ನವದೆಹಲಿ: ರಾಜ್ಯದ ಮುಖ್ಯಮಂತ್ರಿ ಆಯ್ಕೆಯು ಕಗ್ಗಂಟಾಗಿಯೇ ಉಳಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೊರತುಪಡಿಸಿ ಆರೋಗ್ಯದ ಸಮಸ್ಯೆ ಹಿನ್ನೆಲೆ ದೆಹಲಿಗೆ ತೆರಳಿಲಿಲ್ಲ. ಆದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಸುರೇಶ್ ರಾಷ್ಟ್ರ ನಾಯಕ ಕರೆಯ ಮೇರೆಗೆ ದೆಹಲಿ ತಲುಪಿದ್ದಾರೆ.
ಹೊಸ ಕರ್ನಾಟಕ ಸರ್ಕಾರ ಹೇಗಿರುತ್ತದೆ ಹಾಗೂ ಸಿಎಂ ಘೋಷಣೆ ಯಾವಾಗ ಆಗುತ್ತದೆ ಎಂದು ಈ ವೇಳೆ ಮಾಧ್ಯಮದವರು ಪ್ರಶ್ನೆಗೆ ಕರ್ನಾಟಕದ ಮಾಜಿ ಸಿಎಂ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು, "ಕಾದು ನೋಡಿ, ಮುಂದಿನದು ನನಗೆ ಗೊತ್ತಿಲ್ಲ. ಹೈಕಮಾಂಡ್ ಸೂಚನೆಯ ಮೇರೆಗೆ ಇಲ್ಲಿಗೆ ಬಂದಿದ್ದೇನೆ. ಸಿಎಂ ಘೋಷಣೆ ವಿಚಾರದ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ" ಎಂದರು.
-
#WATCH |Delhi:..."Let's wait and see...I don't know...": Former Karnataka CM & Congress leader Siddaramaiah on being asked about how will the new Karnataka govt look like and when will the CM announcement happen pic.twitter.com/ET24o4PuIx
— ANI (@ANI) May 15, 2023 " class="align-text-top noRightClick twitterSection" data="
">#WATCH |Delhi:..."Let's wait and see...I don't know...": Former Karnataka CM & Congress leader Siddaramaiah on being asked about how will the new Karnataka govt look like and when will the CM announcement happen pic.twitter.com/ET24o4PuIx
— ANI (@ANI) May 15, 2023#WATCH |Delhi:..."Let's wait and see...I don't know...": Former Karnataka CM & Congress leader Siddaramaiah on being asked about how will the new Karnataka govt look like and when will the CM announcement happen pic.twitter.com/ET24o4PuIx
— ANI (@ANI) May 15, 2023
"6.5 ಕೋಟಿ ಕನ್ನಡಿಗರಿಗೆ ಮಾಡಿದ ವಾಗ್ದಾನಕ್ಕೆ ಕಾಂಗ್ರೆಸ್ ಪಕ್ಷವು ಬದ್ಧವಾಗಿದೆ. ವೀಕ್ಷಕರು ತಮ್ಮ ಲಿಖಿತ ವರದಿಯನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಿದ್ದಾರೆ. ಅವರು ವರದಿಯನ್ನು ಪರಿಶೀಲಿಸುತ್ತಾರೆ, ಬಳಿಕ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸುತ್ತಾರೆ. ಇತರ ಕೇಂದ್ರ ನಾಯಕರು ಮತ್ತು ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಾರೆ'' ಎಂದು ಇಲ್ಲಿ ಸುದ್ದಿರೊಂದಿಗೆ ಸೋಮವಾರ ರಾತ್ರಿ ಎಐಸಿಸಿ ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರತಿಕ್ರಿಯಿಸಿದರು. ಇನ್ನೂ ದೆಹಲಿಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಆಗಮಿಸಿದರು.
