುತ್ತೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಾರನೇ ದಿನ ಮರಳೂರು-ಗೊದ್ದನಪುರ ಸೇತುವೆ ಉದ್ಘಾಟಿಸಲಿದ್ದಾರೆ. ಆಮೇಲೆ ಸಿದ್ದರಾಮನ ಹುಂಡಿಗೆ ಭೇಟಿ ನೀಡಿ ನೂತನ ಹಾಲಿನ ಶಿಥಿಲೀಕರಣ ಘಟಕ ಉದ್ಘಾಟಿಸಲಿದ್ದಾರೆ.

ಟಿ.ನರಸೀಪುರ ತಾಲೂಕಿನಲ್ಲಿ ಡಾ ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ ಮಾಡುವ ಸಿದ್ದರಾಮಯ್ಯ ರಾತ್ರಿ ಬೆಂಗಳೂರಿಗೆ ವಾಪಾಸ್ಸಾಗಲಿದ್ದಾರೆ. ಈ ಸಾರಿಯ ಎರಡು ದಿನದ ಭೇಟಿಯಲ್ಲಿ ಬಹುತೇಕ ವರುಣಾ ಕ್ಷೇತ್ರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಓದಿ: ಭೂ ಹಗರಣ ಸಂಬಂಧ ಸಿದ್ದರಾಮಯ್ಯ ನೇರ ಉತ್ತರ ನೀಡಲಿ: ಎನ್ ಆರ್ ರಮೇಶ್

Last Updated : Dec 7, 2022, 5:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.