ETV Bharat / state

SSLC ಪರೀಕ್ಷೆಗೆ ದಿನಗಣನೆ: ಮಕ್ಕಳಿಗೆ ಶುಭ ಕೋರಿ, ಕಿವಿ ಮಾತು ಹೇಳಿದ ನಟ-ನಟಿಯರು

ಎಸ್ಸಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಕುರಿತು ಮಕ್ಕಳು ಹಾಗು ಪೋಷಕರಲ್ಲಿ ಧೈರ್ಯ ಹಾಗೂ ವಿಶ್ವಾಸ ಹೆಚ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕಿರು ಚಿತ್ರವೊಂದನ್ನು ಬಿಡುಗಡೆ ಮಾಡಿದೆ.

Short film release
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕಿರು ಚಿತ್ರ ಬಿಡುಗಡೆ
author img

By

Published : Jul 14, 2021, 8:12 PM IST

ಬೆಂಗಳೂರು: ಭವಿಷ್ಯದ ಪ್ರಮುಖ ಘಟ್ಟ ಎಂದು ಪರಿಗಣಿಸುವ ಎಸ್ಎಸ್ಎಲ್​​ಸಿ ಪರೀಕ್ಷೆ ಜುಲೈ 19 ಹಾಗೂ 22 ರಂದು ನಡೆಯುತ್ತಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷಾ ಮಾದರಿ ಬದಲಾಗಿದ್ದು, 6 ದಿನಗಳ ಪರೀಕ್ಷಾ ದಿನವನ್ನು 2 ದಿನಗಳಿಗೆ ಇಳಿಸಲಾಗಿದೆ.

ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಸಿನಿಮಾ ನಟ-ನಟಿಯರು ಮುಂದೆ ಬಂದಿದ್ದಾರೆ.‌ ಆಲ್ ದಿ ಬೆಸ್ಟ್.. ಬನ್ನಿ ಮಕ್ಕಳೇ ನಿಮಗಾಗಿ ಎಲ್ಲ ಸಿದ್ಧತೆಯಾಗಿದೆ. ಧೈರ್ಯವಾಗಿ ಪರೀಕ್ಷೆ ಬರೆಯಿರಿ.. ಎಂದು ಹಾರೈಸುತ್ತಿದ್ದಾರೆ‌‌.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕಿರು ಚಿತ್ರ ಬಿಡುಗಡೆ

ಹಿರಿಯ ನಟಿ ಅನು ಪ್ರಭಾಕರ್, ನಟ ಕಿರಣ್ ಶ್ರೀನಿವಾಸ್, ನಟ ದೇವ್ ದೇವಯ್ಯ, ನಟಿ ಹಿತಾ ಚಂದ್ರಶೇಖರ್ ಹಾಗೂ ನಟಿ ಸಂಯುಕ್ತಾ ಹೊರನಾಡು ಸೇರಿದಂತೆ ಮತ್ತಿತರ ತಾರೆಯರು ಪರೀಕ್ಷಾ ಕೇಂದ್ರದ ಮುಂದೆ ನಿಂತು ಮಕ್ಕಳನ್ನು ಸ್ವಾಗತಿಸುತ್ತಾ ಪರೀಕ್ಷಾ ಕೇಂದ್ರದಲ್ಲಿ ಕೈಗೊಂಡಿರುವ ಸಿದ್ಧತೆಯನ್ನು ವಿವರಿಸಿದ್ದಾರೆ.

ಮುಂದಿನ ಜೀವನ ರೂಪಿಸಿಕೊಳ್ಳಲು ಪರೀಕ್ಷೆ ಮುಖ್ಯ:

ವಿದ್ಯಾರ್ಥಿ ಜೀವನದಲ್ಲಿ ಎಸ್ಎಸ್ಎಲ್​​ಸಿ ಪ್ರಮುಖ ಹಂತ. ಇದು ನಿಮ್ಮ ಜೀವನವನ್ನು ರೂಪಿಸಿಕೊಳ್ಳುವ ಪ್ರಮುಖ ಘಟ್ಟವಾದ್ದರಿಂದ ಈ ಪರೀಕ್ಷೆಯನ್ನು ಎದುರಿಸುವುದು ನಿಜಕ್ಕೂ ಒಂದು ಉತ್ತಮ ಸಂದರ್ಭ ಎಂದು ನಟಿ ಅನು ಪ್ರಭಾಕರ್ ಹೇಳಿದ್ದಾರೆ.

ಆರೋಗ್ಯದ ಬಗ್ಗೆ ಗಮನ ಇರಲಿ ಎಂದು ಕಿರುತೆರೆ ನಟ ದೇವ್ ದೇವಯ್ಯ ಸಲಹೆ ನೀಡಿದ್ದಾರೆ. ಇದರ ಜೊತೆಗೆ ಪರೀಕ್ಷಾ ಕೇಂದ್ರ ಹೇಗೆ ಇರುತ್ತೆ? ಯಾವ ರೀತಿ ಸ್ಯಾನಿಟೈಸ್ ಮಾಡಲಾಗುತ್ತೆ, ಶೌಚಾಲಯ ಶುಚಿತ್ವ, ಪರೀಕ್ಷಾ ಕೇಂದ್ರಕ್ಕೆ ಬಂದಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹೇಗೆ? ಎಂಬುದರ ಕುರಿತು ತಿಳಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳೇ ಬನ್ನಿ, ಪರೀಕ್ಷೆ ಬರೆಯಿರಿ ; ಭಯ ಬೇಡ, ನಾವು ನಿಮ್ಮೊಂದಿಗೆ ಇದ್ದೇವೆ.. ಶಿಕ್ಷಣ ಇಲಾಖೆ ಅಭಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.