24 ಗಂಟೆಗಳಲ್ಲಿ ಮುಂದಿನ ಸಿಎಂ ಹೆಸರು ಪ್ರಕಟ: ಕರ್ನಾಟಕ ಕಾಂಗ್ರೆಸ್‌ನ ಕೇಂದ್ರ ವೀಕ್ಷಕರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸಿದ್ದು, ಅಂತಿಮ ನಿರ್ಧಾರಕ್ಕೆ ಬರಲು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಂಪರ್ಕಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಸೋಮವಾರ ತಿಳಿಸಿವೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಮುಂದಿನ ಸಿಎಂ ಹೆಸರನ್ನು ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
-
#WATCH | Delhi:..." Congress party will stand up to the pledge made to 6.5 crore Kannadigas...the observers have submitted their written report to the Congress President...he will look into the report, will hold deliberations with state leaders & other central leaders and will… pic.twitter.com/mWUcQGNetc
— ANI (@ANI) May 15, 2023 " class="align-text-top noRightClick twitterSection" data="
">#WATCH | Delhi:..." Congress party will stand up to the pledge made to 6.5 crore Kannadigas...the observers have submitted their written report to the Congress President...he will look into the report, will hold deliberations with state leaders & other central leaders and will… pic.twitter.com/mWUcQGNetc
— ANI (@ANI) May 15, 2023#WATCH | Delhi:..." Congress party will stand up to the pledge made to 6.5 crore Kannadigas...the observers have submitted their written report to the Congress President...he will look into the report, will hold deliberations with state leaders & other central leaders and will… pic.twitter.com/mWUcQGNetc
— ANI (@ANI) May 15, 2023
ಡಿಕೆ ಶಿವಕುಮಾರ್ ಹೇಳಿದ್ದೇನು?: ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು, ಹೊಟ್ಟೆಯ ಸೋಂಕು ಇದೆ. ಇದರಿಂದ ದೆಹಲಿಗೆ ಪ್ರಯಾಣಿಸುವುದಿಲ್ಲ. 135 ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ, ನನ್ನ ಬಳಿ ಯಾವುದೇ ಶಾಸಕರಿಲ್ಲ, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇನೆ ಎಂದು ಶಿವಕುಮಾರ್ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
-
#WATCH | ..."I'm really happy that today Mamata Banerjee has come out with some statement & various other leaders as well...it is good for the opposition": DK Shivakumar, Karnataka Congress President pic.twitter.com/MpBUabbeJ0
— ANI (@ANI) May 15, 2023 " class="align-text-top noRightClick twitterSection" data="
">#WATCH | ..."I'm really happy that today Mamata Banerjee has come out with some statement & various other leaders as well...it is good for the opposition": DK Shivakumar, Karnataka Congress President pic.twitter.com/MpBUabbeJ0
— ANI (@ANI) May 15, 2023#WATCH | ..."I'm really happy that today Mamata Banerjee has come out with some statement & various other leaders as well...it is good for the opposition": DK Shivakumar, Karnataka Congress President pic.twitter.com/MpBUabbeJ0
— ANI (@ANI) May 15, 2023
ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರೊಂದಿಗೆ ಮಾತನಾಡಲು ಸುಶೀಲ್ ಕುಮಾರ್ ಶಿಂಧೆ, ದೀಪಕ್ ಬವಾರಿಯಾ ಮತ್ತು ಭನ್ವರ್ ಜಿತೇಂದ್ರ ಸಿಂಗ್ ಎಂಬ ಮೂವರು ವೀಕ್ಷಕರನ್ನು ಕಾಂಗ್ರೆಸ್ ನೇಮಿಸಿತ್ತು. ಭಾನುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಕರ್ನಾಟಕದ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ನಿರ್ಧರಿಸಲು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ನೀಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು.
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರಿಗೆ ಆರೋಗ್ಯ ಸಮಸ್ಯೆ; ವಿಶ್ರಾಂತಿಗೆ ಸಲಹೆ ನೀಡಿದ ವೈದ್ಯರು