ETV Bharat / state

ನನ್ನ ಡಿಸಿಎಂ ಮಾಡಲು ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್​ ನಿರ್ಧಾರ ತೆಗೆದುಕೊಳ್ತಾರೆ: ಶ್ರೀರಾಮುಲು

ನನ್ನನ್ನು ಡಿಸಿಎಂ ಮಾಡುವ ವಿಚಾರವಾಗಿ ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್​ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಶ್ರೀರಾಮುಲು ಹೇಳಿದರು.

shriramul
ಸಚಿವ ಶ್ರೀರಾಮುಲು
author img

By

Published : Jun 17, 2021, 4:06 PM IST

ಬೆಂಗಳೂರು: ನಾಯಕತ್ವ ಬದಲಾವಣೆ ಎಂಬ ಚರ್ಚೆ ನಡೆಯುತ್ತಿರುವಾಗ ಡಿಸಿಎಂ ಹುದ್ದೆ ಮೇಲೆ ಸಚಿವ ಶ್ರೀರಾಮುಲುಗೆ ಆಸೆ ಚಿಗುರೊಡೆದಿದೆ. ನನ್ನನ್ನು ಡಿಸಿಎಂ ಮಾಡುವ ವಿಚಾರವಾಗಿ ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್​ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನಂತರ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಸಚಿವ ಶ್ರೀರಾಮುಲು ಪ್ರತಿಕ್ರಿಯೆ

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ನಾವು ಪಕ್ಷದ ಬಗ್ಗೆ ನಿಷ್ಠೆ ಇಟ್ಟವರು. ನಾಯಕತ್ವ ವಿಚಾರವಾಗಿ, ಹೆಚ್​ ವಿಶ್ವನಾಥ್ ಹೇಳಿಕೆ ಅವರ ವೈಯುಕ್ತಿಕ. ಅದರ ಬಗ್ಗೆ ನಾನು ಮಾತನಾಡಲ್ಲ. ಅಧ್ಯಕ್ಷ ಕಟೀಲ್ ತೆಗೆದುಕೊಳ್ಳೋ ತೀರ್ಮಾನದ ಮೇಲೆ ನಡೆಯೋ ಮಂದಿ ನಾವು ಎಂದರು.

ಕಾಂಗ್ರೆಸ್ ನಾಯಕರಿಗೆ ಟಾಂಗ್:

2023ರಲ್ಲಿ ಜನರ ಮತ ಸೆಳೆಯಲು ಏನು ಮಾಡಬೇಕು ಎನ್ನುವ ವಿಚಾರವಾಗಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಘನತೆಗೆ ತಕ್ಕಂತೆ ಮಾತಾಡ್ತಾರೆ. ಸಿದ್ದರಾಮಯ್ಯ ಬಾಹುಬಲಿ ರೀತಿ ಮುಖ್ಯಮಂತ್ರಿ ಆಸೆಯಿಂದ ಇದ್ದಾರೆ. ಆದ್ರೆ ಕಟ್ಟಪ್ಪನ ರೀತಿ ಜನ ಇದ್ದಾರೆ ಎಂದರು. ಬಿಜೆಪಿ ಜನಪರ ಕಾರ್ಯಗಳನ್ನು ಗ್ರಾಮ ಪಂಚಾಯತ್​ ವ್ಯಾಪ್ತಿವರೆಗೆ ತಲುಪಬೇಕು ಎಂದು ಅರುಣ್ ಸಿಂಗ್ ಜತೆ ಚರ್ಚೆ ನಡೆಸಿದೆ ಎಂದು ಶ್ರೀರಾಮುಲು ಹೇಳಿದರು.

ಇದನ್ನೂ ಓದಿ: ಅರುಣ್ ಸಿಂಗ್ ಭೇಟಿ ಬೆನ್ನಲ್ಲೇ ಬಿಎಸ್​ವೈ ವಿರುದ್ಧ ಹೆಚ್​ ವಿಶ್ವನಾಥ್​​​​ ಭ್ರಷ್ಟಾಚಾರ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.